ಅಕ್ರಮ ಮರಳು ಸಾಗಿಸುತ್ತಿದ್ದ ಪಿಕಪ್ ವಾಹನವನ್ನು ವಶಕ್ಕೆ ಪಡೆದಿರುವ ಘಟನೆ, ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ಪಟ್ಟಣದ ವೀರಪ್ಪಗೌಡ ಸರ್ಕಲ್ ಬಳಿ ನಡೆದಿದೆ.
ಶೃಂಗೇರಿ ವ್ಯಾಪ್ತಿಯ ಕಲ್ಕಟ್ಟೆ ಸಮೀಪದಲ್ಲಿ ಮರಳು ತುಂಬಿಸಿಕೊಂಡು ಬರುತ್ತಿದ್ದ ಪಿಕಪ್ ವಾಹನವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಶೃಂಗೇರಿ ತಾಲೂಕಿನ ಭಾಗಗಳಲ್ಲಿ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ವಾಹನವನ್ನು ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದರು. ಏನು ಪ್ರಯೋಜನವಾಗುತ್ತಿಲ್ಲ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು l ತಾ. ಪಂ ತಾಂತ್ರಿಕ ಸಹಾಯಕಿ ಲೋಕಾಯುಕ್ತ ಬಲೆಗೆ
ಸೋಮವಾರ ರಾತ್ರಿ ಸುಮಾರು 11:30 ರ ವೇಳೆಯಲ್ಲಿ ಪ್ರಸಾದ್ ಎಂಬುವರಿಗೆ ಸೇರಿದ್ದ, KL 13 H2308 ಕೇರಳ ನೋಂದಣಿ ಪಿಕಪ್ ವಾಹನವನ್ನು ವಶಕ್ಕೆ ಪಡೆಯಲಾಗಿದೆ. ಈ ಕಾರ್ಯಾಚರಣೆಯನ್ನು ಶೃಂಗೇರಿ ತಾಲೂಕು ಪಿಎಸ್ಐ ಅಭಿಷೇಕ್ ನೇತೃತ್ವದಲ್ಲಿ ದಾಳಿ ನಡೆಸಿ, ವಾಹನವನ್ನು ವಶಕ್ಕೆ ಪಡೆದು ಎಫ್ ಐಆರ್ ದಾಖಲಿಸಲಾಗಿದೆ.