ಪಾವಗಡ ರಸ್ತೆಯ ರೈಲ್ವೆ ಮೇಲ್ಸೇತುವೆಗಾಗಿ ಹಲವಾರು ವರ್ಷಗಳಿಂದ ಹೋರಾಟ ಮಾಡಿಕೊಂಡು ಬರುತ್ತಿದ್ದರೂ ಸರ್ಕಾರಗಳು ನಿರ್ಲಕ್ಷ್ಯ ತೋರಿದ್ದು, ಇಲ್ಲಿನ ಸಮಸ್ಯೆಯನ್ನು ಬಗೆಹರಿಸುವ ಕ್ರಮಕ್ಕೆ ಮುಂದಾಗುತ್ತಿಲ್ಲ” ಎಂದು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯ ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ರೈತ ಸಂಘದ ಉಪಾಧ್ಯಕ್ಷ ಕೆಪಿ ಭೂತಯ್ಯ ಅಸಮಾಧಾನ ವ್ಯಕ್ತಪಡಿಸಿದರು.

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ನಗರದ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ಸಾರ್ವಜನಿಕರು, ರೈತ ಮುಖಂಡರು, ಸಂಘಟನೆಗಳ ಸಮ್ಮುಖದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಭಾಗವಹಿಸಿ ಮಾತನಾಡಿ
“ಪಾವಗಡ ರಸ್ತೆಯಲ್ಲಿನ ರೈಲ್ವೆ ಗೇಟ್ನಿಂದ ಪ್ರತಿನಿತ್ಯ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದು, ಅವಶ್ಯವಾಗಿ ರೈಲ್ವೆ ಗೇಟಿಗೆ ಮೇಲ್ಸೇತುವೆ ಬೇಕಾಗಿದೆ. ಇದರ ಅವಶ್ಯಕತೆಯನ್ನು ಮನಗಂಡು ಹಲವು ಸಂಘಟನೆಗಳು, ರೈತಸಂಘ, ಸಾರ್ವಜನಿಕರು ಗಳು ಶಾಸಕರು, ಸಚಿವರುಗಳಿಗೆ, ಮುಖ್ಯಮಂತ್ರಿಗಳಿಗೆ ಕೂಡ ಹಲವಾರು ವರ್ಷಗಳಿಂದ ಮನವಿ ಸಲ್ಲಿಸುತ್ತಿದ್ದರೂ ರಾಜಕಾರಣಿಗಳ ನಿರ್ಲಕ್ಷ ಕಾಣುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

“ಪಾವಗಡ ರಸ್ತೆಯ ರೈಲ್ವೆ ಮೇಲ್ ಸೇತುವೆ ಕಾಮಗಾರಿಯನ್ನು ಜೂನ್ 6 ರ ಒಳಗಾಗಿ ಪ್ರಾರಂಭಿಸುವ ಕೆಲಸ ಮಾಡಬೇಕು. ಇಲ್ಲವಾದಲ್ಲಿ ಅನಿರ್ದಿಷ್ಟ ಅವಧಿಯ ಪ್ರತಿಭಟನೆಯನ್ನು ನಡೆಸಬೇಕಾಗುತ್ತದೆ” ಎಂದು ಎಚ್ಚರಿಸಿದರು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಸಹಾಯಧನ, ಕೃಷಿ ಘಟಕಗಳಿಗೆ ರೈತರ ಅರ್ಜಿ ಆಹ್ವಾನ.
ಇದೇ ಸಂಧರ್ಭದಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಉಪಾಧ್ಯಕ್ಷ ರೆಡ್ಡಿಹಳ್ಳಿ ವೀರಣ್ಣ, ನಗರಸಭೆ ಸದಸ್ಯ ನೇತಾಜಿ ಪ್ರಸನ್ನ, ಅಖಂಡ ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಅಧ್ಯಕ್ಷ ಚಿಕ್ಕಣ್ಣ, ಶ್ರೀಕಂಠಮೂರ್ತಿ, ತಿಮ್ಮಣ್ಣ, ಪರೀದ್ ಖಾನ್, ಸುರೇಶ್, ಬೊಮ್ಮಯ್ಯ, ಜಡೆ ತಿಮ್ಮಣ್ಣ, ಹನುಮಂತಯ್ಯ, ಬಾಬು, ಜಯಣ್ಣ, ಬೊಮ್ಮಯ್ಯ ಹಾಗೂ ಇತರರು ಹಾಜರಿದ್ದರು.