ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘದ ದಾವಣಗೆರೆ ವಿಭಾಗ ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣನವರ ಬಸವ ಜಯಂತಿ ಮತ್ತು ವೀರಶೈವ ಲಿಂಗಾಯತ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ನವರಿಗೆ ಅಭಿನಂದನಾ ಸಮಾರಂಭವನ್ನು ದಾವಣಗೆರೆ ಕೆಎಸ್ಸಾರ್ಟಿಸಿ ಸಂಸ್ಥೆಯ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಸಮಾರಂಭದ ಸಾನಿಧ್ಯವನ್ನು ದಾವಣಗೆರೆ ವಿರಕ್ತಮಠದ ಡಾ. ಬಸವಪ್ರಭು ಶ್ರೀ ಗಳು ವಹಿಸಿಕೊಂಡು ಮಾತನಾಡಿದ ಅವರು, “ವಿರಕ್ತಮಠದಿಂದ ಬಸವ ಜಯಂತಿಯ ಅಂಗವಾಗಿ ಆಯೋಜಿಸಿದ ಬಸವ ಜ್ಯೋತಿ ಕಾರ್ಯಕ್ರಮಕ್ಕೆ ಇಲ್ಲಿನ ಸಮಾಜದ ನೌಕರರ ಸಂಘದವರು ಭಾಗವಹಿಸಿ ಸಹಕರಿಸಿದ್ದಾರೆ. ದಾವಣಗೆರೆಯಲ್ಲಿ ನಿರ್ಮಿಸಿರುವ ಈ ಸರ್ಕಾರಿ ಬಸ್ ನಿಲ್ದಾಣ ಕರ್ನಾಟಕದಲ್ಲಿ ಅತ್ಯುತ್ತಮ ನಿಲ್ದಾಣವಾಗಿದೆ” ಎಂದು ಪ್ರಶಂಸಿಸಿದರು.

“ಲಿಂಗಾಯತ ಸಮಾಜ ಇಂದು ಒಳಪಂಗಡಗಳಾಗಿ ಒಡೆದು ಸಂಕಷ್ಟದ ಸ್ಥಿತಿಯಲ್ಲಿದೆ. ಇನ್ನು ಮುಂದಾದರು ನಮ್ಮಲ್ಲಿನ ಆಂತರಿಕ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಒಟ್ಟಾಗಬೇಕು. ಇಡೀ ವೀರಶೈವ ಲಿಂಗಾಯತ ಸಮಾಜವನ್ನು ನಾಯಕರು ಮತ್ತು ಎಲ್ಲರೂ ಸೇರಿ ಮುನ್ನಡೆಸಬೇಕಾದ ಅವಶ್ಯಕತೆ ಇದೆ. ಜಾತಿ ಗಣತಿ ನಡೆಯುತ್ತಿರುವ ಈ ಸಂದರ್ಭದಲ್ಲಿ ಸಮಾಜ ಬಾಂಧವರು ಎಚ್ಚೆತ್ತು ಒಗ್ಗಟ್ಟಿನ ದೃಷ್ಟಿಯಿಂದ, ಸಮಾಜದ ಮಕ್ಕಳ ಭವಿಷ್ಯದ ಪ್ರಶ್ನೆಯಿಂದ “ವೀರಶೈವ ಲಿಂಗಾಯತ” ಎಂದು ದಾಖಲಿಸಬೇಕು” ಎಂದು ಸಮಾಜಕ್ಕೆ ಸಂದೇಶ ನೀಡಿದರು.
ಮಾಜಿ ಸಚಿವ ಎಸ್.ಎ. ರವೀಂದ್ರನಾಥ್, ಚನ್ನಗಿರಿ ಶಾಸಕ ಬಸವರಾಜ್ ವಿ. ಶಿವಗಂಗಾ, ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್, ಮಾಜಿ ವಿಧಾನಪರಿಷತ್ ಸದಸ್ಯ ಎ.ಹೆಚ್. ಶಿವಯೋಗಿಸ್ವಾಮಿ, ಮಾಜಿ ಶಾಸಕ ಟಿ. ಗುರುಸಿದ್ದನಗೌಡ್ರು, ವೀರಶೈವ ಲಿಂಗಾಯತ ಸಮಾಜ ಮುಖಂಡ ಎನ್. ಕೊಟ್ರೇಶ್, ರಾಷ್ಟ್ರೀಯ ಉಪಾಧ್ಯಕ್ಷ ರಾಜಣ್ಣ ಅಣಬೇರು, ಹುಬ್ಬಳ್ಳಿಯ ಮುಖ್ಯಯಾಂತ್ರಿಕ ಅಭಿಯಂತರ ಸಿದ್ದೇಶ್ವರ್ ಎನ್. ಹೆಬ್ಬಾಳ್, ಅರುಂಡಿ ನಾಗರಾಜ, ಕಮ್ಮತ್ತಹಳ್ಳಿ ಮಂಜುನಾಥ್, ಚಂದ್ರಶೇಖರ್ ಪೂಜಾರ್, ಅಶೋಕ್ ಗೋಪನಹಾಳ್, ದಾವಣಗೆರೆ ವಿಭಾಗೀಯ ನಿಯಂತ್ರಣಾಧಿಕಾರಿ ಕಿರಣಕುಮಾರ ಎಫ್. ಬಸಾಪುರ, ರುದ್ರೇಶ್ ಮರಿಕುಂಟೆ, ನೌಕರರ ಸಂಘದ ಪದಾಧಿಕಾರಿಗಳಾದ ಸಿಜಿ ಈಶಪ್ಪ, ಲಿಂಗೇಶ್, ರೇಣುಕಾ, ಹನುಮಂತಪ್ಪ ಜ್ಯೋತಿ, ಮಂಜುನಾಥ ಕಾಶೀಪುರ, ಚನ್ನಪ್ಪ ಶಿವಕುಮಾರ, ಸಿದ್ದಲಿಂಗಯ್ಯ ಸಾಲಿಮಠ, ಬಸವರಾಜ್ ತಾವರಗೊಂದಿ, ರಾಜೇಶ್ವರಿ, ಅನಿಲ್ ಕುಮಾರ್, ಪ್ರಶಾಂತ್, ಭೀಮರಾವ್ ಬಿರಾದಾರ್, ವನಜಾಕ್ಷಿ, ಸತೀಶ್ ಎ.ವಿ.ಪರಮೇಶ್ ಪೂಜಾರ್, ಪರಮೇಶಪ್ಪ ನಂದಿಗಾವಿ, ಮಂಜುನಾಥ ಟಿ, ವಿಶ್ವನಾಥ್,ದೇವಕ್ಕ ಇಟ್ಟಿಗಿಮಠ, ಅಣಬೇರ್ ರವಿಕುಮಾರ್ ಸೇರಿದಂತೆ ಇತರರು ಭಾಗವಹಿಸಿದ್ದರು.