ದಾವಣಗೆರೆ | ತುಂಗಾಭದ್ರಾ ನದಿ ಅಪಾಯದ ಮಟ್ಟ; ಜನ, ಜಾನುವಾರು ನದಿಗೆ ಇಳಿಸದಂತೆ ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಸೂಚನೆ

Date:

Advertisements

“ತುಂಗಭದ್ರಾ ನದಿಯಲ್ಲಿ 1.12 ಲಕ್ಷ ಕ್ಯೂಸೆಕ್ಸ್ ಹರಿದು ಬರುತ್ತಿದ್ದು, ಅಪಾಯದ ಮಟ್ಟದಲ್ಲಿ ನದಿ ಹರಿಯುತ್ತಿರುವ ಕಾರಣ ನದಿಪಾತ್ರದಲ್ಲಿನ ಜನರು ಎಚ್ಚರಿಕೆಯಿಂದಿರಬೇಕು” ಎಂದು ಸಾರ್ವಜನಿಕರಿಗೆ ದಾವಣಗೆರೆ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಸೂಚನೆ ನೀಡಿದ್ದಾರೆ.

“ಶಿವಮೊಗ್ಗ ಮತ್ತು ಚಿಕ್ಕಮಗಳೂರು‌, ಮಲೆನಾಡು ಭಾಗದಲ್ಲಿ ಹೆಚ್ಚಿನ ಮಳೆಯಾಗುತ್ತಿರುವುದರಿಂದ, ಡ್ಯಾಂಗಳಿಂದ ನದಿಗೆ ನೀರು ಹರಿಸುತ್ತಿರುವ ಹಿನ್ನೆಲೆಯಲ್ಲಿ ತುಂಗಭದ್ರಾ ನದಿಯಲ್ಲಿ 1,12,170 ಕ್ಯೂಸೆಕ್ಸ್ ನೀರು ಅಪಾಯ ಮಟ್ಟದಲ್ಲಿ ಹರಿಯುತ್ತಿರುವುದರಿಂದ ಜನರು ನದಿಪಾತ್ರದಲ್ಲಿ ಹೆಚ್ಚು ಎಚ್ಚರಿಕೆಯಿಂದ ಇರಬೇಕು. ಜಾನುವಾರುಗಳು ಸೇರಿದಂತೆ ನದಿಗೆ ಇಳಿಯಬಾರದು” ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಸೂಚನೆ ನೀಡಿದ್ದಾರೆ.

1002398867

“ತುಂಗಾ ಜಲಾಶಯದಿಂದ 68,599 ಕ್ಯೂಸೆಕ್ಸ್ ನೀರನ್ನು ನದಿಗೆ ಬಿಡಲಾಗಿದೆ. ಮತ್ತು ಭದ್ರಾ ಜಲಾಶಯ ಭರ್ತಿಯಾಗುವ ಹಂತದಲ್ಲಿದ್ದು, 39017 ಕ್ಯೂಸೆಕ್ಸ್ ನೀರನ್ನು ನದಿಗೆ ಬಿಡಲಾಗಿರುತ್ತದೆ. ಪ್ರಸ್ತುತ ತುಂಗಭದ್ರ ನದಿಯಲ್ಲಿ ಅಪಾಯ ಮಟ್ಟ ಮೀರಿ 1,12,170 ಕ್ಯೂಸೆಕ್ಸ್ ನೀರು ಹರಿಯುತ್ತಿದ್ದು, ಇದರಿಂದಾಗಿ ಹೊನ್ನಾಳಿ, ನ್ಯಾಮತಿ ಹಾಗೂ ಹರಿಹರ ತಾಲ್ಲೂಕುಗಳ ನದಿ ಪಾತ್ರದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿರುತ್ತದೆ. ಮುಂಜಾಗ್ರತಾ ಕ್ರಮವಾಗಿ ಹೊನ್ನಾಳಿ ಪಟ್ಟಣದ ನದಿ ತೀರದ ಬಾಲರಾಜ್‍ಘಾಟ್ ಪ್ರದೇಶದ ಬಳಿ ಅಂಬೇಡ್ಕರ್ ಭವನದಲ್ಲಿ ಕಾಳಜಿ ಕೇಂದ್ರ ತೆರೆಯಲಾಗಿದ್ದು, 8 ಕುಟುಂಬದ 33 ಜನರನ್ನು ಸ್ಥಳಾಂತರ ಮಾಡಿ ಸಂತ್ರಸ್ತರಿಗೆ ಊಟೋಪಚಾರ ಹಾಗೂ ಅಗತ್ಯ ಮೂಲ ಸೌಕರ್ಯ ಹಾಗೂ ವೈದ್ಯಕೀಯ ಸೇವೆಗಳನ್ನು ಒದಗಿಸಲಾಗಿರುತ್ತದೆ” ಎಂದು ತಿಳಿಸಿದರು.

“ಹರಿಹರ ಪಟ್ಟಣದ ಗಂಗಾನಗರ ಬಳಿ ಎಪಿಎಂಸಿ ಭವನದಲ್ಲಿ ಹಾಗೂ ನ್ಯಾಮತಿ ತಾಲ್ಲೂಕು ಚೀಲೂರು ಗ್ರಾಮದಲ್ಲಿ ಕಾಳಜಿ ಕೇಂದ್ರ ತೆರೆಯಲು ಸಿದ್ದತೆ ಮಾಡಿಕೊಳ್ಳಲಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಸುರಕ್ಷತಾ ದೃಷ್ಟಿಯಿಂದ ಜನ ಹಾಗೂ ಜಾನುವಾರುಗಳು ನದಿಗೆ ಇಳಿಯದಂತೆ ತಿಳಿಸಿದೆ ಹಾಗೂ ಸಾರ್ವಜನಿಕರು ಹಾಗೂ ಪ್ರವಾಸಿಗರು ನದಿಯ ಬಳಿ ಸೆಲ್ಫಿ ತೆಗೆದುಕೊಳ್ಳವುದನ್ನು ನಿಷೇದಿಸಿದೆ” ಎಂದು ಸೂಚಿಸಿದರು.

ಈ ಸುದ್ದಿ ಓದಿದ್ದೀರಾ? ದಾವಣಗೆರೆ ಚಿತ್ರದುರ್ಗ | ಮಡಿವಾಳ ಮಾಚಿದೇವ ಸೇನಾ ಪಡೆಯಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

“ತುರ್ತು ಸಂದರ್ಭದಲ್ಲಿ ಸಾರ್ವಜನಿಕರ ಸಹಾಯಕ್ಕಾಗಿ ಈ ಕೆಳಕಂಡ ಸಹಾಯವಾಣಿಗಳನ್ನು ತೆರೆಯಲಾಗಿದೆ.
ಜಿಲ್ಲಾಧಿಕಾರಿಗಳ ಕಾರ್ಯಾಲಯ, ದಾವಣಗೆರೆ 08192-234034 ಅಥವಾ 1077 ಎಸ್‍ಡಿಆರ್‍ಎಫ್ ಘಟಕ ದೇವರಬೆಳೆಕೆರೆ 7411308591, ಆಗ್ನಿಶಾಮಕ ಇಲಾಖೆ ದಾವಣಗೆರೆ 08192-258101 ಅಥವಾ 112, ಮಹಾನಗರ ಪಾಲಿಕೆ ದಾವಣಗೆರೆ 08192-234444 ಹಾಗೂ 8277234444 (ವಾಟ್ಸ್ಆಪ್) ಸ್ಮಾರ್ಟ್ ಸಿಟಿ, ದಾವಣಗೆರೆ, 18004256020, ತಾಲ್ಲೂಕು ಕಛೇರಿ, ದಾವಣಗೆರೆ 9036396101, ತಾಲ್ಲೂಕು ಕಛೇರಿ, ಹರಿಹರ 08192-272959, ತಾಲ್ಲೂಕು ಕಛೇರಿ, ಜಗಳೂರು 08196-227242, ತಾಲ್ಲೂಕು ಕಛೇರಿ, ಹೊನ್ನಾಳಿ 08188-252108, ತಾಲ್ಲೂಕು ಕಛೇರಿ, ನ್ಯಾಮತಿ 8073951245, ತಾಲ್ಲೂಕು ಕಛೇರಿ, ಚನ್ನಗಿರಿ
08188-295518 ಇಲ್ಲಿ ಸಹಾಯವಾಣಿ ಕೇಂದ್ರಗಳಿಗೆ ಕರೆ ಮಾಡಬಹುದಾಗಿದೆ” ಎಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಮಾಹಿತಿ ನೀಡಿದ್ದಾರೆ.‌

IMG 20250205 WA0034
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಯಚೂರು |ಸಾಮಾಜಿಕ ಶೈಕ್ಷಣಿಕ ಸಮೀಕ್ಷೆಗೆ ನಿರ್ಲಕ್ಷ್ಯ : ಅಧಿಕಾರಿ ಅಮಾನತು

ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷಾ ಕಾರ್ಯದಲ್ಲಿ ನಿರ್ಲಕ್ಷ್ಯ ತೋರಿದ ಆರೋಪದಡಿ ತಾಲ್ಲೂಕು...

ಚಿಕ್ಕಮಗಳೂರು l ಹದಗೆಟ್ಟ ರಸ್ತೆ; ಅಧಿಕಾರಿಗಳ ನಿರ್ಲಕ್ಷ್ಯ; ಸುಮೊಟೊ ಪ್ರಕರಣ ದಾಖಲು

ಮಲೆನಾಡಿನ ಭಾಗಗಳಲ್ಲಿ ಅದೆಷ್ಟೋ ರಸ್ತೆಗಳು ಹಳ್ಳ ಗುಂಡಿಗಳ ರೀತಿಯಲ್ಲಿ ಕಾಣಿಸುತ್ತಿದೆ, ವಾಹನ...

ಚಿಕ್ಕಮಗಳೂರು l ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಗೆ ಶಿಕ್ಷಕರ ವಿರೋಧ

ಸರ್ಕಾರದ ಜಾತಿ ಗಣತಿ ಕಾರ್ಯಕ್ಕೆ ಶಿಕ್ಷಕರಿಂದಲೇ ವಿರೋಧ ವ್ಯಕ್ತ ಪಡಿಸಿರುವ ಘಟನೆ...

ತುಮಕೂರು ದಸರಾ | ಮಹಿಳಾ ಬೈಕ್ ರೈಡ್ ಗೆ ಗೃಹ ಸಚಿವ ಪರಮೇಶ್ವರ್ ಚಾಲನೆ

 ತುಮಕೂರು ದಸರಾ ಉತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಮಹಿಳಾ ಬೈಕ್ ರೈಡ್‌ಗೆ ಗೃಹ...

Download Eedina App Android / iOS

X