ದೇಶಾದ್ಯಂತ ಸುದ್ದಿಯಾಗಿದ್ದ ಶ್ರದ್ಧಾ ವಾಕರ್ ಹತ್ಯೆಯಂತೆಯೇ ಮತ್ತೊಂದು ಘಟನೆ ದೇಶದ ರಾಜಧಾನಿ ದೆಹಲಿಯಲ್ಲಿ ನಡೆದಿರುವುದಾಗಿ ವರದಿಯಾಗಿದೆ.
ಶ್ರದ್ಧಾ ವಾಕರ್ ರೀತಿಯಲ್ಲೇ ಮಹಿಳೆಯ ದೇಹದ ಭಾಗಗಳು ಬುಧವಾರ ಬೆಳಗ್ಗೆ ಪತ್ತೆಯಾಗಿರುವ ಘಟನೆ ಗೀತಾ ಕಾಲೋನಿಯಿಂದ ವರದಿಯಾಗಿದೆ.
ಗೀತಾ ಕಾಲೋನಿ ಫ್ಲೈಓವರ್ ಪ್ರದೇಶದ ಬಳಿ ಮಹಿಳೆಯೊಬ್ಬರ ಶವವನ್ನು ಹಲವಾರು ತುಂಡುಗಳಾಗಿ ಕತ್ತರಿಸಿರುವ ಸ್ಥಿತಿಯಲ್ಲಿ ಕಂಡು ಬಂದಿದೆ. ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ದೆಹಲಿ ಪೊಲೀಸರು ತೆರಳಿದ್ದಾರೆ.
ಬೆಳಗ್ಗೆ 9:15ರ ಸುಮಾರಿಗೆ ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿದೆ ಎಂದು ವರದಿಯಾಗಿದೆ. ಫ್ಲೈಓವರ್ ಬಳಿ ಹಲವೆಡೆ ದೇಹದ ಭಾಗಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು ಎಂದು ತಿಳಿದುಬಂದಿದೆ.
(ಇದೊಂದು ಬ್ರೇಕಿಂಗ್ ನ್ಯೂಸ್. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.)