ಧರ್ಮಸ್ಥಳ ಸುತ್ತಮುತ್ತಲಿನಲ್ಲಿ ಅಕ್ರಮವಾಗಿ ಶವ ಹೂತು ಹಾಕಲಾಗಿದೆ ಎನ್ನಲಾದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆ.13ರ ಬುಧವಾರವೂ ಕೂಡ ಸಾಕ್ಷಿ ದೂರುದಾರ ಗುರುತಿಸಿದ್ದ 13ನೇ ಪಾಯಿಂಟ್‌ನಲ್ಲಿ ಉತ್ಖನನ ಪ್ರಕ್ರಿಯೆಯನ್ನು ಮುಂದುವರಿಸಲಾಗಿದೆ.
ಪುತ್ತೂರು ಸಹಾಯಕ ಕಮಿಷನರ್ ಸ್ಟೆಲ್ಲಾ ವರ್ಗೀಸ್ ಹಾಗೂ ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸನಿಕಂ ನೇತೃತ್ವದಲ್ಲಿ 13ನೇ ಪಾಯಿಂಟ್‌ನಲ್ಲಿ ಉತ್ಖನನ ಪ್ರಕ್ರಿಯೆಯನ್ನು ಎಸ್‌ಐಟಿ ತಂಡವು ಬುಧವಾರ ಮುಂದುವರಿಸಿದೆ.
ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮೂಹಿಕವಾಗಿ ಮೃತದೇಹಗಳನ್ನು ಹೂತಿರುವುದಾಗಿ ದೂರುದಾರ ಗುರುತಿಸಿದ್ದ 13ನೇ ಸ್ಥಳದಲ್ಲಿ ಮಂಗಳವಾರ ಜಿಪಿಆರ್ ಉಪಯೋಗಿಸಿ ಪರಿಶೀಲಿಸುವ ಕಾರ್ಯವನ್ನು ಎಸ್ ಐ ಟಿ ಅಧಿಕಾರಿಗಳು ನಡೆಸಿದ್ದರು. 13ನೇ ಪಾಯಿಂಟ್ ಸ್ಥಳವು ನೇತ್ರಾವತಿ ಅಜಿಕುರಿ ರಸ್ತೆಬದಿಯಲ್ಲಿದೆ.
ನಿನ್ನೆ ಮಧ್ಯಾಹ್ನದಿಂದ ಪ್ರಾರಂಭವಾಗಿದ್ದ ಕಾರ್ಯಾಚರಣೆಯಲ್ಲಿ ಚಿಕ್ಕ ಹಿಟಾಚಿ ಬಳಸಿ ಭೂಮಿ ಅಗೆಯುವ ಕಾರ್ಯವನ್ನು ಪ್ರಾರಂಭಿಸಿ, ನಂತರ ದೊಡ್ಡ ಹಿಟಾಚಿಯನ್ನು ಶೋಧಯನ್ನು ಕಾರ್ಯಾಚರಣೆಯಲ್ಲಿ ಉಪಯೋಗಿಸಿ ಅಗೆಯವ ಕಾರ್ಯ ಮಾಡಲಾದರೂ ಈ ಸ್ಥಳದಿಂದ ಯಾವುದೇ ಕಳೆಬರಹ, ಕುರುಹುಗಳು ಪತ್ತೆಯಾಗಿರಲಿಲ್ಲ.
