ಹಾಸನದ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಪೋಸ್ಟ್ ಮೆಟ್ರಿಕ್ ಹಾಸ್ಟೆಲ್ ನಲ್ಲಿ ಸಾವಿತ್ರಿ ಬಾಯಿಪುಲೆ ಅವರ ಜನ್ಮ ದಿನದ ಅಂಗವಾಗಿ ಎಸ್ ಎಫ್ ಐ ಸಂಘಟನೆಯ ವತಿಯಿಂದ ಗುರುವಾರದಂದು ವಿಚಾರ ಸಂಕೀರ್ಣವನ್ನು ಹಮ್ಮಿಕೊಳ್ಳಲಾಗಿತ್ತು.
ಮಹಿಳಾ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಿದೆ ಏಕೆಂದರೆ ಶತಮಾನಗಳಿಂದ ಶೋಷಣೆಗೆ ಒಳ ಪಟ್ಟು ಮಹಿಳಾ ಸಮುದಾಯ ಇಂದಿಗೂ ಅದೆ ಸಮಸ್ಯೆ ಎದುರಿಸುತ್ತಿದೆ, ಸಾವಿತ್ರಿ ಬಾಪುಲೆ ಅವರು ಮಹಿಳಾ ಶಿಕ್ಷಣಕ್ಕೆ ಒತ್ತು ಕೊಟ್ಟಷ್ಟು ಯಾರು ಕೊಟ್ಟಿರುವುದಿಲ್ಲ, ನೂರಾರು ವರ್ಷಗಳ ಹಿಂದೆಯೇ, ಈ ವೈದಿಕಶಾಹಿ ಪರಂಪರೆ ಮಹಿಳೆಯನ್ನು ಅಸ್ಪೃಶ್ಯಳಾಗಿ ನೋಡುವ ಪದ್ದತಿಗಳ ವಿರುದ್ಧ ಹೋರಾಟ ಮಾಡಿದ್ದರಿಂದ ಮಹಿಳೆಯರಿಗೆ ಸಮಾನವಾದ ಶಿಕ್ಷಣ ಸಿಗುತ್ತಿದೆ. ಸಾವಿತ್ರಿ ಬಾಯಿಪುಲೆ ಅವರು ಮಾಡಿರುವುದು ಶಿಕ್ಷಣ ಕ್ರಾಂತಿ “ಸಾವಿತ್ರಿ ಬಾಯಿ ತುಂಬ ಉದಾರಿಯಾಗಿದ್ದರು. ಅವರ ಹೃದಯ ಕರುಣಾಭರಿತವಾಗಿತ್ತು. ಬಡವರು, ಅಸಹಾಯಕರ ಕುರಿತು ಬಹಳ ಅನುಭೂತಿ ಹೊಂದಿದ್ದರು ಎಂದು ಮಹಿಳಾ ಸಂಘಟನೆಯ ಸೌಮ್ಯಾ ಮಾತಾಡಿದರು.
ಸಾವಿತ್ರಿಬಾಯಿ ನಸುನಗುತ್ತ, “ನಾವು ಸತ್ತು ಹೋಗುವಾಗ ಏನನ್ನಾದರೂ ಜೊತೆಗೆ ಒಯ್ಯುತ್ತೇವೆಯೇ?” ಎಂದು ಕೇಳುತ್ತಿದ್ದರು. ಮನೆಗೆ ಯಾರಾದರೂ ಅತಿಥಿಗಳು ಬಂದರೆ ಅವರಿಗೆ ತುಂಬ ಸಂತೋಷ, ತಾವೇ ಅಡಿಗೆ ಮಾಡಿ ಬಡಿಸುತ್ತಾರೆ. ಅವರು ಸದಾ ಮಹಿಳೆಯರ ಶಿಕ್ಷಣ ಮತ್ತು ಉನ್ನತಿಯ ಬಗ್ಗೆಯೇ ಯೋಚಿಸುತ್ತಾರೆ. ಸೌಂದರ್ಯ, ಸಿರಿಸಂಪತ್ತು ಕುರಿತಾದ ನಿಗ್ರಹವನ್ನು ಎಳೆಯ ವಯಸ್ಸಿನಲ್ಲೇ ದಕ್ಕಿಸಿಕೊಂಡ ಕಾರಣ ಹಾಗೂ ತಾನು ಮಾಡುವ ಕೆಲಸದಲ್ಲಿ ಶ್ರದ್ಧೆ ಬೆಳೆಸಿಕೊಂಡ ಕಾರಣ ಸಾವಿತ್ರಿ ತನ್ನ ಕಾಲದ ಉಳಿದ ಮಹಿಳೆಯರಿಗಿಂತ ತೀರಾ ಭಿನ್ನವಾಗಿ ಯೋಚಿಸಲು, ಕಾರ್ಯಪ್ರವೃತ್ತರಾಗಲು ಸಾಧ್ಯವಾಯಿತು. ಇಂತಹ ಮನೋಭಾವವೇ ಎಲ್ಲ ಮಕ್ಕಳನ್ನೂ ತನ್ನವೇ ಎಂದುಕೊಂಡು ಅವರಿಗೆ ಅಕ್ಷರದ ಅನ್ನ ಉಣಬಡಿಸಲು, ಎಲ್ಲರಿಗೂ ತಾಯಿಯಾಗಲು ಸಾಧ್ಯವಾಗಿದೆ ಎಂದು ಮಹಿಳಾ ಸಂಘದ ಸೌಮ್ಯ ಮಾತಾಡಿದರು.
ಫುಲೆ ದಂಪತಿಗಳ ಕೊಡುಗೆಯನ್ನು ನಾವು ಸ್ಮರಿಸಬೇಕು. ಮಹಿಳೆಯರಿಗೆ ಶಿಕ್ಷಣ ಸಿಗಬೇಕು, ಅವರಿಗೂ ಘನೆತೆಯ ಬದುಕಿದೆ ಎಂಬುದನ್ನು ಒತ್ತಿ ಹೇಳಿದರು ಅಂದಿನ ಕಾಲದಲ್ಲಿ ಅವರು ಅಷ್ಟು ಕೆಲಸ ಮಾಡದೆ ಹೋಗಿದ್ದರೆ ಇಂದು ನಾವು ನೆಮ್ಮದಿಯಾಗಿ ಇಲ್ಲಿ ಬದುಕಲು ಸಾದ್ಯ ಆಗುತ್ತಿರಲಿಲ್ಲ. ಹಾಗಾಗಿ ಅವರು ನಮಗೆ ಆದರ್ಶ ಎಂದು ಸಮಾಜ ಕಲ್ಯಾಣ ಅಧಿಕಾರಿಗಳಾದ ಆಶಾ ಅವರು ಮಾತಾಡಿದರು.
ಇದನ್ನೂ ಓದಿದ್ದೀರಾ?ಹಾಸನ l ಎಫ್ ಡಿಎ ವಿರುದ್ದ ಲಂಚ ಆರೋಪ, ಅಮಾನತು ಆಗಿದ್ದರೂ ಕರ್ತವ್ಯ ನಿರ್ವಹಣೆ
ಈ ವಿಚಾರ ಸಂಕೀರ್ಣ ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಯದರ್ಶಿ ರಮೇಶ್, ಚಾಂದಿನ, ರೂಪ, ಹಾಸ್ಟೆಲ್ ವಿದ್ಯಾರ್ಥಿಗಳು ಹಾಗೂ ಇನ್ನಿತರು ಉಪಸ್ಥಿತರಿದ್ದರು.
