ಆಕಳುಗಳಿಗಾಗಿ ಸಂಗ್ರಹಿಸಿಟ್ಟುಕೊಂಡಿದ್ದ ಮೇವಿನ ಬಣವೆಗಳಿಗೆ ಆಕಸ್ಮಿಕ ಬೆಂಕಿ ತಗುಲಿ ಎಂಟು ಹುಲ್ಲಿನ ಬಣವೆಗಳು ಸುಟ್ಟು ಕರಕಲಾಗಿದ್ದು, ನಾಲ್ಕು ಮನೆಗಳು ಹಾಗೂ ಕೃಷಿಉಪಕರಣಗಳು ಹಾನಿಗೊಳಗಾಗಿರುವ ಘಟನೆ ಹಾವೇರಿ ತಾಲೂಕಿನ ಯಲಗಚ್ಚ ಗ್ರಾಮದಲ್ಲಿ ನಡೆದಿದೆ.
ನಾಗಪ್ಪ ಮಣ್ಣೂರು, ಪುಟ್ಟಪ್ಪ, ಚನ್ನಪ್ಪ ದೊಡ್ಡ ನಿಂಗಪ್ಪ ಕಡೆಮನಿ, ಬಸಪ್ಪ ಬರಮಪ್ಪ ಮಣ್ಣೂರ ಮತ್ತು ಮುತ್ತಣ್ಣ ಎಂಬ ರೈತರಿಗೆ ಸೇರಿದ ಮೇವಿನ ಬಣವೆಗಳು ಬೆಂಕಿಯ ಕೆನ್ನಾಲಿಗೆಗೆ ಆಹುತಿಯಾಗಿವೆ.
ಈ ಸುದ್ದಿ ಓದಿದ್ದೀರಾ? ಗದಗ | ಉದ್ಯೋಗ ಖಾತ್ರಿ ದಿನಕ್ಕೆ ₹ 370, ದುಡಿಯುವ ಕೈಗೆ ಕೆಲಸ: ಧರ್ಮರ ಕೃಷ್ಣಪ್ಪ
ಮೇವಿನ ಬಣವೆಗಳ ಸಮೀಪದಲ್ಲಿಯೇ ಇದ್ದ ಮನೆಗಳಿಗೆ ಬೆಂಕಿ ಆವರಿಸಿ ಸಾಕಷ್ಟು ಹಾನಿ ಸಂಭವಿಸಿದೆ. ಮೊದಲಿಗೆ ಮೇವಿನ ಬಣವೆಗಳಿಗೆ ಬೆಂಕಿ ತಗಲಿದ್ದು, ನಂತರ ಪಕ್ಕದಲ್ಲೇ ಇದ್ದ ರೈತರ ಮನೆಗಳಿಗೂ ಬೆಂಕಿ ವ್ಯಾಪಿಸಿದೆ.
