ಪಾಕಿಸ್ತಾನದ ಮಾಜಿ ಪ್ರಧಾನಮಂತ್ರಿ ಇಮ್ರಾನ್ ಖಾನ್‌ಗೆ ಮೇ 9, 2023ರ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದ ಎಂಟನೇ ಪ್ರಕರಣದಲ್ಲಿ ಪಾಕಿಸ್ತಾನ ಸುಪ್ರೀಂ ಕೋರ್ಟ್ ಗುರುವಾರ ಜಾಮೀನು ಮಂಜೂರು ಮಾಡಿದೆ. 2023ರಲ್ಲಿ ದೇಶಾದ್ಯಂತ ನಡೆದ ಪ್ರತಿಭಟನೆಗಳು ಮತ್ತು ಸರ್ಕಾರಿ ಹಾಗೂ ಸೇನಾ ಕಟ್ಟಡಗಳ ಮೇಲಿನ ದಾಳಿಗಳಿಗೆ ಸಂಬಂಧಿಸಿದಂತೆ ಖಾನ್ ವಿರುದ್ಧ ದಾಖಲಾದ ಪ್ರಕರಣಗಳಲ್ಲಿ ಈ ತೀರ್ಪು ನೀಡಲಾಗಿದೆ.
ಮುಖ್ಯ ನ್ಯಾಯಮೂರ್ತಿ ಯಾಹ್ಯಾ ಅಫ್ರಿದಿ ನ್ಯಾಯಮೂರ್ತಿಗಳಾದ ಮುಹಮ್ಮದ್ ಶಫಿ ಸಿದ್ದಿಕಿ ಮತ್ತು ಮಿಯಾಂಗುಲ್ ಹಸನ್ ಔರಂಗ್ ಝೇಬ್ ಅವರನ್ನೊಳಗೊಂಡ ನೇತೃತ್ವದ ತ್ರಿಸದಸ್ಯ ನ್ಯಾಯಪೀಠ, ಆದೇಶ ಹೊರಡಿಸಿದ್ದು ಜಾಮೀನು ಅರ್ಜಿಯ ವಿಚಾರಣೆ ನಡೆಸಿತು. ಈ ಪೀಠವನ್ನು ವಿಶೇಷವಾಗಿ ಜಾಮೀನು ಅರ್ಜಿಗಳ ವಿಚಾರಣೆಗಾಗಿ ಪುನಾರಚಿಸಲಾಗಿತ್ತು ಎಂದು ಮಾಧ್ಯಮಗಳು ವರದಿ ತಿಳಿಸಿದೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಸದನದ ಘನತೆಯನ್ನು ಮಣ್ಣುಪಾಲು ಮಾಡಿದ ಮಹನೀಯರು
ಆದರೆ, ಈ ಜಾಮೀನು ಆದೇಶದ ಹೊರತಾಗಿಯೂ ಇಮ್ರಾನ್ ಖಾನ್ ಶೀಘ್ರ ಬಿಡುಗಡೆಯಾಗುವ ಸಾಧ್ಯತೆ ಕಡಿಮೆಯಿದೆ. 2023ರಿಂದ ಜೈಲಿನಲ್ಲಿರುವ ಖಾನ್, ರಾಜ್ಯ ಉಡುಗೊರೆಗಳ ಪ್ರಕರಣದಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ ಮತ್ತು 190 ದಶಲಕ್ಷ ಪೌಂಡ್ ಲಂಚ ಪ್ರಕರಣದಲ್ಲೂ ಶಿಕ್ಷೆಗೊಳಗಾಗಿದ್ದಾರೆ. ಇದಲ್ಲದೆ, ಮೇ 9ರ ಹಿಂಸಾಚಾರಕ್ಕೆ ಸಂಬಂಧಿಸಿದ ಕೆಲವು ಇತರ ಪ್ರಕರಣಗಳ ವಿಚಾರಣೆಯೂ ಇನ್ನೂ ಬಾಕಿಯಿದೆ.