ಕೊರಟಗೆರೆ ಪಟ್ಟಣದ ಪಂಚಾಯಿತಿ ಅಧ್ಯಕ್ಷರು, ಸದಸ್ಯರ ಜೊತೆ ಚರ್ಚಿಸದೆ ಗೃಹ ಸಚಿವರ ಹೆಸರು ದುರ್ಬಳಕೆ ಮಾಡಿಕೊಂಡು 2025-26ನೇ ಸಾಲಿನ ಅಭಿವೃದ್ಧಿಯ ಕ್ರಿಯಾ ಯೋಜನೆ ತಯಾರಿಸಿದ್ದಾರೆ ಎಂದು ಸಾಮಾನ್ಯ ಸಭೆಯಲ್ಲಿ ಮಂಗಳವಾರ ಸದಸ್ಯರು ಆಕ್ರೋಶ ಹೊರಹಾಕಿದರು.
ಮೇ.29ರಂದು ಮ.12:30 ಆದರೂ ಆಯೋಜಿಸಿದ್ದ ಸಾಮಾನ್ಯ ಸಭೆ ಆರಂಭವಾಗಿರಲ್ಲಿಲ್ಲ ಏಕೆ?. ಪೌರಕಾರ್ಮಿಕರ ಪ್ರತಿಭಟನೆ ಹಿನ್ನೆಲೆ ರದ್ದುಪಡಿಸಿದ ಸಭೆ ಪುನಃ ನಡೆಸುವ ಉದ್ದೇಶವೇನಿತ್ತು?. ಮತ್ತೇ ಸಭೆಯೇ ಕರೆದಿಲ್ಲ, ಆದರೂ ಸಹ ಕ್ರಿಯಾಯೋಜನೆ ಸಿದ್ದವಾಗಿದೆ. ಸದಸ್ಯರ ಒಪ್ಪಿಗೆಯಂತೆ ಆಕ್ಷನ್ ಪ್ಲಾನ್ ಮಾಡಿದ್ದೀರಾ, ಜಿಲ್ಲಾಧಿಕಾರಿಗಳನ್ನು ಮೆಚ್ಚಿಸಲು ಕೆಲಸ ಮಾಡುತ್ತಿದ್ದೀರಾ ಎಂದು ಕೆಲ ಸದಸ್ಯರು ಅಧ್ಯಕ್ಷೆ, ಉಪಾಧ್ಯಕ್ಷೆ, ಸ್ಥಾಯಿ ಸಮಿತಿ ಅಧ್ಯಕ್ಷೆ ವಿರುದ್ದ ಅಸಾಮಾಧಾನ ವ್ಯಕ್ತಪಡಿಸಿದರು.
ಗೃಹ ಸಚಿವರು ಸೂಚನೆ ನೀಡಿದ್ದರೂ ಗೃಹ ಭಾಗ್ಯ ಯೋಜನೆ ಕಾರ್ಯರೂಪಕ್ಕೆ ಬಂದಿಲ್ಲ, ಪೌರ ಕಾರ್ಮಿಕರಿಗೆ ನಿರ್ಮಿಸಿದ ಮನೆಗಳೂ ಏಕೆ ಈವರೆಗೂ ಹಸ್ತಾಂತರವಾಗಿಲ್ಲ. ಗೃಹ ಸಚಿವರು ಸರ್ಕಾರದಿಂದ ವಿಶೇಷವಾಗಿ ಲಕ್ಷಾಂತರ ಅನುದಾನವನ್ನು ಬಿಡುಗಡೆಗೊಳಿಸಿದರೂ ನಗರದಲ್ಲಿ ಅಭಿವೃದ್ಧಿ ಕೆಲಸ ಮಾತ್ರ ಆಗುತ್ತಿಲ್ಲ ಎಂದು ಸದಸ್ಯರು ಆಕ್ರೋಶ ಹೊರ ಹಾಕಿದರು.
2025-26ನೇ ಸಾಲಿನ ಕ್ರಿಯಾ ಯೋಜನೆ:
2025-26ನೇ ಸಾಲಿನ ೧೫ನೇ ಹಣಕಾಸು ಯೋಜನೆಯಡಿ 83 ಲಕ್ಷ ಬಿಡುಗಡೆಗೊಂಡಿದೆ. ೮೩ಲಕ್ಷ ವೆಚ್ಚದಲ್ಲಿ ಪಟ್ಟಣಕ್ಕೆ ಅಮೃತ್ 2.೦ ಯೋಜನೆಗೆ ತಗಲುವ ವೆಚ್ಚ 24.90ಲಕ್ಷ, ಘನ ತ್ಯಾಜ್ಯ ನಿರ್ವಹಣೆಗೆ 24.90ಲಕ್ಷ, ಪ.ಪಂ ಕಚೇರಿ ಮುಂಭಾಗ ರಸ್ತೆ ಮತ್ತು ಚರಂಡಿ ಅಭಿವೃದ್ಧಿ, ಸೋಲಾರ್ ಟಾಪ್ ನಿರ್ಮಾಣಕ್ಕೆ, ನಗರದ ಸಮುದಾಯ ಶೌಚಾಲಯ ದುರಸ್ಥಿ ಕಾಮಗಾರಿಗೆ 33.20ಲಕ್ಷ ವೆಚ್ಚದ ಕ್ರಿಯಾಯೋಜನೆಯ ಬಗ್ಗೆ ಪ.ಪಂ ಅಧ್ಯಕ್ಷೆ ಅನಿತಾ ನೇತೃತ್ವದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಚರ್ಚಿಸಲಾಯಿತು.
ಲೋಕೋಪಯೋಗಿ ಇಲಾಖೆ ವೈಟ್ ಟಾಪಿಂಗ್ ರಸ್ತೆ ಮಾತ್ರ ಸಂಪೂರ್ಣಗೊಳಿಸಿದೆ. ಇಲ್ಲಿಯವರೆಗೂ ಪುಟ್ಬಾತ್ ವ್ಯವಸ್ಥೆ ಆಗಿಲ್ಲಾ, ಕರ್ನಾಟಕ ಬ್ಯಾಂಕ್ ಮುಂಭಾಗದಲ್ಲಿ ಪ್ರತಿದಿನ ಮುಂಜಾನೆ 20 ಕ್ಕೂ ಹೆಚ್ಚು ವ್ಯಾಪಾರಸ್ಥರು ನೂರಾರು ಮಂದಿ ನಾಗರೀಕರು ಸಂಚರಿಸುತ್ತಿರುತ್ತಾರೆ. ಪುಟ್ಬಾತ್ ವ್ಯವಸ್ಥೆಯಿಲ್ಲದ ಕಾರಣ ರಸ್ತೆಯಿಲ್ಲಿಟ್ಟು ವ್ಯಾಪಾರಕ್ಕೆ ಮುಂದಾಗಿದ್ದಾರೆ. ಬಸ್ ಸೇರಿದಂತೆ ಇತರೆ ವಾಹನಗಳು ವೇಗವಾಗಿ ಬರುತ್ತಿದ್ದರೂ ಸಹ ನಿಟ್ಟಿಲ್ಲದೆ ಮಾರುಕಟ್ಟೆಯಲ್ಲಿ ನಿಂತಿರುತ್ತಾರೆ ಮುಂದಿನ ದಿನಗಳಲ್ಲಿ ಅನಾಹುತ ಸಂಭವಿಸಿದರೆ ಅದಕ್ಕೆ ಹೊಣೆ ಯಾರು ಎಂಬುದನ್ನು ಸದಸ್ಯರು ಸಾಮಾನ್ಯ ಸಭೆಯಲ್ಲಿ ಜನರ ಪರವಾಗಿ ಧ್ವನಿ ಎತ್ತಿದರು.
ಸಭೆಯಲ್ಲಿ ಪ.ಪಂ ಅಧ್ಯಕ್ಷೆ ಅನಿತಾ, ಉಪಾಧ್ಯಕ್ಷೆ ಹುಸ್ನಾಫಾರೀಯ, ಸ್ಥಾಯಿ ಸಮಿತಿ ಅಧ್ಯಕ್ಷೆ ಹೇಮಲತಾ ಮಂಜುನಾಥ್, ಮುಖ್ಯಾಧಿಕಾರಿ ಉಮೇಶ್, ಸದಸ್ಯ ನಟರಾಜ್, ಓಬಳರಾಜು, ಭಾರತಿ ಸಿದ್ದಮಲ್ಲಪ್ಪ, ಪುಟ್ಟನರಸಪ್ಪ, ನಾಗರಾಜು, ನಂದೀಶ್, ಲಕ್ಷ್ಮೀನಾರಾಯಣ್, ನಾಮಿನಿ ಸದಸ್ಯರಾದ ಫಯಾಜ್ ಅಹಮದ್, ಎಂ.ಜಿ ಸುಧೀರ್, ಮಂಜುಳಾ ಗೋವಿಂದರಾಜು ಸೇರಿದಂತೆ ಇತರರು ಇದ್ದರು.