ವಿಕೃತ ಯುವಕನೊಬ್ಬ ತನ್ನ ಸ್ನೇಹಿತೆಯ ಖಾಸಗಿ ಕ್ಷಣದನ್ನು ಮೊಬೈಲ್‌ನಲ್ಲಿ ಚಿತ್ರೀರಿಸಿಕೊಂಡು, ಅವುಗಳನ್ನು ಹರಿಬಿಡುವುದಾಗಿ ಬೆದರಿಸಿ 2.57 ಕೋಟಿ ರೂ. ಸುಲಿಗೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. 22 ವರ್ಷದ ಆರೋಪಿ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಯನ್ನು ಮೋಹನ್ ಕುಮಾರ್ ಎಂದು ಗುರುತಿಸಲಾಗಿದೆ. 20 ವರ್ಷದ ಸಂತ್ರಸ್ತ ಯುವತಿ ಮತ್ತು ಆರೋಪಿ ಮೋಹನ್ – ಇಬ್ಬರೂ ಬೋರ್ಡಿಂಗ್ ಶಾಲೆಯಲ್ಲಿ ಒಟ್ಟಿಗೆ ಓದಿದ್ದರು. ಉತ್ತಮ ಸ್ನೇಹವನ್ನು ಹೊಂದಿದ್ದರು. ಆದರೆ, ಪದವಿಯ ನಂತರ ಸ್ನೇಹವನ್ನು ಕಳೆದುಕೊಂಡಿದ್ದರು. ಅದಾದ, ಕೆಲವು ವರ್ಷಗಳ ನಂತರ ಅವರು ಮತ್ತೆ ಸ್ನೇಹ ಬೆಳೆಸಿದ್ದರು. ಡೇಟಿಂಗ್ ಆರಂಭಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಮೋಹನ್ ಯುವತಿಗೆ ಮದುವೆಯಾಗುವ ಭರವಸೆ ನೀಡಿದ್ದನು. ತನ್ನೊಂದಿಗೆ ಪ್ರವಾಸಕ್ಕೆ ಬರುವಂತೆ ಕೇಳಿಕೊಂಡಿದ್ದನು. ಪ್ರವಾಸಕ್ಕೆ ತೆರಳಿದ್ದಾಗ ಆಕೆಯ ಖಾಸಗಿ ದೃಶ್ಯಗಳನ್ನು ಫೋಟೋ ಮತ್ತು ವಿಡಿಯೋ ಮಾಡಿಕೊಂಡಿದ್ದನು. ಅವುಗಳನ್ನು ಖಾಸಗಿಯಾಗಿ ಇಡುವುದಾಗಿ ಭರವಸೆಯನ್ನೂ ನೀಡಿದ್ದನು.
ಆದರೆ, ಇತ್ತೀಚಿಗೆ, ಆ ಫೋಟೋಗಳು ಮತ್ತು ವಿಡಿಯೋಗಳನ್ನು ಹರಿಬಿಡುವುದಾಗಿ ಬ್ಲಾಕ್‌ಮೇಲ್ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದ. ಬ್ಲಾಕ್‌ಮೇಲ್‌ಗೆ ಹದರಿದ್ದ ಯುವತಿ ಕಳೆದ ಕೆಲವು ತಿಂಗಳಲ್ಲಿ ಬರೋಬ್ಬರಿ 2.57 ಕೋಟಿ ರೂ.ಗಳನ್ನು ಆತನಿಗೆ ಕೊಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರಂಭದಲ್ಲಿ ಯುವತಿ ತನ್ನ ಅಜ್ಜಿಯ ಖಾತೆಯಿಂದ ಮೋಹನ್ ಖಾತೆಗೆ 1.25 ಕೋಟಿ ರೂ. ವರ್ಗಾಯಿಸಿದ್ದರು. ಅದಲ್ಲದೆ, ವಿವಿಧ ಸಂದರ್ಭಗಳಲ್ಲಿ 1.32 ಕೋಟಿ ರೂಪಾಯಿ ನಗದನ್ನು ಆರೋಪಿಗೆ ಕೊಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ವರದಿ ಓದಿದ್ದೀರಾ?: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್-ವೇ | ಟೋಲ್ ಎಂಬ ಸರ್ಕಾರಿ ದರೋಡೆ; 20 ತಿಂಗಳಲ್ಲಿ 438 ಕೋಟಿ ವಸೂಲಿ
ಅಂತಿಮವಾಗಿ, ಆರೋಪಿ ಮೋಹನ್‌ನ ನಿರಂತರ ಬ್ಲಾಕ್‌ಮೇಲ್‌ಅನ್ನು ಸಹಿಸಲಾಗದೆ ಸಂತ್ರಸ್ತೆ ಪೊಲೀಸರಿಗೆ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಯನ್ನು ಬಂಧಿಸಿದ್ದಾರೆ. ಆತನಿಂದ 80 ಲಕ್ಷ ರೂ. ಹಣವನ್ನೂ ವಶಕ್ಕೆ ಪಡೆಸಿದ್ದಾರೆ.
ಪ್ರಕರಣದ ಬಗ್ಗೆ ಮಾತನಾಡಿದ ಬೆಂಗಳೂರು ಪೊಲೀಸ್ ಕಮಿಷನರ್ ಬಿ.ದಯಾನಂದ, ”ಬಾಯ್ ಫ್ರೆಂಡ್ ತನ್ನನ್ನು ಬ್ಲಾಕ್‌ಮೇಲ್ ಮಾಡಿದ್ದಾನೆಂದು ಯುವತಿ ದೂರು ನೀಡಿದ್ದಾರೆ. ಇದೊಂದು ಯೋಜಿತ ಅಪರಾಧವಾಗಿದೆ. ಆರೋಪಿಯನ್ನು ಬಂಧಿಸಿದ್ಧೇವೆ” ಎಂದು ಹೇಳಿದ್ದಾರೆ.
ಹಿಂದೂ ಧರ್ಮ ರಕ್ಷಕರು ಎಲ್ಲಿದ್ದಾರೆ,,, ಹಿಂದೂ ಯುವತಿಗೆ ಲವ್ ಜಿಹಾದ್ ಅನ್ನಿಸ್ಲಿಲ್ವಾ