ಟೊಮ್ಯಾಟೋ ಬೆಲೆ ಏರಿಕೆ ಸಂದರ್ಭದಲ್ಲಿ ತರಕಾರಿ ಕೊಂಡುಕೊಳ್ಳಲಾಗದೆ ವ್ಯಾಪಾರಿ ರಾಮೇಶ್ವರ್ ಅವರ ಕಣ್ಣೀರಿನ ಕಾರಣಕ್ಕಾಗಿ ದೇಶಾದ್ಯಂತ ಸುದ್ದಿಯಾಗಿದ್ದ ದೆಹಲಿಯ ಆಝಾದ್ಪುರ ಹಣ್ಣು ಮತ್ತು ತರಕಾರಿ ಮಾರುಕಟ್ಟೆ ಮತ್ತೊಮ್ಮೆ ಸುದ್ದಿಯಾಗಿದೆ. ಮಂಡಿಯಲ್ಲಿ ಶುಕ್ರವಾರ ಸಂಜೆ ಭೀಕರ ಬೆಂಕಿ ಅವಘಡ ಸಂಭವಿಸಿದೆ.

ಅಗ್ನಿ ಅವಘಡದಿಂದ ಇಡೀ ಪ್ರದೇಶದಲ್ಲಿ ಭೀತಿ ಆವರಿಸಿದ್ದು, ಬೆಂಕಿ ಅವಘಡದ ಸುದ್ದಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಗಿದೆ. ಸುಮಾರು 11 ಅಗ್ನಿಶಾಮಕ ದಳದ ವಾಹನಗಳು ಸ್ಥಳಕ್ಕೆ ಆಗಮಿಸಿವೆ ಎಂದು ವರದಿಯಾಗಿದೆ.
VIDEO | Fire breaks out at Azadpur Mandi in Delhi. Multiple fire tenders are at the spot. More details are awaited. pic.twitter.com/Y4LCesLpZV
— Press Trust of India (@PTI_News) September 29, 2023
ಬೆಂಕಿಯ ಅವಘಡಕ್ಕೆ ಕಾರಣ ಇನ್ನೂ ತಿಳಿದು ಬಂದಿಲ್ಲ. ಪ್ರಾಥಮಿಕ ಮಾಹಿತಿಯ ಪ್ರಕಾರ ಪ್ಲಾಸ್ಟಿಕ್ ಕ್ರೇಟ್ವೊಂದರಲ್ಲಿ ಬೆಂಕಿಯ ಜ್ವಾಲೆ ಕಾಣಿಸಿಕೊಂಡಿದ್ದು, ಆ ಬಳಿಕ ಸುತ್ತಮುತ್ತಲೂ ಹರಡಿತು ಎಂದು ತಿಳಿದುಬಂದಿದೆ.
#WATCH | Fire Station Officer Paras Kumar says, "We got the information that a fire broke out near Azadpur Gate No. 1… We have extinguished it completely… No one is injured…There are 7-8 vehicles on the spot… The reasons for the fire will be known after investigation…… https://t.co/xvVNcbIsqP pic.twitter.com/dWK3CKdHY0
— ANI (@ANI) September 29, 2023
ಘಟನೆಯ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಅಗ್ನಿಶಾಮಕ ಠಾಣಾಧಿಕಾರಿ ಪರಸ್ ಕುಮಾರ್,” ಆಝಾದ್ಪುರ ಮಂಡಿಯ ಗೇಟ್ ನಂ. 1ರ ಬಳಿ ಬೆಂಕಿ ಕಾಣಿಸಿಕೊಂಡಿದೆ ಎಂಬ ಮಾಹಿತಿ ನಮಗೆ ಬಂತು. ಈಗ ನಾವು ಅದನ್ನು ಸಂಪೂರ್ಣವಾಗಿ ನಂದಿಸಿದ್ದೇವೆ. ಯಾರಿಗೂ ಗಾಯವಾಗಿಲ್ಲ. ಸ್ಥಳದಲ್ಲಿ 7-8 ವಾಹನಗಳಿದ್ದವು. ಬೆಂಕಿ ಅವಘಡಕ್ಕೆ ಕಾರಣವನ್ನು ತನಿಖೆಯ ನಂತರವೇ ತಿಳಿಯಲಿದೆ. ಮಾಹಿತಿ ಸಿಕ್ಕ ಕೂಡಲೇ ಸ್ಥಳಕ್ಕೆ ಬಂದು 15-20 ನಿಮಿಷಗಳಲ್ಲಿ ಬೆಂಕಿಯನ್ನು ನಂದಿಸಿದೆವು” ಎಂದು ತಿಳಿಸಿದ್ದಾರೆ.