ಬಲಪಂಥೀಯರ ಒತ್ತಡ : ಭೀಷ್ಮ ಸಾಹ್ನಿಯ ‘ತಮಸ್‌’ ನಾಟಕ ಪ್ರದರ್ಶನ ಮುಂದೂಡಿದ ಎನ್ಎಸ್‌ಡಿ

Date:

Advertisements
  • ‘ಅನಿವಾರ್ಯ ಕಾರಣಕ್ಕಾಗಿ’ ಮುಂದೂಡಲಾಗಿದೆ ಎಂದ ಎನ್‌ಎಸ್‌ಡಿ
  • ಎರಡು ತಿಂಗಳುಗಳಿಂದ ನಿರಂತರ ಪೂರ್ವಾಭ್ಯಾಸ ಮಾಡಿದ್ದ ಕಲಾವಿದರು

ಬಲಪಂಥೀಯರಿಂದ ತೀವ್ರ ಒತ್ತಡ ಬಂದ ಹಿನ್ನೆಲೆಯಲ್ಲಿ ಭೀಷ್ಮ ಸಾಹ್ನಿ ಕಾದಂಬರಿ ಆಧಾರಿತ ‘ತಮಸ್‌’ ನಾಟಕದ ಪ್ರದರ್ಶನವನ್ನು ಸ್ವಾತಂತ್ರ್ಯ ದಿನಾಚರಣೆಯ ಮುನ್ನಾ ದಿನವೇ ರಾಷ್ಟ್ರೀಯ ನಾಟಕ ಶಾಲೆಯು ಮುಂದೂಡಿರುವ ಸುದ್ದಿಯು ತಡವಾಗಿ ಬೆಳಕಿಗೆ ಬಂದಿದೆ.

ಸ್ವಾತಂತ್ರ್ಯ ದಿನಾಚರಣೆಯ ಭಾಗವಾಗಿ ಆಗಸ್ಟ್‌ 14ರಿಂದ ಭೀಷ್ಮ ಸಾಹ್ನಿ ಬರೆದ ಕಾದಂಬರಿ ಆಧಾರಿತ ತಮಸ್ ನಾಟಕ ಪ್ರದರ್ಶನವನ್ನು ರಾಷ್ಟ್ರೀಯ ನಾಟಕ ಶಾಲೆಯ ಅಭಿಮಂಚ್ ಆಡಿಟೋರಿಯಂನಲ್ಲಿ ಆಯೋಜಿಸಲಾಗಿತ್ತು.

ಆದರೆ ತಮಸ್ ಅನ್ನು ಎಡಪಂಥೀಯರೊಬ್ಬರು ಬರೆದಿದ್ದಾರೆ ಮತ್ತು ಸ್ವಾತಂತ್ರ್ಯದ ಮೊದಲು ಪಂಜಾಬ್‌ನಲ್ಲಿ ನಡೆದ ಕೋಮು ಹಿಂಸಾಚಾರಕ್ಕೆ ಆರ್‌ಎಸ್‌ಎಸ್ ಕಾರಣ ಎಂದು ಕಾದಂಬರಿ ಹೇಳುತ್ತದೆ ಎಂದು ಆರೋಪಿಸಿದ ಬಳಿಕ ನಾಟಕವನ್ನು ರದ್ದುಪಡಿಸಲಾಗಿದೆ ಎಂದು ವರದಿಯಾಗಿದೆ.

Advertisements
nation school of drama

ರಾಜ್ಯಸಭೆಯ ಮಾಜಿ ಸದಸ್ಯ ಬಿಜೆಪಿಯ ಬಲ್ಬೀರ್ ಪುಂಜ್ ಅವರು ಮೊದಲು ಈ ನಾಟಕ ಪ್ರದರ್ಶನಕ್ಕೆ ವಿರೋಧ ವ್ಯಕ್ತಪಡಿಸಲು ಆರಂಭಿಸಿದ ನಂತರ ಬಲಪಂಥೀಯರಿಗೆ ಸೇರಿದ ವಿವಿಧ ವಾಟ್ಸಾಪ್ ಗುಂಪುಗಳಲ್ಲಿ ಇದನ್ನು ರದ್ದುಗೊಳಿಸುವ ಸಂದೇಶವನ್ನು ಹರಡಿದ್ದರು. ಅಲ್ಲದೇ, ಈ ಬಗ್ಗೆ ಟ್ವೀಟ್ ಮಾಡಿ ಕೇಂದ್ರ ಸಚಿವರಾದ ಅರ್ಜುನ್ ರಾಮ್ ಮೇಘವಾಲ್ ಮತ್ತು ಮೀನಾಕ್ಷಿ ಲೇಖಿ ಅವರನ್ನು ಟ್ಯಾಗ್ ಮಾಡಿದ್ದರು ಎಂದು ವರದಿಯಾಗಿದೆ.

ಈ ಇಬ್ಬರು ಸಚಿವರು ಆಗಸ್ಟ್ 14ರಂದು ನಡೆದಿದ್ದ ಉದ್ಘಾಟನಾ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಗಳಾಗಿ ಕಾಣಿಸಿಕೊಂಡಿದ್ದರು. ಈ ವಿಚಾರ ಬೆಳಕಿಗೆ ಬಂದ ಬಳಿಕ ‘ದಿ ಹಿಂದೂ ಪತ್ರಿಕೆ’ ಬಿಜೆಪಿಯ ಬಲ್ಬೀರ್ ಪುಂಜ್ ಅವರನ್ನು ಮಾತನಾಡಿಸಿದೆ.

”ನಾನು ವಾಟ್ಸಪ್‌ ಗ್ರೂಪಿನಲ್ಲಿ ಪೋಸ್ಟ್ ಮಾಡಿರುವ ಸಂದೇಶದಲ್ಲಿ ಹೇಳಲು ಬಯಸಿದ್ದನ್ನು ಹೇಳಿದ್ದೇನೆ. ಈ ವಿಷಯದಲ್ಲಿ ನಾನು ಬೇರೆ ಏನನ್ನೂ ಹೇಳುವುದಿಲ್ಲ’ ಎಂದು ಉತ್ತರಿಸಿದ್ದಾರೆ.

ಆರ್‌ಎಸ್‌ಎಸ್ ಮತ್ತು ಇತರ ಬಲಪಂಥೀಯ ಸಂಘಟನೆಗಳು ಈ ಕಾರ್ಯಕ್ರಮವನ್ನು ರದ್ದುಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುವುದಾಗಿ ತಿಳಿದುಬಂದಿದೆ.

Bhisham Sahni

ಭೀಷ್ಮ ಸಾಹ್ನಿ

ಮುಂದೂಡಿದ ಬಗ್ಗೆ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ (ಎನ್‌ಎಸ್‌ಡಿ) ‘ಅನಿವಾರ್ಯ ಕಾರಣಕ್ಕಾಗಿ ಮುಂದೂಡಲಾಗಿದೆ’ ಎಂದು ಹೇಳಿಕೆ ನೀಡಿದ್ದು, ಯಾವುದೇ ಸ್ಪಷ್ಟವಾದ ಕಾರಣವನ್ನು ತಿಳಿಸಿಲ್ಲ. ಜೊತೆಗೆ ಮುಂದಿನ ಪ್ರದರ್ಶನದ ದಿನಾಂಕವನ್ನೂ ತಿಳಿಸಿಲ್ಲ.

ತಮಸ್ ಕಥೆಯು ಪಂಜಾಬ್‌ನಲ್ಲಿ ಸ್ವಾತಂತ್ರ್ಯದ ಮೊದಲು ನಡೆದ ಕೋಮು ಗಲಭೆಯ ಸುತ್ತ ಹೆಣೆಯಲಾಗಿದೆ. ನಾಟಕ ಪ್ರದರ್ಶನವಿದ್ದ ಹಿನ್ನೆಲೆಯಲ್ಲಿ ಒಂದೂವರೆ ತಿಂಗಳುಗಳಿಂದ ಕಲಾವಿದರು ನಿರಂತರ ಅಭ್ಯಾಸ ಮಾಡಿದ್ದರು ಎಂದು ತಿಳಿದುಬಂದಿದೆ.

“ಎರಡು ತಿಂಗಳುಗಳಿಂದ ತಮಸ್ ನಾಟಕವನ್ನು ಎಲ್ಲ ಕಲಾವಿದರು ಅಭ್ಯಾಸ ಮಾಡಿದ್ದರು. ಕಲಾವಿದರ ಶ್ರಮ ವ್ಯರ್ಥವಾಗಬಾರದು ಎಂದು ನಾವು ಬಯಸುತ್ತೇವೆ. ಆದರೆ ಸದ್ಯಕ್ಕೆ, ಪ್ರದರ್ಶನಗಳು ಯಾವಾಗ ನಡೆಯುತ್ತವೆ ಎಂಬುದರ ಕುರಿತು ಯಾವುದೇ ಮಾಹಿತಿ ಇಲ್ಲ” ಎಂದು ಹೆಸರು ಹೇಳಲಿಚ್ಛಿಸದ ತಂಡದಲ್ಲಿದ್ದ ಕಲಾವಿದರೊಬ್ಬರು ಹೇಳಿರುವುದಾಗಿ ‘ದಿ ಹಿಂದೂ’ ವರದಿ ಮಾಡಿದೆ.

ಈ ಬೆಳವಣಿಗೆಯನ್ನು ಖಂಡಿಸಿರುವ ಪ್ರಗತಿಪರ ಕಲಾವಿದರ ಒಕ್ಕೂಟವು, ‘ಆರೆಸ್ಸೆಸ್ ಮತ್ತು ಬಿಜೆಪಿಯ ಈ ಷಡ್ಯಂತ್ರವನ್ನು ಮುಚ್ಚಿಹಾಕಲು, ರಾಷ್ಟ್ರೀಯ ನಾಟಕ ಶಾಲೆಯ ಆಡಳಿತ ಮಂಡಳಿಯು ನಾಟಕವನ್ನು ಮುಂದೂಡಲು ವಿವಿಧ ಕಾರಣಗಳನ್ನು ನೀಡಿದೆ. ಇದು ಅಕ್ಷಮ್ಯ. ವಿದ್ಯಾರ್ಥಿಗಳ ಸೃಜನಶೀಲ ಅಭಿವ್ಯಕ್ತಿಯನ್ನು ಹತ್ತಿಕ್ಕಲು ಆರ್‌ಎಸ್‌ಎಸ್‌ನವರು ವಿಶ್ವವಿದ್ಯಾನಿಲಯ ಮತ್ತು ಕಾಲೇಜುಗಳಿಗೆ ನುಸುಳುತ್ತಿದ್ದಾರೆ ಎಂಬ ಸತ್ಯ ನಮಗೆ ತಿಳಿದಿದೆ. ಅವರು ತಮ್ಮ ಹಿಡಿತವನ್ನು ಬಲಪಡಿಸಲು, ತಮ್ಮ ಸಿದ್ಧಾಂತ ಮತ್ತು ರಾಜಕೀಯವನ್ನು ಪ್ರಚಾರ ಮಾಡಲು ಕಲಾ ಸಂಸ್ಥೆ ಮತ್ತು ಸಾಂಸ್ಕೃತಿಕ ಕೇಂದ್ರಗಳ ಮೂಲಕ ಪ್ರಯತ್ನಿಸುತ್ತಿದ್ದಾರೆ. ಅವರು ಐತಿಹಾಸಿಕ ಸತ್ಯಗಳನ್ನು ತಮ್ಮದೇ ಆದ ರೀತಿಯಲ್ಲಿ ಚಿತ್ರಿಸಲು ಯತ್ನಿಸುತ್ತಾರೆ. ಸತ್ಯಗಳು ಅವರ ಸುಳ್ಳು ನಿರೂಪಣೆಗೆ ಹೊಂದಿಕೆಯಾಗದಿದ್ದಾಗ, ಅವುಗಳನ್ನು ಕತ್ತಲಲ್ಲಿ ಇರಿಸುವ ಪ್ರಯತ್ನಕ್ಕೆ ಕೈ ಹಾಕುತ್ತಾರೆ. ನಿರಂಕುಶ ಮತ್ತು ಸರ್ವಾಧಿಕಾರಿ ನಡವಳಿಕೆಯನ್ನು ನಾವು ಖಂಡಿಸುತ್ತೇವೆ’ ಎಂದು ಹೇಳಿಕೆಯಲ್ಲಿ ತಿಳಿಸಿದೆ.

ಆಗಸ್ಟ್ 14 ಅನ್ನು ಸ್ಮರಣಾರ್ಥ ದಿನವನ್ನಾಗಿ ಆಚರಿಸಲು ಪ್ರಧಾನಿ ನರೇಂದ್ರ ಮೋದಿಯವರ ಕರೆಯಂತೆ ವಿಭಜನೆಯ ಭೀಕರತೆ ಮತ್ತು ಸಮಾಜದಲ್ಲಿ ನಂತರದಲ್ಲಾದ ಘಟನೆಗಳನ್ನು ಎತ್ತಿ ತೋರಿಸುವ ಪ್ರಯತ್ನದ ಉದ್ದೇಶದಿಂದ ಈ ನಾಟಕವನ್ನು ಪ್ರದರ್ಶಿಸಲು ಉದ್ದೇಶಿಸಲಾಗಿತ್ತು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಯಚೂರು | ಬಣದಲ್ಲಿ ಅಸಮಾಧಾನ : ಎಂಎಲ್ ಸಿ ಕಾರು ತಡೆ ವಾಗ್ವಾದ

ಎಂಎಲ್ ಸಿ ಶರಣಗೌಡ ಪಾಟೀಲ್‌ ಅವರ ಕಾರಿಗೆ ಡಿ ಎಸ್ ಹುಲಗೇರಿ...

ಕಲಬುರಗಿ | ಮೂರು ತಿಂಗಳಿಂದ ಪಾವತಿಯಾಗದ ʼಗೃಹಲಕ್ಷ್ಮೀʼ ಹಣ : ವೆಲ್ಫೇರ್ ಪಾರ್ಟಿ ಆಕ್ರೋಶ

ಕರ್ನಾಟಕ ರಾಜ್ಯ ಸರ್ಕಾರ ಜಾರಿಗೊಳಿಸಿದ ಪಂಚ ಗ್ಯಾರಂಟಿಯ ಗೃಹಲಕ್ಷ್ಮೀ ಯೋಜನೆಯ ಹಣ...

ಬೆಳಗಾವಿ : ಮೂರು ವರ್ಷದ ಹೆಣ್ಣು ಮಗುವನ್ನು ಆಸ್ಪತ್ರೆಯಲ್ಲಿ ಬಿಟ್ಟು ಹೋದ ತಂದೆ ತಾಯಿ

ತಾಯಿಯ ಮಡಿಲಿಗೆ ತವಕಿಸುತ್ತಿರುವ ಮೂರು ವರ್ಷದ ಹೆಣ್ಣುಮಗುವನ್ನು ಆಸ್ಪತ್ರೆಯಲ್ಲಿ ತಂದೆ ತಾಯಿಗಳು...

Download Eedina App Android / iOS

X