ರಾಯಚೂರಿನ ಹೊರವಲಯದ ಎಕ್ಲಾಸಪೂರು ಬಡಾವಣೆಯಲ್ಲಿ ನೂತನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬಾಂಬ್ ಇದೆ ಎಂದು ಜಿಲ್ಲಾಧಿಕಾರಿ ಕಚೇರಿಗೆ ಇಮೇಲ್ ಬಂದಿದ್ದು ಸಿಬ್ಬಂದಿಗಳು ಹೌಹಾರಿ ಕಚೇರಿಯ ಹೊರಗೆ ಬಂದಿದ್ದಾರೆ.
ಜಿಲ್ಲಾಧಿಕಾರಿ ಅವರಿಗೆ ಇಮೇಲ್ ಸಂದೇಶ ಬಂದಿದ್ದು ಮಾಹಿತಿ ತಿಳಿಯುತ್ತಿದ್ದಂತೆ ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಕಚೇರಿಯಿಂದ ಓಡಿ ಹೊರಬಂದರು. ಮಾಹಿತಿ ಪಡೆಯುತ್ತಿದ್ದಂತೆ ಬಾಂಬ್ ನಿಷ್ಕ್ರಿಯ ದಳ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.
ಈ ಸುದ್ದಿ ಓದಿದ್ದೀರಾ? ರಾಯಚೂರು |ಕೆ ಎಸ್ ಆರ್ ಟಿ ಸಿ ಬಸ್, ಬೈಕ್ ನಡುವೆ ಡಿಕ್ಕಿ ; ಓರ್ವ ಸಾವು
ಈ ಬಗ್ಗೆ ಎಸ್ ಪಿ ಎಂ.ಪುಟ್ಟಮಾದಯ್ಯ ಅವರು ಇಮೇಲ್ ಬಂದಿರುವುದು ಖಚಿತಪಡಿಸಿದ್ದು, ಪೊಲೀಸ್ ತಂಡದೊಂದಿಗೆ ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸುತ್ತಿದ್ದಾರೆ.