ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಬಲವಂತವಾಗಿ ರೈತರ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲು ಮುಂದಾಗಿದೆ ಕೂಡಲೇ ಅದನ್ನು ಕೈ ಬಿಡಬೇಕು ಎಂದು ಕರ್ನಾಟಕ ಜನಶಕ್ತಿ ಸಂಘಟನೆ ವತಿಯಿಂದ ಪ್ರತಿಭಟಿಸಿದರು.
ನಗರದ ಬಸವನ ಬಾವಿ ,ಚಂದ್ರ ಮೌಳೇಶ್ವರ ಚೌಕ್ , ಗಾಂಧಿ ಚೌಕ್ , ಬಸವೇಶ್ವರ ಚೌಕ್ ,ವಾಲ್ಮೀಕಿ ಚೌಕ್ , ಯಾಕ್ಲಾಸಪುರ ಹಾಗೂ ಜಿಲ್ಲಾಧಿಕಾರಿ ಕಚೇರಿವರೆಗೆ ಮರೆವಣಿಗೆ ನಡೆಸಿ ನಮ್ಮ ಭೂಮಿ ನಮ್ಮ ಹಕ್ಕು ಘೋಷಣೆಯಿಂದ ಆಗ್ರಹಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ರಾಯಚೂರು ಹೋಬಳಿಯ ಕುರುಬದೊಡ್ಡಿ ಗ್ರಾಮದಲ್ಲಿ 147 ಎಕರೆ, ಚಂದ್ರಬಂಡ ಹೋಬಳಿಯ ಚಂದ್ರಬಂಡ, ಸಿಂಗನೋಡಿ ಗ್ರಾಮದಲ್ಲಿ 508 ಎಕರೆ ಹಿಡುವಳಿಯ ಒಟ್ಟು 655 ಎಕರೆ ಸ್ವಾಧೀನಕ್ಕೆ ಮುಂದಾಗಿದೆ. ಜಿಲ್ಲಾಧಿಕಾರಿ ಜುಲೈ 28 ರಂದು ಹಿಡುವಳಿ ರೈತರ ಸಭೆ ಕರೆದಿದ್ದಾರೆ. ಆ ಸಭೆಯಲ್ಲಿ ರೈತರ ಭೂಮಿ ಸ್ವಾಧೀನ ಬಗ್ಗೆ ಕೈಬಿಡಬೇಕು ಎಂದು ಆಕ್ರೋಶಿಸಿದರು.

ರಾಯಚೂರು ತಾಲೂಕಿನ ಕುರುಬದೊಡ್ಡಿ ಗ್ರಾಮದಲ್ಲಿ ಪಟ್ಟಾ ಮತ್ತು ಸರ್ಕಾರಿ ಜಮೀನಿನ ಸೇರಿ ಒಟ್ಟು 600 ಎಕರೆ ಅಷ್ಟೇ ಮಾತ್ರ ಸೀಮಾಂತರ ಹೊಂದಿದ್ದು, ಇದರಲ್ಲಿ 300 ಎಕರೆಯಷ್ಟು ಕೈಗಾರಿಕಾ ಪ್ರಾದೇಶಿಕ ಅಭಿವೃದ್ಧಿಗಾಗಿ ಭೂಮಿಯನ್ನು ವಶಪಡಿಸಿಕೊಳ್ಳಲಾಗಿದೆ. ಉಳಿದ ಸರ್ಕಾರಿ ಭೂಮಿಯಲ್ಲಿ 24 ಕುಟುಂಬಗಳಿಗೆ 1997 ರಲ್ಲಿ ಭೂ ಮಂಜೂರಾತಿ ಸಮಿತಿಯು ಭೂಮಿಯನ್ನು ಮಂಜೂರು ಮಾಡಿರುತ್ತಾರೆ. ಆದೇರೀತಿಯಾಗಿ ಇನ್ನೂಳಿದ ಸಾಗುವಳಿ ಚೀಟಿ ಭೂ ಮಂಜುರಾತಿ ಸಮಿತಿಯಲ್ಲಿ ಮಂಜುರಾದ ಫಲಾನುಭವಿಗಳಿಗೆ ಇಲ್ಲಿಯವರೆಗೂ ಪಹಣಿ ಆಗಿರುವುದಿಲ್ಲ. ಅತ್ಯಂತ ಭೂಹೀನ ಕುಟುಂಬಗಳು 26 ಕುಟುಂಬಗಳ ಫಾರಂ ನಂ: 50, 53 ಮತ್ತು 57 ಅರ್ಜಿಗಳನ್ನು ಸಲ್ಲಿಸಿ. ಸುಮಾರು 70 ವರ್ಷಗಳಿಂದ ಸಾಗುವಳಿ ಮಾಡಿಕೊಂಡು ಬಂದಿರುತ್ತಾರೆ. ಆದರೆ ಇದುವರೆಗೂ ಭೂ ಮಂಜೂರಾತಿ ಸಮಿತಿಯಲ್ಲಿ ಯಾವುದೇ ಕ್ರಮವನ್ನು ಜರುಗಿಸಿರುವುದಿಲ್ಲ ಮತ್ತು ಪಹಣಿ ಆಗಿರುವುದಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಆಂಜನೇಯ ಕುರುಬದೊಡ್ಡಿ, ಕುರುಬದೊಡ್ಡಿ ಗ್ರಾಮಕ್ಕೆ ಅತ್ಯಂತ ಕಡಿಮೆ ಸೀಮಾಂತರದ ಜಮೀನು ಹೊಂದಿದ್ದು, ಇದರಲ್ಲಿ ಸರಕಾರಕ್ಕೆ ಉಳಿದಿರುವ 93 ಎಕರೆಯಲ್ಲಿ ರಾಜ್ಯ ಪೊಲೀಸ್ ಪಡೆಗೆ ಭೂಮಿ ನೀಡಲಾಗುತ್ತಿದೆ. ಇದರಿಂದ ಗ್ರಾಮಕ್ಕೆ ಭೂಮಿ ಉಳಿಯುವುದಿಲ್ಲ, ಇದರಿಂದ ರೈತರನ್ನು ಒಕ್ಕಲೆಬ್ಬಿಸುವ ಹುನ್ನಾರ ನಡೆದಿದೆ. ಸರ್ಕಾರ ಉದ್ದೇಶಿಸಲಾಗಿರುವ ಯೋಜನೆಗೆ ರಾಯಚೂರು ಸುತ್ತ ಮುತ್ತಲಿನ 7 & 8 ಕಿ.ಮೀಟರ್ ಅಂತರದಲ್ಲಿರುವ ಇರುವ ಮಲಿಯಬಾದ ಗ್ರಾಮದಲ್ಲಿ ಸರ್ಕಾರಿ ಜಮೀನು 85 ಎಕರೆ ಇರುತ್ತದೆ ಅಲ್ಲಿ ಸ್ಥಾಪಿಸಲಿ ಎಂದು ಕಿಡಿಕಾರಿದರು.
ಬಿಜನಗೇರಾ ಗ್ರಾಮದಲ್ಲಿ ಅತೀ ಹೆಚ್ಚು ಸರ್ಕಾರಿ ಮತ್ತು ಗೈರಾಣಿ ಜಮೀನು ಇರುತ್ತದೆ. ಕಟ್ಟಟ್ಟೂರು ಗ್ರಾಮದಲ್ಲಿ ವಿಸ್ತೀರ್ಣ 97 ಎಕರೆ 00 ಗುಂಟೆ ಸರ್ಕಾರಿ ಗೈರಾಣಿ ಜಮೀನು ಇರುತ್ತದೆ. ಹಾಗೂ ವಡವಾಟಿ ಗ್ರಾಮದಲ್ಲಿ 100 ಎಕರೆ ಸರ್ಕಾರಿ ಜಮೀನು ಇರುತ್ತದೆ. ಸರ್ಕಾರ ಉದ್ದೇಶಿಸಲಾಗಿರುವ ಯೋಜನೆಗೆ ಸಾವಿರಾರು ಎಕರೆ ಲಭ್ಯವಿದೆ. ಆದ್ದರಿಂದ ಕುರುಬದೊಡ್ಡಿ ಗ್ರಾಮದಲ್ಲಿ ಈ ಯೋಜನೆ ಕೈಗೊಂಡಿರುವುದನ್ನು ಬಿಟ್ಟು ಬೇರೆ ಗ್ರಾಮಗಳಲ್ಲಿ ಪೊಲೀಸ್ ಮೈದಾನಕ್ಕಾಗಿ ಮತ್ತು ಸಮುಚ್ಚಾಯ ನಿರ್ಮಾಣ ಮಾಡಬೇಕೆಂದು ಹೇಳಿದರು.

ಕೈಗಾರಿಕೆಗೆ ಭೂಮಿ ನೀಡಬೇಕು ಎಂದು ನೋಟಿಸ್ ಕಳುಹಿಸುತ್ತಿದ್ದಾರೆ. ನಾವು ಯಾವುದೇ ಒಂದು ಇಂಚು ಕೂಡ ಭೂಮಿ ಬಿಟ್ಟು ಕೊಡಲ್ಲ ಕೈಗಾರಿಕೆ ಬೇರೆ ಕಡೆ ಮಾಡಬೇಕು ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ರಸಗೊಬ್ಬರ ಪೂರೈಕೆ ಮಾಡುವಂತೆ ರೈತ ಸಂಘಟನೆ ಒತ್ತಾಯ
ಈ ವೇಳೆ ಮಾರೆಪ್ಪ ಹರವಿ, ರಂಗಾರೆಡ್ಡಿ ,ಹನುಮಂತ ಗುಂಜಳ್ಳಿ , ಬಂಗಾರಿ ನರಸಿಂಹ,ಮಹೇಂದ್ರ ಗಾಜರಹಾಳ , ನರಸಿಂಹ , ಪಿ.ಮಾರೆಪ್ಪ ,ನರಸಪ್ಪ ,
