ತುಂಬಿ ಹರಿಯುತ್ತಿದ್ದ ಹಳ್ಳ ದಾಟುವಾಗ ಟ್ರಾಕ್ಟರ್ ಸಿಲುಕಿ 15 ಜನರ ರಕ್ಷಣೆ ಮಾಡಿರುವ ಘಟನೆ ಮಸ್ಕಿ ತಾಲ್ಲೂಕಿನ ಚಿಕ್ಕಉದ್ಭಾಳ ಗ್ರಾಮದ ಹೊರವಲಯದಲ್ಲಿ ನಡೆದಿದೆ.
ಮಸ್ಕಿ ಕ್ಷೇತ್ರದ ಬಳಗಾನೂರಿನ ಪಕ್ಕದಲ್ಲಿರುವ ಚಿಕ್ಕ ಉದ್ಬಾಳದಲ್ಲಿ ಬಸವಣ್ಣನ ದೇವಸ್ಥಾನಕ್ಕೆ ಭಕ್ತರು ದರ್ಶನ ಪಡೆಯಲು ಹೋಗುತ್ತಿದ್ದರು.ನಾರಾಯಣನಗರ ಕ್ಯಾಂಪ ಮತ್ತು ಚಿಕ್ಕ ಉದ್ಬಾಳದ ಮಧ್ಯದಲ್ಲಿರುವ ಹಳ್ಳವನ್ನು ದಾಟಿ ಹೋಗುವಾಗ ಘಟನೆ ಸಂಭವಿಸಿದೆ ಎನ್ನಲಾಗಿದೆ.
ಮಳೆಗಾಲದಲ್ಲಿ ಹಳ್ಳ ತುಂಬಿ ಹರಿಯುವುದರಿಂದ ಭಕ್ತರು ದೇವಸ್ಥಾನಕ್ಕೆ ಹೋಗಬೇಕಾದರೆ ಪ್ರತಿ ವರ್ಷ ಹರಸಾಹಸ ಪಡಬೇಕಾಗುತ್ತದೆ.ಈ ಹಳ್ಳಕ್ಕೊಂದು ಸೇತುವೆ ನಿರ್ಮಾಣ ಮಾಡಿದರೆ ಭಕ್ತರಿಗೆ ಮತ್ತು ಸುತ್ತಲಿನ ರೈತರಿಗೆ ಅನುಕೂಲವಾಗುತ್ತದೆ ಎನ್ನುತ್ತಾರೆ ಗ್ರಾಮಸ್ಥರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಭಾರಿ ಮಳೆಗೆ ತುಂಬಿ ಹರಿದ ಹಳ್ಳ ; ಸಂಚಾರ ಅಸ್ತವ್ಯಸ್ತ
ಸೇತುವೆ ನಿರ್ಮಾಣ ಬಗ್ಗೆ ಮಾಜಿ ಶಾಸಕ ಪ್ರತಾಪಗೌಡ ಹಾಗೂ ಹಾಲಿ ಶಾಸಕ ಬಸನಗೌಡ ತುರುವಿಹಾಳ ಅವರಿಗೆ ಮನವಿ ಸಲ್ಲಿಸಿದರು ಅಭಿವೃದ್ದಿ ಕಂಡಿಲ್ಲ ಎಂದು ಭಕ್ತರು ಹಾಗೂ ಗ್ರಾಮದ ಜನರು ಅಳಲು ತೋಡಿಕೊಂಡರು.
