ಶಿವಮೊಗ್ಗ ಬುಕರ್ ಪ್ರಶಸ್ತಿ ಪುರಸ್ಕೃತ ಕನ್ನಡದ ಸಾಹಿತಿ ಬಾನು ಮುಷ್ತಾಕ್ ಅವರ `ಎದೆಯ ಹಣತೆ’ ಹಾಗೂ `ಒಮ್ಮೆ ಹೆಣ್ಣಾಗು ಪ್ರಭುವೆ’ ಎರಡು ಕತೆಗಳ ವಿಭಿನ್ನ ರಂಗಪ್ರಸ್ತುತಿ ಇದೇ ತಿಂಗಳ 25ರಂದು ಸಂಜೆ 5.30ಕ್ಕೆ ರಂಗಾಯಣ, ಸುವರ್ಣ ಸಾಂಸ್ಕೃತಿಕ ಭವನದಲ್ಲಿ ನಡೆಯಲಿದೆ.
ನೇಟಿವ್ ಥಿಯೇಟರ್ ಸಂಸ್ಥೆ ಪ್ರಸ್ತುತಪಡಿಸಲಿರುವ ಈ ವಿಶೇಷ ರಂಗಪ್ರಸ್ತುತಿಯನ್ನು ಹಾಲಸ್ವಾಮಿ ಆರ್.ಎಸ್. ನಿರ್ದೇಶನ ಮಾಡಿದ್ದಾರೆ. ಈ ಎರಡೂ ಕತೆಗಳನ್ನು ಡಾ. ಹೆಚ್.ಎಸ್. ನಾಗಭೂಷಣ್ ಹಾಗೂ ಭಾರತಿದೇವಿ ಪಿ. ಪ್ರಸ್ತುತಪಡಿಸಲಿದ್ದಾರೆ.

ಹಿಂದೂಸ್ತಾನಿ ಗಾಯಕ ನೌಷಾದ್ ಹರ್ಲಾಪುರ್ ಅವರ ಗಾಯನ ಮತ್ತು ಶಂಕರ್ ಬೆಳಲಕಟ್ಟೆ ಅವರ ಬೆಳಕು, ರಂಗಸಜ್ಜಿಕೆ ಈ ಪ್ರದರ್ಶನಕ್ಕೆ ಇದೆ. ಸಾಹಿತಿ ಅಕ್ಷತಾ ಹುಂಚದಕಟ್ಟೆ ಅವರು ಬಾನು ಮುಷ್ತಾಕ್ ಅವರ ಬದುಕು-ಬರಹ-ಬುಕರ್ ಎಂಬ ವಿಷಯದ ಬಗ್ಗೆ ಮಾತನಾಡಲಿದ್ದಾರೆ.
ಸಾಹಿತ್ಯ ಕೃತಿಯೊಂದನ್ನು ಈ ರೀತಿ ವೇದಿಕೆಗೆ ಅಳವಡಿಸುತ್ತಿರುವುದು ಇದೇ ಮೊದಲು. ಉಚಿತ ಪ್ರವೇಶವಾಗಿದ್ದು, ಯಾವುದೇ ವೇದಿಕೆ ಕಾರ್ಯಕ್ರಮ ಇಲ್ಲದ ಈ ವಿಭಿನ್ನ ರಂಗಪ್ರಸ್ತುತಿಗೆ ಸಾಹಿತ್ಯಾಭಿಮಾನಿಗಳು ಹಾಗೂ ರಂಗಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತವಂತೆ ನೇಟಿವ್ ಥಿಯೇಟರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಾಘವೇಂದ್ರ ರವರು ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಉಂಡಿಗನಾಳು ಗ್ರಾಮದವರು. ಕುವೆಂಪು ವಿಶ್ವವಿದ್ಯಾಲಯದಲ್ಲಿ ಬಿಎಸ್ಸಿ ಪದವಿ ಪಡೆದಿರುವ ಇವರು ಈದಿನ ಡಾಟ್ ಕಾಮ್ ಮಾಧ್ಯಮ ಸಂಸ್ಥೆಯಲ್ಲಿ ಕಳೆದ 2023 ರಿಂದ ಶಿವಮೊಗ್ಗ ಜಿಲ್ಲಾ ವರದಿಗಾರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ವರದಿಗಾರಿಕೆ, ರಾಜಕೀಯ ವಿಶ್ಲೇಷಣೆ,Anchoring, (ನಿರೂಪಣೆ) ವಿಶೇಷ ಸ್ಟೋರಿ ಹಾಗೂ ತನಿಖಾ ವರದಿಗಾರಿಕೆ ಮಾಡುವುದು ಇವರ ಅಚ್ಚು ಮೆಚ್ಚಿನ ಕ್ಷೇತ್ರ.