ತುಮಕೂರು | ದೇಶದ ಟಾಪ್ 75 ಸರ್ಕಾರಿ ವಿವಿಗಳ ಪಟ್ಟಿಯಲ್ಲಿ ತುಮಕೂರು ವಿಶ್ವ ವಿದ್ಯಾನಿಲಯ

Date:

Advertisements

ಔಟ್ ಲುಕ್ -ಐಕೇರ್ ಸಂಸ್ಥೆ ಸಮೀಕ್ಷೆ ನಡೆಸಿ ದೇಶದ 75 ಅತ್ಯುತ್ತಮ ಸರ್ಕಾರಿ ವಿವಿಗಳ ಪಟ್ಟಿ ಬಿಡುಗಡೆಮಾಡಿದ್ದು, ಪಟ್ಟಿಯಲ್ಲಿ ರಾಜ್ಯದ 6 ವಿವಿಗಳು ಸ್ಥಾನಪಡೆದಿದ್ದು, ಅತ್ಯಂತ ಹಳೆಯವಿವಿಯಾದ ಕರ್ನಾಟಕ ವಿವಿಯನ್ನು ಹಿಂದಿಕ್ಕಿ ತುಮಕೂರು ವಿವಿ ಒಂದುಸ್ಥಾನ ಮೇಲೇರಿರುವುದು ಕಂಡುಬಂದಿದೆ. ಸಮೀಕ್ಷೆಯಲ್ಲಿ ವಿವಿಗಳ ಅಕಾಡೆಮಿಕ್ ಕಾರ್ಯ ಚಟುವಟಿಕೆ, ಸಂಶೋಧನೆ, ಕೈಗಾರಿಕಾ ಸಂಪರ್ಕ, ಕ್ಯಾಂಪಸ್ ಪ್ಲೇಸ್‌ಮೆಂಟ್, ಮೂಲ ಸೌಲಭ್ಯ, ಆಡಳಿತ ಹಾಗೂ ಔಟ್‌ ರೀಚ್ ಕಾರ್ಯಕ್ಷೇತ್ರಗಳಿಗೆ ನಿರ್ದಿಷ್ಟ ಅಂಕಗಳ ಮಾನದಂಡಮಡಿ ವಿವಿಗಳ ಸ್ಥಾನಕ್ರಮಾಂಕವನ್ನು ನಿಗದಿಪಡಿಸಲಾಗಿದ್ದು, 75 ವಿವಿಗಳಲ್ಲಿ ಟಾಪ್ 10ರಲ್ಲಿ ಅತ್ಯಂತ ಹಳೆಯದಾದ ಮೈಸೂರು ವಿವಿ 915.16 ಅಂಕಗಳಿಕೆಯೊಂದಿಗೆ 8ನೇ ಸ್ಥಾನ ಪಡೆದಿದೆ.

ಬೆಂಗಳೂರು ವಿವಿ 883.52 ಅಂಕಗಳಿಕೆಯೊಂದಿಗೆ 24ನೇಸ್ಥಾನಗಳಿಸಿದರೆ, ಶಿವಮೊಗ್ಗ ಕುವೆಂಪು ವಿವಿ 862.25 ಅಂಕಗಳಿಕೆಯೊಂದಿಗೆ 30ನೇಸ್ಥಾನ, ಮಂಗಳೂರು ವಿವಿ 2 22 824.32 44ನೇ ಸ್ಥಾನ, ತುಮಕೂರು ವಿವಿ 808.61 ಅಂಕಗಳೊಂದಿಗೆ 53ನೇ ಕ್ರಮಾಂಕದಲ್ಲಿ ಸ್ಥಾನ ಪಡೆದಿದೆ. ಧಾರವಾಡದ ಕರ್ನಾಟಕ ವಿವಿ 755.06 ಅಂಕಗಳೊಂದಿಗೆ 68ನೇ ಸ್ಥಾನಗಳಿಸಿದೆ. ರಾಜ್ಯದಲ್ಲಿ 42 ಸರ್ಕಾರಿ ವಿಶ್ವವಿದ್ಯಾಲಯಗಳಿದ್ದು ಇವುಗಳಲ್ಲಿ 6 ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟಿರುವುದು ಹೆಮ್ಮೆಯ ಸಂಗತಿಯೆನಿಸಿದೆ.

ವಿಶೇಷವಾಗಿ ಜಿಲ್ಲೆಗೊಂದು ವಿವಿ ಪರಿಕಲ್ಪನೆಯಡಿ 2004ರಲ್ಲಿ ಆಗಿನ ಉನ್ನತ ಶಿಕ್ಷಣ ಸಚಿವ ಡಾ.ಜಿ.ಪರಮೇಶರ್ ಆಸಕ್ತಿಯಿಂದ ಮೊದಲನೆಯದಾಗಿ ಸ್ಥಾಪನೆಯಾದ ತುಮಕೂರು ವಿವಿ ಈ ಹಂತಕ್ಕೆ ತಲುಪಿರುವುದು ವಿವಿ ಆಡಳಿತ ಮಂಡಳಿ, ವಿದ್ಯಾರ್ಥಿಗಳಲ್ಲಿ ಸಂತಸಕ್ಕೆ ಕಾರಣವಾಗಿದೆ. ಕುಲಪತಿ ಪ್ರೊ.ಎಂ.ವೆಂಕಟೇಶ್ವ‌ರಲು, ಕುಲಸಚಿವ ಪ್ರೊ.ಕೊಟ್ರೇಶ್ ಅವರು ಈದಿನ ಡಾಟ್ ಕಾಮ್ ನೊಂದಿಗೆ ಸಂತಸ ಹಂಚಿಕೊಂಡು, ಈ ಸ್ಥಾನಗಳಿಕೆ ನಮ್ಮ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ ಎಂದಿದ್ದಾರೆ.

Advertisements

“ದೇಶದ 75 ಅತ್ಯುತ್ತಮ ಸಾರ್ವತ್ರಿಕ ವಿವಿಗಳ ಪಟ್ಟಿಯಲ್ಲಿ ತುಮಕೂರು ವಿವಿ ಸ್ಥಾನಪಡೆದಿರುವುದು ಹೆಮ್ಮೆ ತರಿಸಿದೆ. ಈ ಹಂತದ ಬೆಳವಣಿಗೆಯ ಹಿಂದೆ ರಾಜ್ಯ, ಕೇಂದ್ರ ಸರ್ಕಾರದ ಸಹಕಾರ ಜಿಲ್ಲೆಯ ಜನಪ್ರತಿನಿಧಿಗಳು, ವಿಶೇಷವಾಗಿ ನಮ್ಮ ಬೋಧಕ-ಬೋಧಕೇತರ ವರ್ಗ, ವಿದ್ಯಾರ್ಥಿಗಳ ಪರಿಶ್ರಮ ಅಡಗಿದೆ. ಹಿಂದಿನ ಕುಲಪತಿಗಳು, ಕುಲಸಚಿವರು, ಸಿಂಡಿಕೇಟ್, ವಿದ್ಯಾ ವಿಷಯಕ ಪರಿಷತ್ ಸದಸ್ಯರ ಸೇವೆಯನ್ನು ಈ ಸಂದರ್ಭದಲ್ಲಿ ಸ್ಮರಿಸುವೆ ಎಂದು ತುಮಕೂರು ವಿಶ್ವ ವಿದ್ಯಾನಿಲಯದ ಕುಲಪತಿ ಪ್ರೋ. ಎಂ ವೆಂಕಟೇಶ್ವರಲು ಪ್ರತಿಕ್ರಿಯಿಸಿದರು

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಚಿವ ಕೆ ಎನ್ ರಾಜಣ್ಣ ರಾಜೀನಾಮೆ ನೀಡಿಲ್ಲ, ಬದಲಿಗೆ ಸಂಪುಟದಿಂದ ಉಚ್ಚಾಟನೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಹಕಾರ ಸಚಿವ ಕೆ ಎನ್ ರಾಜಣ್ಣ ಅವರಿಗೆ...

ರಾಯಚೂರು | ಬಣದಲ್ಲಿ ಅಸಮಾಧಾನ : ಎಂಎಲ್ ಸಿ ಕಾರು ತಡೆ ವಾಗ್ವಾದ

ಎಂಎಲ್ ಸಿ ಶರಣಗೌಡ ಪಾಟೀಲ್‌ ಅವರ ಕಾರಿಗೆ ಡಿ ಎಸ್ ಹುಲಗೇರಿ...

ಕಲಬುರಗಿ | ಮೂರು ತಿಂಗಳಿಂದ ಪಾವತಿಯಾಗದ ʼಗೃಹಲಕ್ಷ್ಮೀʼ ಹಣ : ವೆಲ್ಫೇರ್ ಪಾರ್ಟಿ ಆಕ್ರೋಶ

ಕರ್ನಾಟಕ ರಾಜ್ಯ ಸರ್ಕಾರ ಜಾರಿಗೊಳಿಸಿದ ಪಂಚ ಗ್ಯಾರಂಟಿಯ ಗೃಹಲಕ್ಷ್ಮೀ ಯೋಜನೆಯ ಹಣ...

ಬೆಳಗಾವಿ : ಮೂರು ವರ್ಷದ ಹೆಣ್ಣು ಮಗುವನ್ನು ಆಸ್ಪತ್ರೆಯಲ್ಲಿ ಬಿಟ್ಟು ಹೋದ ತಂದೆ ತಾಯಿ

ತಾಯಿಯ ಮಡಿಲಿಗೆ ತವಕಿಸುತ್ತಿರುವ ಮೂರು ವರ್ಷದ ಹೆಣ್ಣುಮಗುವನ್ನು ಆಸ್ಪತ್ರೆಯಲ್ಲಿ ತಂದೆ ತಾಯಿಗಳು...

Download Eedina App Android / iOS

X