ಅತಿಯಾಗಿ ಮಂಜು ಕವಿದಿದ್ದ ಕಾರಣ ಬೆಳ್ಳಂಬೆಳಗ್ಗೆ ಅಪಘಾತಕ್ಕೀಡಾಗಿದ್ದ ಕೋಳಿ ಸಾಗಾಟದ ವಾಹನದಲ್ಲಿ ಪಿಕಪ್ ಚಾಲಕ ಹಾಗೂ ಕ್ಲೀನರ್ ತೀವ್ರವಾಗಿ ಗಾಯಗೊಂಡು ಸಹಾಯಕ್ಕಾಗಿ ಅಂಗಲಾಚುತ್ತಿದ್ದರೂ ಕೂಡ ಅವರನ್ನು ರಕ್ಷಣೆ ಮಾಡುವ ಬದಲು ಗ್ರಾಮಸ್ಥರು, ಕೋಳಿ ಕದ್ದೊಯ್ದು ಅಮಾನವೀಯ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ದಿಲ್ಲಿ- ಆಗ್ರಾ ಹೆದ್ದಾರಿಯ ಜೇವರ್ ಪೊಲೀಸ್ ಠಾಣಾ ವ್ಯಾಪ್ತಿಯ ದಯನಾಥಪುರ ಪ್ರದೇಶದ ಎಕ್ಸ್‌ಪ್ರೆಸ್‌ವೇಯ ಆಗ್ರಾದಿಂದ ನೋಯ್ಡಾ ಲೇನ್‌ನಲ್ಲಿ ಬೆಳಗ್ಗೆ 8 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಕೋಳಿ ತುಂಬಿದ್ದ ಪಿಕಪ್ ವಾಹನವು ಆಗ್ರಾದಿಂದ ಕಸಾಗಂಜ್‌ಗೆ ತೆರಳುತ್ತಿತ್ತು. ಈ ವೇಳೆ ಮಂಜಿನ ಕಾರಣದಿಂದಾಗಿ ಟ್ರಕ್ ಹಾಗೂ ಪಿಕಪ್ ವಾಹನದ ನಡುವೆ ಅಪಘಾತ ಸಂಭವಿಸಿದೆ.
In UP’s Agra, a lorry carrying chickens met with an accident in a road pile up due to dense fog. Commuters can be seen grabbing chickens and fleeing from the spot. Some bundled them in sack. pic.twitter.com/hBUaFCjj7g
— Piyush Rai (@Benarasiyaa) December 27, 2023
ಈ ವೇಳೆ ಗಾಯಾಳು ಆಗಿದ್ದ ವಾಹನ ಚಾಲಕ ಸುನಿಲ್ ಕುಮಾರ್ ಅವರನ್ನು ಆರೈಕೆ ಮಾಡುವ ಬದಲು ಜನ ಪಿಕಪ್‌ನಲ್ಲಿದ್ದ ಕೋಳಿ ಕದಿಯುವುದಲ್ಲೇ ವ್ಯಸ್ತರಾಗಿದ್ದರು. ಆರಂಭದಲ್ಲಿ ಜನರನ್ನು ತಡೆಯಲು ಚಾಲಕ ಯತ್ನಿಸಿದರಾದರೂ, ಜನರು ಗುಂಪು ಗುಂಪಾಗಿ ಬಂದು ಚೀಲದಲ್ಲಿ ತುಂಬಿಸಲು ಯತ್ನಿಸಿದ್ದರಿಂದ ನನಗೆ ತಡೆಯಲು ಸಾಧ್ಯವಾಗಿಲ್ಲ ಎಂದು ಚಾಲಕ ತಿಳಿಸಿದ್ದಾನೆ.
ಸುಮಾರು ಎರಡೂವರೆ ಲಕ್ಷ ರೂ. ಮೌಲ್ಯದ ಕೋಳಿಗಳು ಕಳ್ಳತನ ಆಗಿವೆ ಎಂದು ತಿಳಿದು ಬಂದಿದೆ. ಇದರಿಂದ ಕೋಳಿ ಪೌಲ್ಟ್ರಿ ಮಾಲೀಕರಿಗೆ ಅಪಾರ ನಷ್ಟ ಸಂಭವಿಸಿದೆ. ಜನರು ಕೋಳಿಗಳನ್ನು ಕದಿಯುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ನೆಟ್ಟಿಗರು ಗ್ರಾಮಸ್ಥರ ಕೃತ್ಯಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಪೊಲೀಸ್, ಆಂಬ್ಯುಲೆನ್ಸ್ ಸೇರಿದಂತೆ ರಕ್ಷಣಾ ಸಿಬ್ಬಂದಿಗೆ ತುರ್ತು ಕರೆಯಾದರೂ ಮಾಡಬಹುದಿತ್ತು. ಅದನ್ನು ಬಿಟ್ಟು ಕೋಳಿಗಳ ಕಳ್ಳತನದಲ್ಲೇ ಜನರು ಬ್ಯುಝಿಯಾಗಿರುವುದನ್ನು ನೋಡಿದರೆ ಕನಿಷ್ಠ ಮಾನವೀಯತೆ ಕೂಡ ಸತ್ತು ಹೋಗಿದೆ ಎಂದೇ ಭಾಸವಾಗಿತ್ತಿದೆ. ಯೋಗಿ ಆಡಳಿತವಿರುವ ರಾಜ್ಯದಲ್ಲಿ ಇಂಥದ್ದೆಲ್ಲ ಸಾಮಾನ್ಯವೇ?” ಎಂದು ಪ್ರಶ್ನಿಸಿದ್ದಾರೆ.
ಅಪಘಾತದಿಂದಾಗಿ ಹೆದ್ದಾರಿಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಆದರೆ ಸಮೀಪದ ಗ್ರಾಮಗಳ ಜನರು ಮಾತ್ರ ಕೋಳಿ ಕದಿಯುವುದರಲ್ಲೇ ಬ್ಯುಸಿಯಾಗಿದ್ದರು. ಲಾರಿಯ ಚಾಲಕ ತೀವ್ರವಾಗಿ ಗಾಯಗೊಂಡು ಕೂಗುತ್ತಿದ್ದರೂ ಕೂಡಾ ಗ್ರಾಮಸ್ಥರು ಅ ಕಡೆ ಗಮನ ಹರಿಸಲಿಲ್ಲ ಎಂದು ಪೊಲೀಸರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
VIDEO | Passersby took away chickens after the truck carrying birds met with an accident on a highway in UP’s Agra, amid low visibility due to fog.
(Note: The exact time and location of the accident is yet to be ascertained.) pic.twitter.com/BynhGFn7S2
— Press Trust of India (@PTI_News) December 27, 2023
ಮದ್ಯ, ದಿನಸಿ ಸೇರಿದಂತೆ ಯಾವುದೇ ವಸ್ತು ತುಂಬಿದ್ದ ಲಾರಿಗಳು ಉರುಳಿ ಬಿದ್ದಾಗಲೂ ಹೆದ್ದಾರಿ ಪಕ್ಕದ ಜನತೆ ಇದೇ ರೀತಿ ವರ್ತಿಸಿದ್ದು ಈ ಹಿಂದೆ ವರದಿಯಾಗಿದ್ದವು.
ಉತ್ತರ ಪ್ರದೇಶ ಮತ್ತು ದೆಹಲಿ ಸೇರಿದಂತೆ ದೇಶದ ಉತ್ತರ ಭಾರತದ ಭಾಗದಲ್ಲಿ ತಾಪಮಾನ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಮಂಜಿನಿಂದಾಗಿ ರಸ್ತೆ ಕಾಣುವುದು ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ವಿಮಾನ ಮತ್ತು ರೈಲು ವೇಳಾಪಟ್ಟಿಗಳ ವಿಳಂಬಕ್ಕೂ ಇದು ಕಾರಣವಾಗಿದೆ.