ಬಾಹ್ಯಾಕಾಶಯಾನದ ಖರ್ಚನ್ನು ಬಡವರಿಗೆ ಕೊಡಬಹುದಲ್ವಾ?
ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರು ಭಾರತೀಯ ವಾಯುಸೇನೆಯ (IAF) ಪೈಲೇಟ್ ಮತ್ತು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ISRO) ಗಗನಯಾನ ಕಾರ್ಯಕ್ರಮದ ಗಗನಯಾತ್ರಿಯಾಗಿದ್ದಾರೆ. ಜೂನ್ 25 ರಂದು, ಅವರು ಆಕ್ಸಿಯಮ್-4 (Ax-4) ಮಿಷನ್‌ನ ಭಾಗವಾಗಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ISS) ಪ್ರಯಾಣ ಬೆಳೆಸಿದ್ದಾರೆ, ಇದು ಭಾರತದ ಬಾಹ್ಯಾಕಾಶ ಯಾತ್ರೆಯಲ್ಲಿ ಒಂದು ಐತಿಹಾಸಿಕ ಕ್ಷಣವಾಗಿದೆ.