ಇರಾನ್‌ನಲ್ಲಿ ಬುಧವಾರ ಆಯೋಜಿಸಲಾಗಿದ್ದ ಸೇನಾಧಿಕಾರಿಗಳ ಸ್ಮರಣಾರ್ಥದ ಕಾರ್ಯಕ್ರಮದ ವೇಳೆ ನಡೆದ ಅವಳಿ ಬಾಂಬ್ ಸ್ಟೋಟದಲ್ಲಿ 103 ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದು 141ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಇರಾನ್‌ನ ದಕ್ಷಿಣ ನಗರಿ ಕೆರ್ಮಾನ್‌ನಲ್ಲಿ ಆಯೋಜಿಸಲಾಗಿದ್ದ ಕಮಾಂಡರ್ ಕಾಸ್ಸೇಮ್ ಸೋಲೈಮನಿ ಅವರ ಸ್ಮರಣೆಯ ಕಾರ್ಯಕ್ರಮದ ವೇಳೆ ದುರ್ಘಟನೆ ನಡೆದಿದೆ.
ಅಮೆರಿಕಾವು 2020ರಲ್ಲಿ ಬಾಗ್ದಾದ್‌ದ ವಿಮಾನ ನಿಲ್ದಾಣದ ಮೇಳೆ ನಡೆಸಿದ್ದ ಢ್ರೋಣ್ ದಾಳಿಯಲ್ಲಿ ಕಮಾಂಡರ್ ಕಾಸ್ಸೇಮ್ ಸೋಲೈಮನಿ ಹತರಾಗಿದ್ದರು. ಇದರ ಸ್ಮರಣಾರ್ಥ ಪ್ರತಿ ವರ್ಷ ಇರಾನ್‌ನಲ್ಲಿ ಸ್ಮರಣೆಯ ಕಾರ್ಯಕ್ರಮ ಆಯೋಜಿಸಲಾಗುತ್ತಿತ್ತು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಹೊಸವರ್ಷದ ಹೊಸ್ತಿಲಲ್ಲಿ ನಮ್ಮನ್ನಗಲಿದ ನಿಜಾಯತಿಯ ಪತ್ರಕರ್ತ ಜಾನ್ ಪಿಲ್ಜರ್
ಕೆರ್ಮಾನ್‌ನಲ್ಲಿರುವ ಕಾಸ್ಸೇಮ್ ಸೋಲೈಮನಿ ಅವರ ಸ್ಮಾರಕದ ಬಳಿಯೇ ಕಾರ್ಯಕ್ರಮ ನಡೆಸಿಕೊಂಡು ಬರಲಾಗುತ್ತಿದೆ. ಈ ವರ್ಷದ ಕಾರ್ಯಕ್ರಮ ಬುಧವಾರ ನಡೆಯುತ್ತಿತ್ತು. ಅಲ್ಲಿ ಇರಾನ್ ಸೇನೆಯ ಕೆಲ ಅಧಿಕಾರಿಗಳು, ಸ್ಥಳೀಯರು ಅಪಾರ ಸಂಖ್ಯೆಯಲ್ಲಿಯೇ ಸೇರಿದ್ದರು. ಈ ವೇಳೆ ಮೊದಲು ಅನಿಲ ತುಂಬಿದ ಡಬ್ಬಿಯನ್ನು ಎಸೆಯಲಾಯಿತು. ಇದು ಸಿಡಿಯುತಲೇ ಇನ್ನಷ್ಟು ಡಬ್ಬಗಳನ್ನು ನಿರಂತರವಾಗಿ ಎಸೆಯಲಾಯಿತು. ಆಗ ಸ್ಪೋಟಗಳು ಸಂಭವಿಸಿದವು ಎಂದು ಇರಾನ್‌ನ ನೌರ್ ನ್ಯೂಸ್ ವರದಿ ಮಾಡಿದೆ.
ಈ ದಾಳಿಯಿಂದ ಮೊದಲು 20ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದರು. ಆನಂತರ ಸಾವಿನ ಸಂಖ್ಯೆ ಹೆಚ್ಚಿ ಸಂಜೆ ವೇಳೆಗೆ ಸಾವಿನ ಸಂಖ್ಯೆ 103 ದಾಟಿತ್ತು.