ಇಸ್ರೇಲ್ ನಿಯಂತ್ರಿತ ಗೋಲನ್ ಹೈಟ್ಸ್‌ನ ಹಳ್ಳಿಯೊಂದಕ್ಕೆ ಶನಿವಾರ ಅನೇಕ ರಾಕೆಟ್‌ಗಳು ಅಪ್ಪಳಿಸಿದ್ದು ಮಕ್ಕಳು ಸೇರಿದಂತೆ ಕನಿಷ್ಠ ಹತ್ತರಿಂದ ಇಪ್ಪತ್ತು ವಯಸ್ಸಿನ ಸುಮಾರು 12 ಮಂದಿ ಸಾವನ್ನಪ್ಪಿದ್ದಾರೆ ಎಂದು ಇಸ್ರೇಲಿ ಅಧಿಕಾರಿಗಳು ತಿಳಿಸಿದ್ದಾರೆ. ಈ ದಾಳಿಯಿಂದಾಗಿ ದೀರ್ಘಾವಧಿಯ ಸಂಘರ್ಷ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ.
ಇರಾನ್ ಬೆಂಬಲಿತ ಲೆಬನಾನಿನ ಉಗ್ರಗಾಮಿ ಗುಂಪು ಹೆಜ್ಬುಲ್ಲಾದ ಮೇಲೆ ಇಸ್ರೇಲ್ ಆರೋಪಿಸಿದೆ. ಲೆಬನಾನ್‌ನಿಂದ ಸುಮಾರು 30 ಸ್ಪೋಟಕ ರಾಕೆಟ್‌ಗಳು ಅಪ್ಪಳಿಸಿದೆ ಎಂದು ಇಸ್ರೇಲ್ ಹೇಳಿದೆ. ಈ ದಾಳಿಯು ಇಸ್ರೇಲ್ ಮತ್ತು ಇರಾನ್ ಗಡಿಯಲ್ಲಿ ಉಲ್ಭಣವಾಗಿರುವ ಸಂಘರ್ಷವನ್ನು ಮತ್ತಷ್ಟು ಹೆಚ್ಚಿಸುವ ಅಪಾಯವಿದೆ.
ಈ ನಡುವೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು, ಹೆಜ್ಬುಲ್ಲಾ ‘ಭಾರೀ ಬೆಲೆಯನ್ನು ತೆರಬೇಕಾಗುತ್ತದೆ’ ಎಂದು ಪ್ರತಿಜ್ಞೆ ಮಾಡಿದ್ದಾರೆ.
ಇದನ್ನು ಓದಿದ್ದೀರಾ? ಗಾಜಾ ಮೇಲೆ ಇಸ್ರೇಲ್ ದಾಳಿಯನ್ನು ಜನಾಂಗೀಯ ಹತ್ಯೆ ಎಂದು ಖಂಡಿಸಿದ ಅಮೆರಿಕದ ಮುಸ್ಲಿಂ ನರ್ಸ್ ಕೆಲಸದಿಂದ ವಜಾ
ಇನ್ನು ವರದಿ ಪ್ರಕಾರ ಡ್ರೂಜ್ ಸಮುದಾಯದ ನೆಲೆಯಾಗಿರುವ ಹಳ್ಳಿಯಾದ ಮಜ್ದಲ್ ಶಮ್ಸ್‌ನಲ್ಲಿ ನಡೆದ ದಾಳಿಯಲ್ಲಿ 12 ಸಾವುಗಳ ಜೊತೆಗೆ, ಕನಿಷ್ಠ 29 ಜನರು ಗಾಯಗೊಂಡಿದ್ದಾರೆ.
ಸುಮಾರು 20,000 ಡ್ರೂಜ್ ಅರಬ್ಬರು ಗೋಲನ್ ಹೈಟ್ಸ್‌ನಲ್ಲಿ ವಾಸಿಸುತ್ತಿದ್ದಾರೆ. 1967ರಲ್ಲಿ ಈ ಗೋಲನ್ ಹೈಟ್ಸ್ ಅನ್ನು ಆರು ದಿನಗಳ ಯುದ್ಧದ ಸಮಯದಲ್ಲಿ ಇಸ್ರೇಲ್ ಸಿರಿಯಾದಿಂದ ವಶಪಡಿಸಿಕೊಂಡಿದೆ. 1981ರಲ್ಲಿ ಸ್ವಾಧೀನಪಡಿಸಿಕೊಂಡಿದೆ.
ಅಂತರಾಷ್ಟ್ರೀಯ ಕಾನೂನು ಮತ್ತು ಯುಎನ್ ಭದ್ರತಾ ಮಂಡಳಿಯ ನಿರ್ಣಯಗಳ ಅಡಿಯಲ್ಲಿ ಇದನ್ನು ಆಕ್ರಮಿತ ಪ್ರದೇಶವೆಂದು ಪರಿಗಣಿಸಲಾಗಿದೆ. ಈ ಪ್ರದೇಶವು ಸುಮಾರು 50,000 ಇಸ್ರೇಲಿ ಯಹೂದಿಗಳಿಗೆ ಮತ್ತು ಡ್ರೂಜ್‌ಗಳಿಗೆ ನೆಲೆಯಾಗಿದೆ. ಹೆಚ್ಚಿನ ಡ್ರೂಜ್ ಸಮುದಾಯದವರು ಸಿರಿಯನ್ ಎಂದು ಗುರುತಿಸಿಕೊಳ್ಳುತ್ತಿದ್ದಾರೆ ಮತ್ತು ಇಸ್ರೇಲಿ ಪೌರತ್ವವನ್ನು ತಿರಸ್ಕರಿಸಿದ್ದಾರೆ.
Netanyahu says Hezbollah will pay ‘heavy price’ after deadly Golan Heights strike.
Lebanon was playing with fire shooting thousands of missiles at Israel. It’s only a matter of time before they get invaded, justly so.
Israel will now send Lebanon back to the stone ages. pic.twitter.com/tBYJCHeIgP
— Imtiaz Mahmood (@ImtiazMadmood) July 27, 2024