ಸೆರ್ಬಿಯಾದಲ್ಲಿ 12 ವರ್ಷಗಳ ವುಚಿಚ್ ಆಡಳಿತ ಅಂತ್ಯ; ವಿದ್ಯಾರ್ಥಿ ಹೋರಾಟಕ್ಕೆ ಚುನಾವಣಾ ಜಯ

Date:

ಯುರೋಪಿನ ಸೆರ್ಬಿಯಾದಲ್ಲಿ ಸುಮಾರು ಎರಡು ವರ್ಷಗಳಿಂದ ನಡೆಯುತ್ತಿದ್ದ ವಿದ್ಯಾರ್ಥಿಗಳ ನೇತೃತ್ವದ ಭ್ರಷ್ಟಾಚಾರ ವಿರೋಧಿ ಚಳವಳಿ ಐತಿಹಾಸಿಕ ಚುನಾವಣಾ ಜಯ ಸಾಧಿಸಿದೆ. ಅಕ್ಟೋಬರ್ 25ರಂದು ನಡೆದ ಸಂಸತ್ ಚುನಾವಣೆಯಲ್ಲಿ ವಿದ್ಯಾರ್ಥಿ ಬೆಂಬಲಿತ ‘ಸ್ಟೂಡೆಂಟ್ ಲಿಸ್ಟ್’ ಗೆಲುವು ಸಾಧಿಸಿರುವುದಾಗಿ ಮಾಜಿ ಅಧ್ಯಕ್ಷ ಅಲೆಕ್ಸಾಂಡರ್ ವುಚಿಚ್ ಸ್ವತಃ ಒಪ್ಪಿಕೊಂಡಿದ್ದಾರೆ.

- Advertisement -

2014ರಿಂದ ಪ್ರಧಾನಿ ಮತ್ತು ಅಧ್ಯಕ್ಷರಾಗಿ ದೇಶದ ರಾಜಕೀಯದಲ್ಲಿ ಪ್ರಾಬಲ್ಯ ಹೊಂದಿದ್ದ ವುಚಿಚ್ ಅವರ ಪಕ್ಷಕ್ಕೆ ಈ ಸೋಲು ದೊಡ್ಡ ಹಿನ್ನಡೆಯಾಗಿದೆ. ಚುನಾವಣಾ ಫಲಿತಾಂಶದ ಬೆನ್ನಲ್ಲೇ ರಾಜಧಾನಿ ಬೆಲ್‌ಗ್ರೇಡ್ ಸೇರಿದಂತೆ ಹಲವು ನಗರಗಳಲ್ಲಿ ವಿದ್ಯಾರ್ಥಿಗಳು ಮತ್ತು ಅವರ ಬೆಂಬಲಿಗರು ವಿಜಯೋತ್ಸವ ಆಚರಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕಲಬುರಗಿ | ಹನಿ ನೀರಿಗೂ ಪರದಾಡುತ್ತಿರುವ ದಣ್ಣೂರು...

ಎರಡು ನಳಗಳ ಮುಂದೆ ಖಾಲಿ ಕೊಡ ಹಿಡಿದು ಗಂಟೆಗಟ್ಟಲೆ ಕಾಯುವ ಮಹಿಳೆಯರು; ಬೆಳೆ ನಷ್ಟ, ಜಾನುವಾರು ಮಾರಾಟ, ಉದ್ಯೋಗದ ಕೊರತೆಯಿಂದ ಗ್ರಾಮ ತೊರೆಯುತ್ತಿರುವ ಕುಟುಂಬಗಳು ಒಂದು ಕೊಡ ನೀರಿಗಾಗಿ ಮನೆಮನೆಯ ಮುಂದೆ ಕಾಯಬೇಕು....

‘ನನ್ನೊಳಗೆ ನೀವೊ ನಿಮ್ಮೊಳಗೆ ನಾನೊ’

ಲೇಹ್ ಲಡಾಕಿನ ಪರ್ವತ ಶ್ರೇಣಿಗಳ ನಡುವೆ ನಮ್ಮ ಕಾರು ನಿಧಾನವಾಗಿ ಸಾಗುತ್ತಿತ್ತು. ಬೇರೆ ಬೇರೆ ಬಣ್ಣಗಳ ಪರ್ವತ ಶಿಖರಗಳು, ಕೆಳಗಡೆ ಕಿಲೋಮಿಟರ್ ಉದ್ದದ ಕಿರಿದಾದ ರಸ್ತೆ, ಪಕ್ಕದಲ್ಲಿ ಸ್ವಲ್ಪ ಎಚ್ಚರ ತಪ್ಪಿದರೂ ಕಾಣುವ...

ಕಾರ್ಪೊರೇಟ್‌ ಕಾಳಗ | ಮಸ್ಕ್‌ನ ಸ್ಟಾರ್‌ಲಿಂಕ್ ಮಣಿಸಿ ಅಂಬಾನಿಯ...

ಎಲಾನ್ ಮಸ್ಕ್ ಒಡೆತನದ ‘ಸ್ಟಾರ್‌ಲಿಂಕ್’ ಉಪಗ್ರಹ ಇಂಟರ್ನೆಟ್ ಭಾರತಕ್ಕೆ ಕಾಲಿಡುತ್ತಿದ್ದಂತೆ ರಿಲಯನ್ಸ್ ಜಿಯೋದ ಮಾರುಕಟ್ಟೆ ಏಕಸ್ವಾಮ್ಯಕ್ಕೆ ಭಾರಿ ಪೈಪೋಟಿ ಎದುರಾಗುವಂತೆ ಕಾಣುತ್ತಿದೆ. ಈ ಬೆನ್ನಲ್ಲೇ, ರಾಷ್ಟ್ರೀಯ ಭದ್ರತೆ ಮತ್ತು ದತ್ತಾಂಶ ಸುರಕ್ಷತೆಯ ನೆಪವೊಡ್ಡಿ...

ಅಂದಹಾಗೆ, ವುಚಿಚ್ ಅವರು ಚುನಾವಣೆಗೂ ಮುನ್ನವೇ, ಸೆಪ್ಟೆಂಬರ್ 27ರಂದೇ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ವಿದ್ಯಾರ್ಥಿ ಹೋರಾಟಗಳ ನಡುವೆಯೇ ಸಂಸತ್‌ಅನ್ನು ವಿಸರ್ಜಿಸಿದ್ದ ಅವರು, ಅವಧಿಪೂರ್ವ ಸಂಸತ್ ಚುನಾವಣೆ ನಡೆಸಿ, ಗೆಲುವು ಸಾಧಿಸಿ ಮತ್ತೆ ಪ್ರಧಾನಿಯಾಗುವ ಉದ್ದೇಶ ಹೊಂದಿದ್ದರು.

Advertisements

ಆದರೆ, ಅವರ ರಾಜಕೀಯ ಪುನರಾಗಮನದ ಪ್ರಯತ್ನಕ್ಕೆ ವಿದ್ಯಾರ್ಥಿ ಚಳವಳಿ ತಡೆಯೊಡ್ಡಿದೆ. ಅಕ್ಟೋಬರ್ 25ರಂದು ನಡೆದ ಚುನಾವಣೆಯಲ್ಲಿ ‘ಸ್ಟೂಡೆಂಟ್‌ ಲಿಸ್ಟ್‌’ ಗೆಲುವಿನೊಂದಿಗೆ, ವುಚಿಚ್ ಅವರ ರಾಜಕೀಯ ಅಧಿಕಾರ ಸದ್ಯಕ್ಕೆ ಕೊನೆಗೊಂಡಿದೆ.

ಸೆರ್ಬಿಯಾದ ರಾಜಕೀಯ ಚಿತ್ರಣವನ್ನೇ ಬದಲಿಸಿದ ಒಂದು ದುರಂತ

2024ರ ನವೆಂಬರ್‌ನಲ್ಲಿ ನೋವಿ ಸಾದ್ ನಗರದ ರೈಲು ನಿಲ್ದಾಣದ ಮೇಲ್ಛಾವಣಿಯ ಒಂದು ಭಾಗ ಕುಸಿದು 16 ಮಂದಿ ಮೃತಪಟ್ಟಿದ್ದರು. ಈ ದುರಂತದ ಹಿಂದೆ ನಿರ್ಮಾಣ ಕಾಮಗಾರಿಗಳಲ್ಲಿ ಭ್ರಷ್ಟಾಚಾರ ಮತ್ತು ಆಡಳಿತಾತ್ಮಕ ನಿರ್ಲಕ್ಷ್ಯವಿದೆ ಎಂದು ಆರೋಪಿಸಿ ವಿದ್ಯಾರ್ಥಿಗಳು ಬೀದಿಗಿಳಿದು, ಪ್ರತಿಭಟನೆ ಆರಂಭಿಸಿದ್ದರು.

ವಿಶ್ವವಿದ್ಯಾಲಯಗಳ ಬಹಿಷ್ಕಾರ, ಬೃಹತ್ ಮೆರವಣಿಗೆಗಳು ಹಾಗೂ ನಿರಂತರ ಸಾರ್ವಜನಿಕ ಪ್ರತಿಭಟನೆಗಳ ಮೂಲಕ ಚಳವಳಿ ದೇಶಾದ್ಯಂತ ವಿಸ್ತರಿಸಿತು. ವಿದ್ಯಾರ್ಥಿಗಳ ಹೋರಾಟಕ್ಕೆ ಶಿಕ್ಷಕರು, ಕಾರ್ಮಿಕರು ಹಾಗೂ ಸಾಮಾನ್ಯ ನಾಗರಿಕರೂ ಬೆಂಬಲ ನೀಡಿದರು.

ಭ್ರಷ್ಟಾಚಾರಕ್ಕೆ ಹೊಣೆಗಾರರನ್ನು ಶಿಕ್ಷಿಸಬೇಕು, ಕಾನೂನಿನ ಆಡಳಿತವನ್ನು ಸ್ಥಾಪಿಸಬೇಕು ಹಾಗೂ ಪ್ರಜಾಸತ್ತಾತ್ಮಕ ಸಂಸ್ಥೆಗಳನ್ನು ಬಲಪಡಿಸಬೇಕು ಎಂಬುದು ಚಳವಳಿಯ ಪ್ರಮುಖ ಬೇಡಿಕೆಗಳಾಗಿದ್ದವು. ಆದರೆ, ಆರಂಭದಲ್ಲಿ ವಿದ್ಯಾರ್ಥಿ ಹೋರಾಟವನ್ನು ವುಚಿಚ್ ಅವರ ಆಡಳಿತ ಕಡೆಗಣಿಸಿತ್ತು.

ಪರಿಣಾಮ, ವಿದ್ಯಾರ್ಥಿ ಹೋರಾಟ ಮತ್ತಷ್ಟು ತೀವ್ರಗೊಂಡಿತ್ತು. ಪರಿಣಾಮ, ವುಚಿಚ್ ರಾಜೀನಾಮೆ ನೀಡಿ, ಸಂಸತ್‌ಅನ್ನು ವಿಸರ್ಜಿಸಿದ್ದರು.

ನಂತರ, ಅಕ್ಟೋಬರ್ 25ರಂದು ನಡೆದ ಚುನಾವಣೆಯಲ್ಲಿ ಸುಮಾರು 70%ರಷ್ಟು ಮತದಾನ ನಡೆದಿದ್ದು, ಸೆರ್ಬಿಯಾದ 250 ಸದಸ್ಯರ ಸಂಸತ್ತಿನಲ್ಲಿ ವಿದ್ಯಾರ್ಥಿ ಬೆಂಬಲಿತ ಒಕ್ಕೂಟಕ್ಕೆ 140 ಸ್ಥಾನಗಳು ಮತ್ತು ವುಚಿಚ್ ಅವರ ಸರ್ಬಿಯನ್ ಪ್ರೋಗ್ರೆಸಿವ್ ಪಕ್ಷ (SNS) ನೇತೃತ್ವದ ಬಣಕ್ಕೆ 110 ಸ್ಥಾನಗಳು ದೊರೆತಿವೆ ಎಂದು ಸ್ವತಃ ವುಚಿಚ್ ಹೇಳಿದ್ದಾರೆ.

ಚುನಾವಣಾ ಫಲಿತಾಂಶದ ನಂತರ ವಿದ್ಯಾರ್ಥಿ ಒಕ್ಕೂಟದ ನಾಯಕರು ದೇಶದಲ್ಲಿ ಕಾನೂನಿನ ಆಡಳಿತ, ಮಾಧ್ಯಮ ಸ್ವಾತಂತ್ರ್ಯ ಹಾಗೂ ಭ್ರಷ್ಟಾಚಾರ ಮುಕ್ತ ವ್ಯವಸ್ಥೆ ನಿರ್ಮಿಸುವುದಾಗಿ ಭರವಸೆ ನೀಡಿದ್ದಾರೆ. \

ಯುರೋಪಿಯನ್ ಒಕ್ಕೂಟದ ನಾಯಕರು ವಿದ್ಯಾರ್ಥಿ ಚಳವಳಿಯ ಚುನಾವಣಾ ಸಾಧನೆಯನ್ನು ಸ್ವಾಗತಿಸಿದ್ದಾರೆ. ಆದರೆ, ವುಚಿಚ್ ತಮ್ಮ ಸೋಲಿನ ಹಿಂದೆ ವಿದೇಶಿ ಶಕ್ತಿಗಳ ಹಸ್ತಕ್ಷೇಪವಿದೆ ಎಂದು ಆರೋಪಿಸಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

RSS ಸಿದ್ಧಾಂತವನ್ನು ಕಳಚಿ‌ ಹಾಕುವ ತನಕ‌ ಭಾರತದಲ್ಲಿ ಶಾಂತಿ‌ ಅಸಾಧ್ಯ: ಮಲ್ಲಿಕಾರ್ಜುನ ಖರ್ಗೆ

ಭಾರತದಲ್ಲಿ RSS ಸಿದ್ಧಾಂತವನ್ನು ಸಂಪೂರ್ಣವಾಗಿ ಕಳಚಿ ಹಾಕುವವರೆಗೆ ದೇಶದಲ್ಲಿ ನೈಜ ಶಾಂತಿ...

ಬೀದರ್‌ | ಜಾತಿರಹಿತ, ಶೋಷಣೆರಹಿತ ಲಿಂಗಾಯತ ಧರ್ಮ : ಎಂ.ಬಿ.ಪಾಟೀಲ್

ವಿಶ್ವಗುರು ಬಸವಣ್ಣನವರ ವಿಚಾರಧಾರೆ, ಶರಣರ ವಚನ ಸಾಹಿತ್ಯ ಹಾಗೂ ಸಮಾನತೆಯ ಆಶಯಗಳಿಗೆ...

ಚಿಕ್ಕಮಗಳೂರು | ಮಾ. ಶಾಸಕ ಎಂ.ಪಿ. ಕುಮಾರಸ್ವಾಮಿ: ದಲಿತರ ಭೂ ಕಬಳಿಕೆ ಆರೋಪ 

ಮಾಜಿ ಶಾಸಕ ಎಂ.ಪಿ. ಕುಮಾರಸ್ವಾಮಿ ಶಾಸಕರಾಗಿದ್ದ ಅವಧಿಯಲ್ಲಿ ದಲಿತ ಕುಟುಂಬವೊಂದಕ್ಕೆ ಸೇರಿದ್ದ...

ರಾಮನಗರ | ಡಾ. ಬಂಜಗೆರೆ ಜಯಪ್ರಕಾಶ್‌ ಅವರಿಗೆ ಪ್ರಶಸ್ತಿ ಗೌರವ: ‘ಜನಮುಖಿ ಜೆಪಿ’ ಕಾರ್ಯಕ್ರಮ ಸಫಲ

ಹಿರಿಯ ಸಾಹಿತಿ ಡಾ. ಬಂಜಗೆರೆ ಜಯಪ್ರಕಾಶ್ (ಜೆ.ಪಿ) ಅವರಿಗೆ ಕರ್ನಾಟಕ ಸಾಹಿತ್ಯ...