ಮೈಕ್ರೊಆರ್‌ಎನ್‌ಎ ಮತ್ತು ಅದರ ನಂತರದ ಪ್ರತಿಲೇಖನ ಜೀನ್ ನಿಯಂತ್ರಣದಲ್ಲಿ ಮೈಕ್ರೊಆರ್‌ಎನ್‌ಎ ಪಾತ್ರದ ಅಧ್ಯಯನಕ್ಕಾಗಿ ಅಮೆರಿಕದ ವಿಜ್ಞಾನಿಗಳಾದ ವಿಕ್ಟರ್ ಆಂಬ್ರೋಸ್ ಮತ್ತು ಗ್ಯಾರಿ ರುವ್ಕುನ್ ಅವರಿಗೆ 2024ರ ಸಾಲಿನ ಶರೀರಶಾಸ್ತ್ರ ಅಥವಾ ವೈದ್ಯಶಾಸ್ತ್ರಕ್ಕೆ ನೀಡುವ ನೊಬೆಲ್ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಈ ವರ್ಷದ ನೊಬೆಲ್ ಪ್ರಶಸ್ತಿಯು ಜೀನ್ ಚಟುವಟಿಕೆಯನ್ನು ಹೇಗೆ ನಿಯಂತ್ರಿಸುತ್ತದೆ ಹಾಗೂ ಆ ನಿಯಂತ್ರಣದ ಮೂಲಭೂತ ತತ್ವವನ್ನು ಕಂಡುಹಿಡಿದ ಸಾಧನೆಗಾಗಿ ಈ ಇಬ್ಬರು ವಿಜ್ಞಾನಿಗಳನ್ನು ನೊವೆಲ್ ಪ್ರಶಸ್ತಿ ನೀಡ ಗೌರವಿಸುತ್ತದೆ. ವಿಕ್ಟರ್ ಅಂಬ್ರೋಸ್ ಮತ್ತು ಗ್ಯಾರಿ ರುವ್ಕುನ್ ವಿವಿಧ ಕೋಶ ಪ್ರಕಾರಗಳು ಹೇಗೆ ಅಭಿವೃದ್ಧಿ ಹೊಂದುತ್ತವೆ ಎಂಬುದರ ಬಗ್ಗೆ ಅಧ್ಯಯನವನ್ನು ಮಾಡಿದ್ದಾರೆ. ಇದು ವಂಶವಾಹಿ ನಿಯಂತ್ರಣದಲ್ಲಿ ಪಾತ್ರವನ್ನು ವಹಿಸುವ ಸಣ್ಣ ಆರ್‌ಎನ್‌ಎ ಅಣುಗಳ ಹೊಸ ವರ್ಗವಾದ ಮೈಕ್ರೋಆರ್‌ಎನ್‌ಎಯನ್ನು ಅವರು ಕಂಡುಹಿಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಭಾರತದ ಅಪೌಷ್ಟಿಕತೆಯ ಗಂಭೀರತೆ ಕೇಂದ್ರಕ್ಕೆ ಅರಿವಾಗುವುದು ಯಾವಾಗ?
ಈ ಸಂಶೋಧನೆ ಜೀನ್ ನಿಯಂತ್ರಣದ ಸಂಪೂರ್ಣ ಹೊಸ ರೂಪವನ್ನು ಪಡೆಯುತ್ತದೆ ಎಂಬುದು ಈ ವಿಜ್ಞಾನಿಗಳ ವಾದವಾಗಿದೆ. ಮಾನವರು ಸೇರಿದಂತೆ ಬಹುಕೋಶೀಯ ಜೀವಿಗಳಿಗೆ ಈ ಸಂಶೋಧನೆ ಉಪಯುಕ್ತ ಎಂದು ಹೇಳಿದೆ. ಒಂದು ಸಾವಿರಕ್ಕೂ ಹೆಚ್ಚು ಮೈಕ್ರೊಆರ್‌ಎನ್‌ಎಗಳಿಗೆ ಮಾನವ ಜೀನೋಮ್ ಸಂಕೇತಗಳು ಎಂದು ಈಗಾಗಲೇ ಈ ಸಂಶೋಧನೆಯಲ್ಲಿ ತಿಳಿಸಲಾಗಿದೆ.
ಈ ಮೂಲಕ ಇಬ್ಬರು ವಿಜ್ಞಾನಿಗಳು ಜೀನ್ ನಿಯಂತ್ರಣಕ್ಕೆ ಸಂಪೂರ್ಣವಾಗಿ ಹೊಸ ಆಯಾಮವನ್ನು ನೀಡಿದ್ದಾರೆ. ಜೀವಿಗಳು ಹೇಗೆ ಅಭಿವೃದ್ಧಿ ಹೊಂದುತ್ತವೆ ಮತ್ತು ಕಾರ್ಯನಿರ್ವಹಿಸುತ್ತವೆ ಬಗ್ಗೆಯೂ ಈ ಮೈಕ್ರೊಆರ್‌ಎನ್‌ಎ ಹೇಳುತ್ತದೆ. ಅಕ್ಟೋಬರ್ 7 ರಿಂದ 14 ರವರೆಗೆ ವಿವಿಧ ಕ್ಷೇತ್ರಗಳ ಸಾಧನೆಗೆ ನೊಬೆಲ್ ಪ್ರಶಸ್ತಿ ನೀಡಲಾಗುತ್ತದೆ.
