‘ಡಂಕಿ ಮಾರ್ಗ’ ಮೂಲಕ ಅಮೆರಿಕಕ್ಕೆ ಹೋದ 42 ಭಾರತೀಯ ಯುವಕರು 15 ವರ್ಷಗಳಿಂದ ನಾಪತ್ತೆ

Date:

Advertisements

ಇತ್ತೀಚೆಗೆ ಅಮೆರಿಕದಿಂದ ದಾಖಲೆರಹಿತ ಭಾರತೀಯ ವಲಸಿಗರನ್ನು ಕೈಕೋಳ ತೊಡಿಸಿ ನಿರ್ಧಯವಾಗಿ ಅಮೆರಿಕದಿಂದ ಹೊರ ಹಾಕಲಾಗಿದೆ. ಈ ನಡುವೆ 2010ರಲ್ಲಿ ‘ಡಂಕಿ ಮಾರ್ಗ’ ಮೂಲಕ ಅಮೆರಿಕಕ್ಕೆ ತೆರಳಿದ ಭಾರತದ 102 ಜನರ ಪೈಕಿ ಪಂಜಾಬ್‌ನ ಸುಮಾರು 40 ಯುವಕರು ಕಳೆದ 15 ವರ್ಷಗಳಿಂದ ನಾಪತ್ತೆಯಾಗಿದ್ದಾರೆ.

ಫತೇಘರ್ ಸಾಹಿಬ್ ಜಿಲ್ಲೆಯ ಟ್ಯಾಪ್ರಿಯನ್ ಗ್ರಾಮದ ದಲ್ಜಿತ್ ಸಿಂಗ್ ಅವರ ಮಗ ರವೀಂದರ್ ಸಿಂಗ್ 2010ರ ಸೆಪ್ಟೆಂಬರ್ 15ರಂದು ಅಮೆರಿಕಕ್ಕೆ ತೆರಳಿದ್ದು, ಈವರೆಗೆ ಅವರ ಕುಟುಂಬಕ್ಕೆ ರವೀಂದರ್ ಬಗ್ಗೆ ಯಾವುದೇ ಸುಳಿವು ಲಭಿಸಿಲ್ಲ ಎನ್ನಲಾಗಿದೆ.

ಇದನ್ನು ಓದಿದ್ದೀರಾ? ‘ಶಾರೂಕ್ ಖಾನ್ ಆ‌್ಯಕ್ಟಿಂಗ್ ಕಿ ಭಗವಾನ್’ ಎಂದ ಪ್ರೇಕ್ಷಕ; ಟ್ವಿಟರ್ ಟ್ರೆಂಡಿಂಗ್‌ನಲ್ಲಿ ‘ಡಂಕಿ’ ಸಿನಿಮಾ

Advertisements

“ನನ್ನ ಹಿರಿಯ ಮಗ ದ್ವಿತೀಯ ಪಿಯುಸಿ ಮುಗಿಸಿದ್ದು ಚಾಲಕನಾಗಿದ್ದನು. ಉದ್ಯೋಗಕ್ಕಾಗಿ ವಿದೇಶಕ್ಕೆ ಹೋಗಲು ಬಯಸಿದ್ದನು. ಅದಕ್ಕಾಗಿ ಪಂಚಕುಲದಲ್ಲಿರುವ ಟ್ರಾವೆಲ್ ಏಜೆಂಟ್‌ಗಳನ್ನು ನಾವು ಸಂಪರ್ಕಿಸಿದೆವು. 20 ಲಕ್ಷ ರೂಪಾಯಿ ನೀಡುವ ಒಪ್ಪಂದವನ್ನು ಮಾಡಿಕೊಂಡೆವು. ಮುಂಗಡವಾಗಿ ಐದು ಲಕ್ಷ ರೂಪಾಯಿ ನೀಡಿದೆವು. ನಮ್ಮ ಮಗನನ್ನು ಇತರರೊಂದಿಗೆ ನೇರವಾಗಿ ಮೆಕ್ಸಿಕೊಕ್ಕೆ ಕರೆದೊಯ್ಯಲಾಗುವುದು, ನಂತರ ಅಮೆರಿಕಕ್ಕೆ ಕರೆದೊಯ್ಯಲಾಗುವುದು ಎಂದು ತಿಳಿಸಿದ್ದರು. ಆದರೆ ದೆಹಲಿಯಿಂದ ಮನುವಾಗೆ ಕರೆದೊಯ್ಯಲಾಗಿದೆ” ಎಂದು ದಲ್ಜಿತ್ ಸಿಂಗ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

“ಮತ್ತೆ ಐದು ಲಕ್ಷ ರೂಪಾಯಿ ನೀಡುವಂತೆ ತಿಳಿಸಿದ್ದಕ್ಕೆ ನಾವು ಐದು ಲಕ್ಷ ರೂಪಾಯಿ ನೀಡಿದೆವು. 10 ದಿನಗಳ ನಂತರ ಅವರು ಮತ್ತು ಇತರರು ಗ್ವಾಟೆಮಾಲಾ ನಗರವನ್ನು ತಲುಪಿದ್ದಾರೆಂದು ನಮಗೆ ತಿಳಿಯಿತು. ಈ ಏಜೆಂಟರು ಉಳಿದ 10 ಲಕ್ಷ ರೂ.ಗಳನ್ನು ಕೇಳಿದರು, ನಾವು ಅವರಿಗೆ 7 ಲಕ್ಷ ರೂ.ಗಳನ್ನು ನೀಡಿದೆವು. ನಮ್ಮ ಮಗ ಅಮೆರಿಕ ತಲುಪಿದ ನಂತರ ಕರೆ ಮಾಡುತ್ತಾರೆ ಎಂದು ತಿಳಿಸಲಾಯಿತು. ಆದರೆ ಇಲ್ಲಿಯವರೆಗೆ ನಮ್ಮೊಂದಿಗೆ ನಮ್ಮ ಮಗ ಮಾತನಾಡಿಲ್ಲ” ಎಂದು ತಿಳಿಸಿದ್ದಾರೆ.

ಇದನ್ನು ಓದಿದ್ದೀರಾ? ಅಮೆರಿಕದಿಂದ ಕೈಕೋಳ ತೊಟ್ಟು ಬಂದ ಭಾರತೀಯರು ಬಿಚ್ಚಿಟ್ಟ ಮೂರು ಸಂಗತಿಗಳಿವು!

ಸದ್ಯ ಈ ಪ್ರಕರಣವನ್ನು ಸಿಬಿಐ ತನಿಖೆ ನಡೆಸುತ್ತಿದೆ. ಹಾಗೆಯೇ ಇಡಿ ಅಧಿಕಾರಿಗಳು ನಾಪತ್ತೆಯಾದ ಯುವಕರ ಕುಟುಂಬಸ್ಥರನ್ನು ಎರಡು ಬಾರಿ ಪ್ರಶ್ನಿಸಿದ್ದಾರೆ ಎಂದು ವರದಿಯಾಗಿದೆ. ಇನ್ನು ಏಜೆಂಟರ ವಿರುದ್ಧ ದೂರು ನೀಡಿದ್ದರೂ ಪೊಲೀಸರು ಎಫ್‌ಐಆರ್ ದಾಖಲಿಸಿಲ್ಲ ಎಂದು ಕುಟುಂಬಸ್ಥರು ದೂರಿದ್ದಾರೆ.

ಹೀಗೆ ‘ಡಂಕಿ ಮಾರ್ಗ’ ಮೂಲಕ ಅಮೆರಿಕಕ್ಕೆ ಹೋದ 42 ಭಾರತೀಯ ಯುವಕರು 15 ವರ್ಷಗಳಿಂದ ನಾಪತ್ತೆಯಾಗಿದ್ದಾರೆ. ಇದು ದೂರು ದಾಖಲಾಗಿರುವ ಪ್ರಕರಣಗಳಾಗಿವೆ. ಇದನ್ನು ಹೊರತುಪಡಿಸಿ ದೂರು ದಾಖಲಾಗದ ಅದೆಷ್ಟೋ ನಾಪತ್ತೆ ಪ್ರಕರಣಗಳಿವೆ ಎಂದು ವರದಿಯಾಗಿದೆ. ಒಂದೆಡೆ ಹಣಕ್ಕಾಗಿ ಯುವಕರನ್ನು ಅಪಾಯಕಾರಿ, ಅಕ್ರಮ ದಾರಿಯಲ್ಲಿ ಇನ್ನೊಂದು ದೇಶಕ್ಕೆ ಏಜೆಂಟರು ಕರೆದೊಯ್ದರೆ, ಇನ್ನೊಂದೆಡೆ ದೇಶದಲ್ಲಿ ಉದ್ಯೋಗವಿಲ್ಲದೆ ಅಪಾಯ ಎದುರಿಸಿಯಾದರೂ ಉದ್ಯೋಗ ಪಡೆಯಲು ವಿದೇಶಕ್ಕೆ ಹೋಗುವ ಸಾಹಸಕ್ಕೆ ಯುವಕರು ಇಳಿಯುತ್ತಾರೆ.

ಭಾರತದಲ್ಲಿ ನಿರುದ್ಯೋಗ ಅಧಿಕವಾಗುತ್ತಿದ್ದು, ಉದ್ಯೋಗ ಸೃಷ್ಟಿಸುವಲ್ಲಿ ಕೇಂದ್ರ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ಜೊತೆಗೆ ಮಾಡುವ ಉದ್ಯೋಗಕ್ಕೆ ಮತ್ತು ಅರ್ಹತೆಗೆ ತಕ್ಕುದಾದ ವೇತನವೂ ಭಾರತದಲ್ಲಿಲ್ಲ. ಇದರಿಂದಾಗಿ ಹಲವು ಯುವಕರು ವಿದೇಶದತ್ತ ಒಲವು ತೋರುತ್ತಿದ್ದಾರೆ. ಭಾರತದ ಪೌರತ್ವವನ್ನೇ ತ್ಯಜಿಸಿ ವಿದೇಶದಲ್ಲಿ ನೆಲೆಸುತ್ತಿದ್ದಾರೆ. ಇವೆಲ್ಲವುದರ ನಡುವೆ ಇತ್ತ ಉದ್ಯೋಗವೂ ಇಲ್ಲದೆ, ವಿದೇಶಕ್ಕೆ ತೆರಳಲು ವೀಸಾವೂ ಸಿಗದ ಹಲವು ಮಂದಿ ಈ ರೀತಿ ಅಕ್ರಮವಾಗಿ ಡಂಕಿ ಮಾರ್ಗ ಮೂಲಕ ವಿದೇಶಕ್ಕೆ ತೆರಳ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ, ನಾಪತ್ತೆಯಾಗುತ್ತಿದ್ದಾರೆ!

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

1 COMMENT

  1. Let us produce more children in the name of religion, caste, family then we get all the benefits..employment, house, 😀 salary, incentives,bonus and other perks…

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಆನ್‌ಲೈನ್‌ ಜೂಜಾಟ ತಡೆಗೆ ಕಠಿಣ ಕಾನೂನು; ಸಂಸತ್ತಿನಲ್ಲಿ ಆನ್‌ಲೈನ್ ಗೇಮಿಂಗ್‌ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025 ಮಂಡನೆ

ಭಾರತದ ಡಿಜಿಟಲ್ ಮನರಂಜನಾ ಕ್ಷೇತ್ರದಲ್ಲಿ ಭಾರೀ ಬದಲಾವಣೆಯನ್ನು ತರಲು ಸಿದ್ಧವಾಗಿರುವ ಆನ್‌ಲೈನ್...

ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಧಾನಿ, ಸಿಎಂ ಪದಚ್ಯುತಿಗೆ ಅನುವು ಮಾಡಿಕೊಡುವ ಮಸೂದೆ ಸಂಸತ್ತಿನಲ್ಲಿ ಮಂಡನೆ

ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟ ಅಥವಾ ಬಂಧನದಲ್ಲಿರುವ ಚುನಾಯಿತ ಪ್ರತಿನಿಧಿಗಳನ್ನು ಅಧಿಕಾರದಿಂದ...

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಗುಜರಾತ್‌ನ ಗ್ರಾಮವೊಂದರಲ್ಲಿ ಕೊನೆಗೂ ದಲಿತರಿಗೆ ಕ್ಷೌರದಂಗಡಿಗೆ ಮುಕ್ತ ಪ್ರವೇಶ: ಶತಮಾನಗಳ ಅನಿಷ್ಟ ಪದ್ದತಿಗೆ ತೆರೆ

ಗುಜರಾತ್‌ನ ಜುನಾಗಡ್‌ ಜಿಲ್ಲೆಯಲ್ಲಿ ಗಡ್ಡ ಮೀಸೆ ಬೆಳೆಸಿದ್ದಕ್ಕೆ ದಲಿತ ಯುವಕರಿಬ್ಬರ ಜಾತಿ...

Download Eedina App Android / iOS

X