ಅಮೆರಿಕ ಅಲಾಸ್ಕಾ ಪೆನಿನ್ಸುಲಾ ಪ್ರದೇಶದ ಬಳಿ ಭಾನುವಾರ (ಜುಲೈ 16) 7.4 ತೀವ್ರತೆಯ ಭೂಕಂಪ ಸಂಭವಿಸಿದೆ. ಈ ಹಿನ್ನೆಲೆ ಸುತ್ತಮುತ್ತಲ ಕೆಲವು ಪ್ರದೇಶಗಳಿಗೆ ಸುನಾಮಿ ಎಚ್ಚರಿಕೆ ನೀಡಲಾಗಿದೆ ಎಂದು ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆ (ಯುಎಸ್‌ಜಿಎಸ್) ಹೇಳಿದೆ.
ಅಲಾಸ್ಕನ್ ಪೆನಿನ್ಸುಲಾ, ಅಲ್ಯೂಟಿಯನ್ ದ್ವೀಪಗಳು ಮತ್ತು ಕುಕ್ ಇನ್ಲೆಟ್ ಪ್ರದೇಶಗಳಲ್ಲಿ ನಡುಕದ ಅನುಭವವಾಗಿದೆ ಎಂದು ಅಲಾಸ್ಕಾ ಭೂಕಂಪ ಕೇಂದ್ರ ಹೇಳಿದೆ.
ಅಮೆರಿಕದ ಅಲಾಸ್ಕಾ ಪ್ರದೇಶವು ಭೂಕಂಪಗಳು ಸಂಭವಿಸುವ ಫೆಸಿಪಿಕ್ ವಲಯದ ಒಂದು ಭಾಗವಾಗಿದೆ. ಭೂಕಂಪವು 9.3 ಕಿ.ಮೀ (5.7 ಮೈಲು) ಆಳದಲ್ಲಿ ಕೇಂದ್ರಿತವಾಗಿತ್ತು ಎಂದು ಯುಎಸ್‌ಜಿಎಸ್ ಹೇಳಿದೆ.
1964ರ ಮಾರ್ಚ್‌ನಲ್ಲಿ ಅಲಾಸ್ಕಾದಲ್ಲಿ 9.2 ತೀವ್ರತೆಯ ಭೂಕಂಪ ಸಂಭವಿಸಿತ್ತು. ಇದು ಉತ್ತರ ಅಮೆರಿಕದಲ್ಲಿ ದಾಖಲಾದ ಪ್ರಬಲ ಭೂಕಂಪ ಎಂದು ವರದಿಯಾಗಿದೆ. ಇದು ಕರಾವಳಿಯ ಹಡಗು ಪ್ರದೇಶವನ್ನು ಧ್ವಂಸಗೊಳಿಸಿತು.
ಈ ಸುದ್ದಿ ಓದಿದ್ದೀರಾ? ಡೊನಾಲ್ಡ್ ಟ್ರಂಪ್ ಬಿಟ್ಟು ಅಮೆರಿಕ ಆಳಿದ ಅಧ್ಯಕ್ಷರೆಲ್ಲ ಗುಲಾಮಗಿರಿ ಪ್ರೋತ್ಸಾಹಿಸಿದ ವಂಶಕ್ಕೆ ಸೇರಿದವರು
ಅಮೆರಿಕ ಪಶ್ಚಿಮ ಕರಾವಳಿ, ಅಲಾಸ್ಕಾದ ಕೊಲ್ಲಿ ಮತ್ತು ಹವಾಯಿ ಪ್ರದೇಶಗಳಲ್ಲಿ ಭಾರೀ ಸುನಾಮಿ ಉಂಟಾಗಲು ಭೂಕಂಪ ಕಾರಣವಾಗಿತ್ತು.
ಭೂಕಂಪ ಮತ್ತು ಸುನಾಮಿಗೆ ಸುಮಾರು 250ಕ್ಕಿಂತ ಹೆಚ್ಚು ಜನರು ಮೃತಪಟ್ಟಿದ್ದರು ಎಂದು ವರದಿಯಾಗಿತ್ತು.