ರಷ್ಯಾ-ಉಕ್ರೇನ್ ಗಡಿಯಲ್ಲಿ ಏಳು ಭಾರತೀಯರು: ಉಕ್ರೇನ್ ವಿರುದ್ಧ ಹೋರಾಡಲು ರಷ್ಯಾ ಒತ್ತಾಯ- ಆರೋಪ

Date:

Advertisements

ರಷ್ಯಾ-ಉಕ್ರೇನ್ ಗಡಿಯಲ್ಲಿ ಸಿಲುಕಿರುವ ಏಳು ಭಾರತೀಯರು ಭಾರತಕ್ಕೆ ಮರಳಲು ಸರ್ಕಾರದ ಸಹಾಯವನ್ನು ಕೋರಿದ್ದಾರೆ. ತಾವು ಗಡಿಯಲ್ಲಿ ಸಿಲುಕಿರುವ ಬಗ್ಗೆ ವಿಡಿಯೋ ಮಾಡಿ ಅವರು ಹಂಚಿಕೊಂಡಿದ್ದಾರೆ.

ಗಡಿಯಲ್ಲಿ ಸಿಲುಕಿರುವವರನ್ನು ಗಗನ್‌ದೀಪ್ ಸಿಂಗ್ (24), ಲವ್‌ಪ್ರೀತ್ ಸಿಂಗ್ (24), ನರೈನ್ ಸಿಂಗ್ (22), ಗುರುಪ್ರೀತ್ ಸಿಂಗ್ (21), ಗುರುಪ್ರೀತ್ ಸಿಂಗ್ (23), ಹರ್ಷ್ ಕುಮಾರ್ (20) ಮತ್ತು ಅಭಿಷೇಕ್ ಕುಮಾರ್ (21) ಎಂದು ಗುರುತಿಸಲಾಗಿದೆ. ಅವರಲ್ಲಿ, ಐವರು ಕಾರ್ಮಿಕರು ಪಂಜಾಬ್ ಮೂಲದವರಾಗಿದ್ದು, ಇನ್ನಿಬ್ಬರು ಹರಿಯಾಣದವರು ಎಂದು ‘ದಿ ಹಿಂದು’ ವರದಿ ಮಾಡಿದೆ.

ವಿಡಿಯೋದಲ್ಲಿ ಕಾಣಸಿಗುವ ಈ ಏಳು ಮಂದಿ ಮಿಲಿಟರಿ ಚಳಿಗಾಲದ ಜಾಕೆಟ್‌ಗಳನ್ನು ಧರಿಸಿದ್ದಾರೆ. ಮಂದ ಬಳಕಿನ ಅಸ್ತವ್ಯಸ್ತವಾಗಿರುವ ಕೋಣೆಯ ಮೂಲೆಯಲ್ಲಿರುವುದು ಕಂಡುಬಂದಿದೆ.

Advertisements

ಹೊಸ ವರ್ಷಾಚರಣೆಗಾಗಿ ಡಿಸೆಂಬರ್ 27 ರಂದು ಆ ಏಳು ಮಂದಿ ಪ್ರವಾಸಿ ವೀಸಾ ಪಡೆದು ರಷ್ಯಾಕ್ಕೆ ತೆರಳಿದ್ದಾಗಿ ಏಳು ಮಂದಿಯಲ್ಲಿ ಒಬ್ಬನಾದ ಹರ್ಷಕುಮಾರ್ ವಿಡಿಯೋದಲ್ಲಿ ಹೇಳಿದ್ದಾರೆ. ರಷ್ಯಾದ ಪ್ರವಾಸಿ ವೀಸಾ 90 ದಿನಗಳ ಮಾನ್ಯತೆ ಹೊಂದಿದ್ದರೂ, ಅವರು ಬೆಲಾರಸ್‌ಗೆ ತೆರಳಿದ್ದರಿಂದ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ.

“ಒಬ್ಬ ಏಜೆಂಟ್ ನಮ್ಮನ್ನು ಬೆಲಾರಸ್‌ಗೆ ಕರೆದೊಯ್ಯಲು ಮುಂದಾದರು. ಬೆಲಾರಸ್‌ಗೆ ಹೋಗಲು ಅಲ್ಲಿನ ವೀಸಾ ಕೂಡ ಬೇಕೆಂದು ನಮಗೆ ತಿಳಿದಿರಲಿಲ್ಲ. ನಾವು ಬೆಲಾರಸ್‌ಗೆ ಹೋದ ಬಳಿಕ, ಆ ಏಜೆಂಟ್‌ ನಮ್ಮ ಬಳಿ ಹೆಚ್ಚು ಹಣ ಕೇಳಿದರು. ನಾವು ಕೊಡಲಿಲ್ಲ. ಆತ ನಮ್ಮನ್ನು ಬಿಟ್ಟು ಹೋದ. ಅಲ್ಲಿನ ಪೊಲೀಸರು ನಮ್ಮನ್ನು ಹಿಡಿದು, ನಮ್ಮ ದಾಖಲೆಗಳಿಗೆ ಸಹಿ ಮಾಡಿದ ರಷ್ಯಾದ ಅಧಿಕಾರಿಗಳಿಗೆ ಒಪ್ಪಿಸಿದರು” ಎಂದು ಹರ್ಷ ವಿವರಿಸಿದ್ದಾರೆ.

”ಪೊಲೀಸರು ನಮ್ಮನ್ನು ಬಂಧಿಸಿದ್ದ ಕಾರಣ, ಅಧಿಕಾರಿಗಳು ನಮ್ಮನ್ನು ರಷ್ಯಾ ಸೇನೆಗೆ ಸೇರುವಂತೆ ಒತ್ತಾಯಿಸಿದರು. ಇಲ್ಲವಾದಲ್ಲಿ, 10 ವರ್ಷಗಳ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಬೆದರಿಸಿದರು” ಎಂದು ಆತ ಆರೋಪಿಸಿದ್ದಾರೆ.

“ನಾವು ಒಂದು ವರ್ಷದ ನಂತರ ಮಾತ್ರವೇ ಭಾರತಕ್ಕೆ ಮರಳಬಹುದೆಂದು ರಷ್ಯಾ ಸೇನೆ ಹೇಳುತ್ತಿದೆ. ಅವರು ಯುದ್ಧವನ್ನು ಗೆಲ್ಲಲು ಸಹಾಯ ಮಾಡಲು ನಮ್ಮನ್ನು ಕೇಳುತ್ತಿದ್ದಾರೆ. ಅವರಿಗೆ ಹೇಗೆ ಸಹಾಯ ಮಾಡಬೇಕೆಂದು ನಮಗೆ ತಿಳಿದಿಲ್ಲ. ಸಹಾಯ ಮಾಡದಿದ್ದರೆ, ನಾವು ಉಳಿಯುವುದಿಲ್ಲ” ಎಂದು ಮತ್ತೊಬ್ಬ ವ್ಯಕ್ತಿ ವಿಡಿಯೋದಲ್ಲಿ ಹೇಳಿದ್ದಾರೆ.

ಭಾರತೀಯ ಪ್ರಜೆಗಳು ತಮಗೆ ಸಹಾಯ ಮಾಡುವಂತೆ ರಾಯಭಾರ ಕಚೇರಿ ಮತ್ತು ಸರ್ಕಾರವನ್ನು ವಿನಂತಿಸಿದ್ದಾರೆ. “ಇದು ನಮ್ಮ ಕೊನೆಯ ವೀಡಿಯೊ ಆಗಿರಬಹುದು. ಅವರು ನಮ್ಮನ್ನು ಉಕ್ರೇನ್‌ನ ಯುದ್ಧ ಪ್ರದೇಶಕ್ಕೆ ಕಳುಹಿಸುತ್ತಿದ್ದಾರೆ” ಎಂದು ಅವರು ವೀಡಿಯೊದಲ್ಲಿ ಹೇಳಿದ್ದಾರೆ.

ಕಳೆದ ವಾರ, ವಿದೇಶಾಂಗ ವ್ಯವಹಾರಗಳ ಸಚಿವಾಲಯವು, ”ರಷ್ಯಾದ ಸೈನ್ಯಕ್ಕೆ ಸಹಾಯಕ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿರುವ ಸುಮಾರು 20 ಭಾರತೀಯ ಪ್ರಜೆಗಳ ‘ಬಿಡುಗಡೆ’ಗಾಗಿ ಅತ್ಯುತ್ತಮವಾಗಿ ಪ್ರಯತ್ನಿಸುತ್ತಿದೆ” ಎಂದು ಹೇಳಿಕೊಂಡಿದೆ.

“20 ಭಾರತೀಯರು ಸಹಾಯಕ ಸಿಬ್ಬಂದಿಯಾಗಿ ಅಥವಾ ರಷ್ಯಾದ ಸೈನ್ಯದಲ್ಲಿ ಸಹಾಯಕರಾಗಿ ಕೆಲಸ ಮಾಡಲು ಅಲ್ಲಿಗೆ ಹೋಗಿದ್ದಾರೆ ಎಂಬುದು ನಮ್ಮ ತಿಳಿವಳಿಕೆಯಾಗಿದೆ” ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ.

ಭಾರತೀಯರನ್ನು ದೇಶಕ್ಕೆ ಮರಳಿ ತರಲು ಭಾರತವು ರಷ್ಯಾದ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದೆ ಎಂದು ವಕ್ತಾರರು ಹೇಳಿದ್ದಾರೆ.

”ರಷ್ಯಾದ ಮಿಲಿಟರಿಯಲ್ಲಿ ಭದ್ರತಾ ಸಹಾಯಕರಾಗಿ ಅನೇಕ ಭಾರತೀಯಕರು ನೇಮಕಗೊಂಡಿದ್ದಾರೆ. ಅವರನ್ನು  ಉಕ್ರೇನ್‌ ವಿರುದ್ಧ ಹೋರಾಟದ ರಷ್ಯಾದ ಗಡಿಯುದ್ದಕ್ಕೂ ನಿಯೋಜಿಸಲು ಒತ್ತಾಯಿಸಲಾಗುತ್ತಿದೆ” ಎಂದು ಮಾಧ್ಯಮಗಳು ವರದಿ ಮಾಡಿವೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಮೆರಿಕದ ‘ಅಕ್ಕರೆಯ ನ್ಯಾಯಾಧೀಶ’ ಫ್ರಾಂಕ್ ಕ್ಯಾಪ್ರಿಯೊ ನಿಧನ

ರೋಡ್ ಐಲ್ಯಾಂಡ್‌ನ ನಿವೃತ್ತ ಮುನಿಸಿಪಲ್ ನ್ಯಾಯಾಧೀಶರಾಗಿದ್ದ, ಸಾಮಾಜಿಕ ಜಾಲತಾಣಗಳಲ್ಲಿ 'ಅಕ್ಕರೆಯ ನ್ಯಾಯಾಧೀಶ'...

ಉಪ ರಾಷ್ಟ್ರಪತಿ ಚುನಾವಣೆ: ಇಂಡಿಯಾ ಒಕ್ಕೂಟದ ಅಭ್ಯರ್ಥಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ

ಭಾರತದ ಉಪ ರಾಷ್ಟ್ರಪತಿ ಚುನಾವಣೆಗೆ ‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್‌ನ...

ಆನ್‌ಲೈನ್‌ ಜೂಜಾಟ ತಡೆಗೆ ಕಠಿಣ ಕಾನೂನು; ಸಂಸತ್ತಿನಲ್ಲಿ ಆನ್‌ಲೈನ್ ಗೇಮಿಂಗ್‌ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025 ಮಂಡನೆ

ಭಾರತದ ಡಿಜಿಟಲ್ ಮನರಂಜನಾ ಕ್ಷೇತ್ರದಲ್ಲಿ ಭಾರೀ ಬದಲಾವಣೆಯನ್ನು ತರಲು ಸಿದ್ಧವಾಗಿರುವ ಆನ್‌ಲೈನ್...

ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಧಾನಿ, ಸಿಎಂ ಪದಚ್ಯುತಿಗೆ ಅನುವು ಮಾಡಿಕೊಡುವ ಮಸೂದೆ ಸಂಸತ್ತಿನಲ್ಲಿ ಮಂಡನೆ

ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟ ಅಥವಾ ಬಂಧನದಲ್ಲಿರುವ ಚುನಾಯಿತ ಪ್ರತಿನಿಧಿಗಳನ್ನು ಅಧಿಕಾರದಿಂದ...

Download Eedina App Android / iOS

X