ಅಮೆರಿಕದ ಅಲಾಸ್ಕಾದಲ್ಲಿ 7.3 ತೀವ್ರತೆಯ ಭೂಕಂಪ; ಸುನಾಮಿ ಎಚ್ಚರಿಕೆ

Date:

Advertisements

ಅಮೆರಿಕದ ಅಲಾಸ್ಕಾದಲ್ಲಿ ರಿಕ್ಟರ್ ಮಾಪಕದಲ್ಲಿ 7.3 ತೀವ್ರತೆಯ ಭೂಕಂಪ ಸಂಭವಿಸಿದ್ದು, ಸುನಾಮಿ ಎಚ್ಚರಿಕೆ ನೀಡಲಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ.

ಸಮುದ್ರದ 36 ಕಿ.ಮೀ ಆಳದಲ್ಲಿ ಭೂಕಂಪ ಸಂಭವಿಸಿದೆ. ಅಲಾಸ್ಕಾ ಪರ್ಯಾಯ ದ್ವೀಪದ ಸ್ಯಾಂಡ್ ಪಾಯಿಂಟ್‌ನಿಂದ 87 ಕಿ.ಮೀ ದೂರದಲ್ಲಿ ಇದರ ಕೇಂದ್ರ ಬಿಂದು ಇತ್ತು ಎಂದು ಎನ್‌ಸಿಎಸ್ ಮಾಹಿತಿ ನೀಡಿದೆ. ಭೂಕಂಪದ ನಂತರ ದಕ್ಷಿಣ ಅಲಾಸ್ಕಾ ಹಾಗೂ ಪರ್ಯಾಯ ದ್ವೀಪದ ಭಾಗದಲ್ಲಿ ಸುನಾಮಿ ಎಚ್ಚರಿಕೆ ನೀಡಲಾಗಿದೆ.

ಸಮುದ್ರದ ಕಡಿಮೆ ಆಳದಲ್ಲಿ ಸಂಭವಿಸಿದ ಭೂಕಂಪ ಇದಾಗಿದ್ದು, ಇಂತಹ ಭೂಕಂಪಗಳು ಹೆಚ್ಚು ಅಪಾಯಕಾರಿಯಾಗಿರುತ್ತವೆ. ಈ ಹಿನ್ನೆಲೆ ಕರಾವಳಿಯ ಜನರು ಎತ್ತರದ ಪ್ರದೇಶಗಳಿಗೆ ಅಥವಾ ಒಳನಾಡಿಗೆ ಸ್ಥಳಾಂತರಗೊಳ್ಳಬೇಕು. ಕಡಲತೀರದಿಂದ ದೂರವಿರಬೇಕು ಎಂದು ಅಮೆರಿಕ ರಾಷ್ಟ್ರೀಯ ಹವಾಮಾನ ಸೇವಾ ಕೇಂದ್ರ ಎಚ್ಚರಿಕೆ ನೀಡಿದೆ.

ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ದೇವನಹಳ್ಳಿ ಐತಿಹಾಸಿಕ ಗೆಲುವಿಗೆ ರೈತರು, ಪ್ರಗತಿಪರ ಸಂಘಟನೆಗಳು ಹಾಗೂ ಸಿದ್ದರಾಮಯ್ಯ ಕಾರಣ

ಅಮೆರಿಕ ರಾಷ್ಟ್ರೀಯ ಹವಾಮಾನ ಸೇವಾ ಕೇಂದ್ರವು ಈ ಎಚ್ಚರಿಕೆ ನೀಡಿದ್ದು, ಕರಾವಳಿಯ ಜನರು ಎತ್ತರದ ಪ್ರದೇಶಗಳಿಗೆ ಅಥವಾ ಒಳನಾಡಿಗೆ ಸ್ಥಳಾಂತರಗೊಳ್ಳಬೇಕು. ಕಡಲತೀರಗಳು ಮತ್ತು ಜಲಮಾರ್ಗಗಳಿಂದ ದೂರವಿರಬೇಕೆಂಬುದನ್ನು ಸೂಚಿಸುತ್ತದೆ.

ಅಮೆರಿಕದಲ್ಲಿ ಬೇರೆ ರಾಜ್ಯಗಳಿಗೆ ಹೋಲಿಸಿದರೆ ಅಲಾಸ್ಕಾದಲ್ಲಿ ಹೆಚ್ಚು ಭೂಕಂಪ ಸಂಭವಿಸುತ್ತವೆ. ರಾಜ್ಯದ ಜನಸಂಖ್ಯೆಯ ಮುಕ್ಕಾಲು ಭಾಗಕ್ಕಿಂತ ಹೆಚ್ಚು ಜನರು 7 ತೀವ್ರತೆಯ ಭೂಕಂಪ ಸಂಭವಿಸಬಹುದಾದ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪಾಕಿಸ್ತಾನ | ಬಲೂಚಿಸ್ತಾನದಲ್ಲಿ ಬಾಂಬ್ ದಾಳಿ: 10 ಮಂದಿ ಸಾವು

ಪಾಕಿಸ್ತಾನದ ವಿವಾದಿತ ರಾಜ್ಯವಾದ ಬಲೂಚಿಸ್ತಾನದಲ್ಲಿ ಅರೆಸೈನಿಕ ಪಡೆಗಳ ಮೇಲೆ ಬಾಂಬ್‌ ದಾಳಿ...

ದೋಹಾ | ಕರ್ನಾಟಕ ಸಂಘ ಕತಾರ್, ಐಸಿಸಿ ಸಹಯೋಗದೊಂದಿಗೆ ‘ಎಂಜಿನಿಯರ್ಸ್‌ ಡೇ’ ಆಚರಣೆ

ಭಾರತರತ್ನ ಸರ್. ಎಂ. ವಿಶ್ವೇಶ್ವರಯ್ಯ ಅವರ 164ನೇ ಜನ್ಮದಿನದ ಅಂಗವಾಗಿ, ಕರ್ನಾಟಕ...

Breaking | ಮಹೇಶ್‌ ಶೆಟ್ಟಿ ತಿಮರೋಡಿ ಗಡಿಪಾರು ಆದೇಶಕ್ಕೆ ಹೈಕೋರ್ಟ್‌ನಿಂದ ಮಧ್ಯಂತರ ತಡೆ

ಮಹೇಶ್‌ ಶೆಟ್ಟಿ ತಿಮರೋಡಿ ಅವರನ್ನು ದಕ್ಷಿಣ ಕನ್ನಡ ಜಿಲ್ಲೆಯಿಂದ ರಾಯಚೂರು ಜಿಲ್ಲೆಯ...

ಭಾರತ-ಭೂತಾನ್ ನಡುವೆ 2 ಗಡಿಯಾಚೆಗಿನ ರೈಲು ಯೋಜನೆ ಘೋಷಣೆ

ಭೂತಾನ್ ಮತ್ತು ಭಾರತದ ನಡುವೆ ಎರಡು ಗಡಿಯಾಚೆಗಿನ ರೈಲು ಸಂಪರ್ಕ ನಿರ್ಮಿಸುವ...

Download Eedina App Android / iOS

X