ಬಾಂಗ್ಲಾದೇಶದ ಸಂಸದನ ಹತ್ಯೆಗೆ 5 ಕೋಟಿ ರೂ. ಸುಪಾರಿ: ಪ್ರಕರಣ ಭೇದಿಸಿದ ಪೊಲೀಸರು

Date:

ಕೋಲ್ಕತ್ತಾದಲ್ಲಿ ಹತ್ಯೆಯಾಗಿದ್ದ ಬಾಂಗ್ಲಾದೇಶ ಸಂಸದನ ಪ್ರಕರಣವನ್ನು ಪಶ್ಚಿಮ ಬಂಗಾಳ ಪೊಲೀಸರು ಭೇದಿಸಿದ್ದು, ಘಟನೆಗೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

- Advertisement -

ಬಾಂಗ್ಲಾದೇಶದ ಸಂಸದ ಅನ್ವರೂಲ್ ಅಜೀಮ್ ಅನರ್ ಅವರನ್ನು ಹತ್ಯೆ ಮಾಡಲು ಸಂಸದರ ಸ್ನೇಹಿತನೊಬ್ಬ 5 ಕೋಟಿ ರೂ. ಸುಪಾರಿ ನೀಡಿದ್ದ ಎಂದು ಪ್ರಾಥಮಿಕ ತನಿಖೆಗಳಿಂದ ತಿಳಿದುಬಂದಿದೆ ಎಂದು ಕೊಲ್ಕತ್ತಾದ ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಜನತಂತ್ರದ ಬಿಕ್ಕಟ್ಟಿಗೆ ಮೌನ; ವ್ಯಾಪಾರಿಗಳ ನಷ್ಟಕ್ಕೆ ಪರಿಹಾರದ ಭರವಸೆ;...

ಚುನಾವಣಾ ಜನತಂತ್ರ ಬಿಕ್ಕಟ್ಟಿಗೆ ಸಿಲುಕಿದಾಗ, ನಾಗರಿಕರ ಪ್ರತಿಭಟನಾ ಹಕ್ಕು ಬೀದಿಗೆ ಬಿದ್ದಾಗ ಸುಪ್ರೀಂ ಕೋರ್ಟ್ ತಳೆದ ಮೌನ, ಸ್ಪಂದಿಸಿದ ರೀತಿ, ಕನಾಟ್ ಪ್ಲೇಸ್‌ನ ವ್ಯಾಪಾರಿಗಳು ಹಾಗೂ ಉದ್ಯೋಗಿಗಳ ಜೀವನೋಪಾಯಕ್ಕೆ ಧಕ್ಕೆಯಾದರೆ ಮಧ್ಯಪ್ರವೇಶಿಸಿ ಪರಿಹಾರ...

‘ಕೈಮುಗಿದು ಕಾಲಿಗೆ ಬೀಳುವೆ…’ ಪ್ರಜಾಪ್ರಭುತ್ವ ಕುಸಿತಕ್ಕೆ ಮುನ್ನುಡಿಯೇ?

ಜಾತಿ ಅಸಮಾನತೆ, ಸಾಮಾಜಿಕ ಶೋಷಣೆ ಮತ್ತು ರಾಜಕೀಯ ಪ್ರಭಾವದ ಮುಂದೆ ಜನಪ್ರತಿನಿಧಿಗಳೇ ಕೈಮುಗಿದು ನಿಲ್ಲುವ ದುಸ್ಥಿತಿ ಪ್ರಜಾಪ್ರಭುತ್ವದ ಅಡಿಪಾಯವನ್ನೇ ಅಲುಗಾಡಿಸುತ್ತಿದೆ. ಸಂವಿಧಾನ ಸಾರಿದ ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವ ಕೇವಲ ಕಾಗದಕ್ಕೆ ಸೀಮಿತವಾಗುತ್ತಿದೆಯೇ...

JNU ವಿದ್ಯಾರ್ಥಿ ‘ನಜೀಬ್’ ನಾಪತ್ತೆಗೆ 10 ವರ್ಷಗಳು: ಉತ್ತರ...

ತನಿಖಾ ಸಂಸ್ಥೆಗಳು ಕಡತವನ್ನು ಮುಚ್ಚಿದ ಮಾತ್ರಕ್ಕೆ ಒಬ್ಬ ತಾಯಿಯ ಹುಡುಕಾಟವನ್ನಾಗಲಿ ಅಥವಾ ಅಮಾಯಕ ವಿದ್ಯಾರ್ಥಿಯೊಬ್ಬನ ನಾಪತ್ತೆ ಕುರಿತ ಪ್ರಶ್ನೆಗಳನ್ನಾಗಲಿ ಅಳಿಸಿಹಾಕಲು ಸಾಧ್ಯವಿಲ್ಲ. ನಜೀಬ್ ಅಹ್ಮದ್ ಅವರನ್ನು ಕೇವಲ ಒಂದು ಪ್ರತಿಭಟನೆಯ ಸಂಕೇತವಾಗಿ ನೆನೆಯುವ...

ಅನ್ವರೂಲ್‌ ಮೇ 13ರಂದು ಕೋಲ್ಕತ್ತಾದಲ್ಲಿ ನಾಪತ್ತೆಯಾಗಿ, ಮೇ.23ರಂದು ಕೊಲೆಯಾಗಿದ್ದರು. ಘಟನೆಗೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದೆ ಎಂದು ಬಾಂಗ್ಲಾದೇಶದ ಗೃಹ ಸಚಿವ ಅಸಾದುಜ್ಜೀಮಾನ್ ಖಾನ್ ತಿಳಿಸಿದ್ದಾರೆ.

ಪ್ರಕರಣವನ್ನು ತನಿಖೆಗೊಳಪಡಿಸಲು ಪಶ್ಚಿಮ ಬಂಗಾಳ ಪೊಲೀಸ್ ರಾಜ್ಯ ಸಿಐಡಿಗೆ ನೀಡಿತ್ತು.

“ಇದೊಂದು ಪೂರ್ವ ಯೋಜಿತ ಕೃತ್ಯವಾಗಿದೆ. ನೆರೆಯ ದೇಶದ ಸಂಸದರನ್ನು ಹತ್ಯೆ ಮಾಡಲು ದೊಡ್ಡ ಮೊತ್ತವಾದ ಸುಮಾರು 5 ಕೋಟಿ ರೂ.ಗಳನ್ನು ಸಂಸದರ ಸ್ನೇಹಿತನೊಬ್ಬ ಸುಪಾರಿ ನೀಡಿದ್ದ” ಎಂದು ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಯುಪಿ-ಬಿಹಾರದಲ್ಲಿ ಧೂಳೆಬ್ಬಿಸಿದೆ ʼಖಟಾಖಟ್ ಖಟಾಖಟ್ʼ ಮಹಾಲಕ್ಷ್ಮೀ ಯೋಜನೆ

ಸುಪಾರಿ ನೀಡಿದ ಆರೋಪಿಯು ಅಮೆರಿಕ ಪ್ರಜೆಯಾಗಿದ್ದು, ಕೋಲ್ಕತ್ತಾದಲ್ಲಿ ಸ್ವಂತ ಪ್ಲಾಟ್‌ ಹೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

“ಸಿಐಡಿ ಪೊಲೀಸರು ಕೋಲ್ಕತ್ತಾದ ಹೊರವಲಯದಲ್ಲಿರುವ ಆರೋಪಿ ಅಪಾರ್ಟ್‌ಮೆಂಟ್ ಬಳಿ ಕೆಲೆಯಾದ ಸಂಸದರ ರಕ್ತದ ಕಲೆಗಳನ್ನು ಪತ್ತೆ ಹಚ್ಚಿದ್ದಾರೆ. ಭಾರತದಲ್ಲಿ ಚಿಕಿತ್ಸೆ ಪಡೆಯಲು ಬಂಧಿದ್ದ ಬಾಂಗ್ಲಾದೇಶದ ಸಂಸದರಾದ ಅನ್ವರೂಲ್ ಅಜೀಮ್ ಅನರ್ ಮೇ.13 ರಂದು ನಾಮತ್ತೆಯಾಗಿದ್ದರು. ನಮ್ಮ ಫಾರೆನ್ಸಿಕ್‌ ತಂಡ ಅಪರಾಧ ನಡೆದ ಸ್ಥಳದಲ್ಲಿ ಪರಿಶೀಲನೆ ನಡೆಸುತ್ತಿದೆ” ಎಂದು ಸಿಐಡಿ ವಿಭಾಗದ ಐಜಿ ಅಖಿಲೇಶ್ ಚತುರ್ವೇದಿ ತಿಳಿಸಿದ್ದಾರೆ.

ಅನ್ವರೂಲ್‌ ಅವರು ವೈದ್ಯಕೀಯ ಚಿಕಿತ್ಸೆಗೆಂದು ಮೇ 13ರಂದು ಕೋಲ್ಕತ್ತಾಗೆ ಆಗಮಿಸಿದ ನಂತರ ನಾಪತ್ತೆಯಾಗಿದ್ದರು. ಪರಿಚಿತರನ್ನು ಭೇಟಿ ಮಾಡಲು ತೆರಳಿದ್ದವರು ವಾಪಸಾಗಿರಲಿಲ್ಲ. ನಂತರ ಅವರು ನಾಪತ್ತೆಯ ಬಗ್ಗೆ ಸಂಸದರ ಸ್ನೇಹಿತರು ಪೊಲೀಸರಿಗೆ ದೂರು ನೀಡಿದ್ದರು.

ಅನ್ವರೂಲ್‌ ಅವರ ದೇಹ ಛಿದ್ರಗೊಂಡಿದ್ದು,ಸಂಜೀವಾ ಗಾರ್ಡನ್‌ನ ಅಪಾರ್ಟ್‌ಮೆಂಟ್‌ವೊಂದರಲ್ಲಿ ಪೊಲೀಸರು ಪತ್ತೆ ಹಚ್ಚಿದ್ದರು.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಲೈಂಗಿಕ ದೌರ್ಜನ್ಯ ಖಂಡಿಸಿ ದೆಹಲಿ ಪೊಲೀಸ್ ಕೇಂದ್ರ ಕಚೇರಿಗೆ ಮಹಿಳಾ ಸಂಘಟನೆಗಳ ಮುತ್ತಿಗೆ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಮತ್ತು ಮುಖ್ಯ ಚುನಾವಣಾ...

ಪತ್ರಕರ್ತರ ಮೇಲಿನ ಪೊಲೀಸ್‌ ದಾಳಿಗೆ ಡಿಎಸ್‌ಜೆಎ ಖಂಡನೆ; ಪ್ರೆಸ್ ಕೌನ್ಸಿಲ್‌ನಿಂದ ಮಾರ್ಗಸೂಚಿ ಪ್ರಕಟ

ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಗಳು ಮತ್ತು ಪೊಲೀಸ್ ಕ್ರಮಗಳನ್ನು ವರದಿ ಮಾಡುತ್ತಿರುವ ಪತ್ರಕರ್ತರ...

ದೇಶದ ಜನತೆ ಅಧಿಕಾರ ಬದಲಾವಣೆ ಬಯಸಿದ್ದಾರೆ, ನೀವು ಹೊರಡುವ ಸಮಯ ಬಂದಿದೆ; ರಾಜ್‌ನಾಥ್‌ಗೆ ಸಿಬಲ್‌ ಎಚ್ಚರಿಕೆ

ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಬಾಂಗ್ಲಾದೇಶ ಮಾದರಿಯಲ್ಲಿ ದೇಶದಲ್ಲಿ 'ಸರ್ಕಾರ ಬದಲಾವಣೆ'ಯ...

ಖ್ಯಾತ ಹಿರಿಯ ಸಂಗೀತ ನಿರ್ದೇಶಕ ದೇವ ಇನ್ನಿಲ್ಲ

ಕನ್ನಡ ಸೇರಿದಂತೆ ದಕ್ಷಿಣ ಭಾರತದ ಹಲವು ಭಾಷೆಗಳ ಚಿತ್ರಗಳಿಗೆ ಸುಮಧುರ ಸಂಗೀತ...