ಬಾಂಗ್ಲಾದೇಶದಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ: 10 ದಿನಗಳ ನಂತರ ಇಂಟರ್ನೆಟ್ ಸೇವೆ ಪುನರಾರಂಭ

Date:

Advertisements

ಮೀಸಲಾತಿ ಸುಧಾರಣೆಗಳ ವಿರುದ್ಧ ವಿದ್ಯಾರ್ಥಿಗಳ ಪ್ರತಿಭಟನೆ ಹಿನ್ನೆಲೆಯಲ್ಲಿ ಸುಳ್ಳು ಸುದ್ದಿ ಪಸರಿಸುವುದನ್ನು ತಡೆಯಲು ಬಾಂಗ್ಲಾದೇಶ ದ ಶೇಖ್ ಹಸೀನಾ ಸರ್ಕಾರ ಇಂಟರ್‌ನೆಟ್‌ ಸ್ಥಗಿತಗೊಳಿಸಿತ್ತು. ಈಗ ಪುನಃ 10 ದಿನಗಳ ನಂತರ ಇಂದು(ಜುಲೈ 28) ಇಂಟರ್‌ನೆಟ್‌ಗೆ ವಿಧಿಸಿದ್ದ ನಿರ್ಬಂಧವನ್ನು ಹಿಂತೆಗೆದುಕೊಳ್ಳಲಾಗಿದ್ದು, ಸೇವೆಗಳನ್ನು ಪುನರಾಂಭಗೊಳಿಸಲಾಗಿದೆ.

ಬಾಂಗ್ಲಾದೇಶದ ಮಾಹಿತಿ ಮತ್ತು ಸಂವಹನ ಸಚಿವ ಜುನೈದ್ ಅಹಮದ್ ಪಾಲಕ್, 5ಜಿ ಇಂಟರ್‌ನೆಟ್‌ಅನ್ನು ಎಲ್ಲ ಬಳಕೆದಾರರಿಗೆ ಮೂರು ದಿನಗಳ ಕಾಲ ಉಚಿತವಾಗಿ ಒದಗಿಸಲಾಗುವುದು ಎಂದು ತಿಳಿಸಿದ್ದಾರೆ.

ಇಂದು ಮಧ್ಯಾಹ್ನ 3 ಗಂಟೆಯ ನಂತರ ಢಾಕಾದಲ್ಲಿ ರೊಬಿ, ಗ್ರಾಮೀಣ್‌ಫೋನ್, ಬಾಂಗ್ಲಾಲಿಂಕ್ ಹಾಗೂ ಇತರ ಸೇವಾ ಪೂರೈಕೆದಾರರು ಇಂಟರ್‌ನೆಟ್ ಸೇವೆಯನ್ನು ಪುನರಾಂಭಿಸಿದ್ದಾರೆ.

Advertisements

ದೇಶಾದ್ಯಂತ ಗಲಭೆ ಹೆಚ್ಚಾದ ನಂತರ ಜುಲೈ 18ರಂದು ಬಾಂಗ್ಲಾದೇಶ ಸರ್ಕಾರ ಮೊಬೈಲ್‌ ಇಂಟರ್‌ನೆಟ್‌ಅನ್ನು ಸ್ಥಗಿತಗೊಳಿಸಿತ್ತು.

“ದೇಶದಲ್ಲಿ ಸಂಘರ್ಷ ಉಂಟಾದ ನಂತರ ಸಾಮಾಜಿಕ ಮಾಧ್ಯಮಗಳಲ್ಲಿ ನಕಲಿ ಸುದ್ದಿಗಳನ್ನು ತಡೆಯಲು ಇಂಟರ್‌ನೆಟ್‌ಅನ್ನು ಸ್ಥಗಿತಗೊಳಿಸಲಾಗಿತ್ತು.

ಈ ಸುದ್ದಿ ಓದಿದ್ದೀರಾ? ಪ್ಯಾರಿಸ್ ಒಲಿಂಪಿಕ್ಸ್ 2024 | ಭಾರತಕ್ಕೆ ಮೊದಲ ಪದಕ; 10 ಮೀಟರ್‌ ಏರ್‌ ಪಿಸ್ತೂಲ್‌ನಲ್ಲಿ ಕಂಚು ಗೆದ್ದ ಮನು ಭಾಕರ್‌

ಜೂಲೈ 18ರಿಂದ 23ರವರೆಗೆ ಉಂಟಾದ ಗಲಭೆಯಲ್ಲಿ ದೇಶಾದ್ಯಂತ ಬ್ಯಾಂಡ್‌ವಿಡ್ತ್ ಪೂರೈಕೆಯಲ್ಲಿ ಶೇ.30 ರಿಂದ 40ರವರೆಗೆ ಹಾನಿಯುಂಟಾಗಿತ್ತು. ಸಂಘರ್ಷ ಉಂಟಾದ ನಂತರ ಒಂದು ಗಂಟೆಯೊಳಗೆ ಬ್ರ್ಯಾಡ್‌ಬ್ಯಾಂಡ್ ಹಾಗೂ ಮೊಬೈಲ್‌ ಇಂಟರ್‌ನೆಟ್‌ಅನ್ನು ಬಂದ್‌ ಮಾಡಲಾಗಿತ್ತು. ಇಂಟರ್‌ನೆಟ್‌ಅನ್ನು ಮರಳಿ ನೀಡಿದರೂ ಮೊಬೈಲ್‌ ಇಂಟರ್‌ನೆಟ್‌ ನಾಳೆಯವರೆಗೂ ಯಥಾಸ್ಥಿತಿ ಮುಂದುವರಿಯಲಿದೆ ಎಂದು ಸಚಿವ ಜುನೈದ್ ಅಹಮದ್ ಪಾಲಕ್ ತಿಳಿಸಿದ್ದಾರೆ.

ದೇಶಾದ್ಯಂತ ಮೀಸಲಾತಿ ವಿರುದ್ಧ ನಡೆದ ಪ್ರತಿಭಟನೆಯಲ್ಲಿ 150ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು. ಗಲಭೆಯ ನಂತರ ಬಾಂಗ್ಲಾದೇಶ ಸುಪ್ರೀಂ ಕೋರ್ಟ್ ಹಿರಿಯರಿಗಿದ್ದ ಮೀಸಲಾತಿಯನ್ನು ಶೇ. 5ಕ್ಕೆ ಇಳಿಸಿತ್ತು.

ಶೇ. 2 ರಷ್ಟು ಮೀಸಲಾತಿಯನ್ನು ಧಾರ್ಮಿಕ ಅಲ್ಪಸಂಖ್ಯಾತರಿಗೆ, ಲಿಂಗತ್ವ ಅಲ್ಪಸಂಖ್ಯಾತರಿಗೆ ಹಾಗೂ ಅಂಗವಿಕಲರಿಗೆ ನೀಡಿದರೆ, ಸರ್ಕಾರಿ ಉದ್ಯೋಗದಲ್ಲಿ ಉಳಿದ ಶೇ.93 ಮೀಸಲಾತಿ ಶ್ರೇಣಿಯಾಧಾರದ ಮೇಲೆ ಮುಂದುವರೆಯುವುದಾಗಿ ಕೋರ್ಟ್ ಆದೇಶಿಸಿತ್ತು.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮೋದಿ-ಝೆಲೆನ್ಸ್ಕಿ ಫೋನ್ ಮಾತುಕತೆ: ರಷ್ಯಾ ತೈಲ ಖರೀದಿ ಕುರಿತು ಭಾರತದ ಮೇಲೆ ಉಕ್ರೇನ್‌ ಒತ್ತಡ

ರಷ್ಯಾ ಜೊತೆ ಸಂಘರ್ಷದಲ್ಲಿರುವ ಉಕ್ರೇನ್‌ನ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ಪ್ರಧಾನಿ...

ಗಾಝಾದಲ್ಲಿ ಹತ್ಯೆಯಾದ ಯುವ ಪತ್ರಕರ್ತರೊಬ್ಬರ ಭಿನ್ನ ಉಯಿಲು !

ನಾನು ಸಾಯುವುದಾದರೆ, ನನ್ನ ಸಿದ್ಧಾಂತಗಳ ಮೇಲೆ ದೃಢವಾಗಿರುವೆ. ದೇವರ ಮುಂದೆ ನಾನು...

ಗಾಝಾದಲ್ಲಿ ಇಸ್ರೇಲ್ ದಾಳಿ: ಐವರು ಅಲ್‌ಜಝೀರಾ ಪತ್ರಕರ್ತರು ಹತ

ಭಾನುವಾರ ಗಾಝಾ ನಗರದಲ್ಲಿ ಅಲ್‌ಜಝೀರಾ ಟೆಂಟ್ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ...

ಟ್ರಂಪ್‌ ಕೊಟ್ಟ ಏಟಿಗೆ ಚೀನಾದತ್ತ ತಿರುಗಿದ ಪ್ರಧಾನಿ; ಚೀನೀ ಭಜನೆ ಮಾಡುತ್ತಿದೆ ಮೋದಿ ಭಕ್ತ ಗಣ

ಅಮೆರಿಕ ಭಾರೀ ಮೊತ್ತದ ತೆರಿಗೆ ಹೇರಿದ ಬೆನ್ನಲ್ಲೇ, ಭಾರತವು ಚೀನಾದೊಂದಿಗೆ ಆರ್ಥಿಕ...

Download Eedina App Android / iOS

X