ಬಿಎಲ್ಎಸ್ ಅಂತಾರಾಷ್ಟ್ರೀಯ ಕೇಂದ್ರವನ್ನು ಅಲ್ ರೀಮ್ನ ಶಮ್ಸ್ ಬೂಟಿಕ್ ಮಾಲ್ನಿಂದ ಹೊಸ ವಿಳಾಸಕ್ಕೆ ಸ್ಥಳಾಂತರಿಸಲಾಗಿದೆ ಎಂದು ಅಬುಧಾಬಿಯಲ್ಲಿರುವ ಭಾರತೀಯ ರಾಯಭಾರ ಕಚೇರಿ ಮಾಹಿತಿ ಹಂಚಿಕೊಂಡಿದೆ.
ಈ ಬಗ್ಗೆ ಟ್ವೀಟ್ ಮೂಲಕ ಮಾಹಿತಿ ನೀಡಿರುವ ಅಬುಧಾಬಿಯಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಅಧಿಕಾರಿಗಳು, ಆಗಸ್ಟ್ 25ರಿಂದ ಬಿಎಲ್ಎಸ್ ಅಂತಾರಾಷ್ಟ್ರೀಯ ಕೇಂದ್ರವು ವಾಫ್ರಾ ಸ್ಕ್ವೇರ್ ಕಟ್ಟಡ, 3ನೇ ಮಹಡಿ, ಕಚೇರಿ ಸಂಖ್ಯೆ 342, ಅಲ್ ರೀಮ್ ದ್ವೀಪ, ಅಬುಧಾಬಿ ಇಲ್ಲಿ ಕಾರ್ಯ ನಿರ್ವಹಣೆ ಮಾಡಲು ಪ್ರಾರಂಭಿಸಿದೆ ಎಂದು ತಿಳಿಸಿದ್ದಾರೆ.
ಪಾಸ್ಪೋರ್ಟ್, ವೀಸಾ ಮತ್ತು ಇತರ ಕಾನ್ಸುಲರ್ ಸೇವೆಗಳನ್ನು ಬಯಸುವ ಅರ್ಜಿದಾರರು ಜಾರಿಗೆ ಬರುವ ದಿನಾಂಕದಿಂದ ಹೊಸ ಆವರಣಕ್ಕೆ ಭೇಟಿ ನೀಡಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಇದನ್ನು ಓದಿದ್ದೀರಾ? ಟ್ರಂಪ್ ಸುಂಕ | ಇಂದಿನಿಂದ ಭಾರತದ ಸರಕುಗಳಿಗೆ 50% ತೆರಿಗೆ ಜಾರಿ; ಅಮೆರಿಕ ನೋಟಿಸ್
ಬಿಎಲ್ಎಸ್ ಕೇಂದ್ರವು ಭಾರತದ ರಾಯಭಾರ ಕಚೇರಿಗೆ ಹೊರಗುತ್ತಿಗೆ ಮತ್ತು ಇತರೆ ಸೇವೆಗಳನ್ನು ಒದಗಿಸುತ್ತಿದೆ. ಯುಎಇಯಲ್ಲಿರುವ ಭಾರತೀಯರಿಗೆ ಎಲ್ಲ ರೀತಿಯ ಸೇವೆಗಳನ್ನು ಬಿಎಲ್ಎಸ್ ಕೇಂದ್ರವು ನಿರಂತರವಾಗಿ ನೀಡುತ್ತಾ ಬಂದಿದೆ.
