ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್-1ಬಿ(H-1B) ವೀಸಾಗಳಿಗೆ $100,000 ಶುಲ್ಕವನ್ನು ಘೋಷಿಸಿದ ನಂತರ, ಬಲಪಂಥೀಯ ಆನ್‌ಲೈನ್ ಗುಂಪುಗಳು ಆಪರೇಷನ್ ‘Clog The Toilet’ ಎಂಬ ಅಭಿಯಾನವನ್ನು ಆರಂಭಿಸಿವೆ. Clog The Toilet ಅಂದರೆ ಶೌಚಾಲಯ ಬ್ಲಾಕ್ ಆಗುವಂತೆ ಮಾಡುವುದು.
ಅಂದರೆ ಭಾರತೀಯರು ಅಮೆರಿಕಕ್ಕೆ ಹಿಂತಿರುಗುವುದನ್ನು ತಡೆಯಲು ಉದ್ದೇಶಪೂರ್ವಕವಾಗಿ ವಿಮಾನಯಾನ ಬುಕಿಂಗ್ ವ್ಯವಸ್ಥೆಗಳನ್ನು ಓವರ್‌ಲೋಡ್ ಮಾಡುವ, ಟಿಕೆಟ್ ಬುಕ್ ಮಾಡಲು ಸಾಧ್ಯವಾಗದಂತೆ ಮಾಡುತ್ತಿದ್ದಾರೆ.
ಇದನ್ನು ಓದಿದ್ದೀರಾ? ಅಮೆರಿಕ H-1B ವೀಸಾ ಶುಲ್ಕ ₹84 ಲಕ್ಷಕ್ಕೆ ಏರಿಸಿದ ಟ್ರಂಪ್; ಭಾರತದ ಮೇಲೆ ಗಂಭೀರ ಪರಿಣಾಮ
ಏನಿದು ‘Clog The Toilet’ ಅಭಿಯಾನ?
ಸೆಪ್ಟೆಂಬರ್ 21ರಂದು ಡೊನಾಲ್ಡ್ ಟ್ರಂಪ್ ಅವರು H-1B ವೀಸಾಗಳಿಗೆ $100,000 ಶುಲ್ಕವನ್ನು ಘೋಷಿಸಿದ ಬಳಿಕ, ಹೊಸ ಶುಲ್ಕದಿಂದ ತಪ್ಪಿಸಿಕೊಳ್ಳಲು ಟೆಕ್ಕಿಗಳು ಅಮೆರಿಕಕ್ಕೆ ವಾಪಸ್ ಧಾವಿಸಲು ಯತ್ನಿಸಿದ್ದಾರೆ. ಈ ವೇಳೆ 4chanನಂತಹ ಪ್ಲಾಟ್‌ಫಾರ್ಮ್‌ಗಳಲ್ಲಿ ಬಲಪಂಥೀಯ ಟ್ರೋಲ್‌ಗಳು ಕಾಣಿಸಿಕೊಂಡಿದೆ. ಟ್ರೋಲ್ ಮೂಲಕವೇ ವಿಮಾನಗಳನ್ನು ನಿರ್ಬಂಧಿಸಲು ಅಭಿಯಾನವನ್ನು ನಡೆಸಲಾಗಿದೆ.
ದಕ್ಷಿಣ ಏಷ್ಯಾ ಮೂಲದ ಜನರನ್ನು ಅವಹೇಳನಕಾರಿ ಪದ ಬಳಸಿ ‘ಜೀತಗಾರರು’ ಎಂದು ಕರೆದಿರುವ ಈ ಟ್ರೋಲಿಗರು, ಯಾರಿಗೂ ವಿಮಾನ ಟಿಕೆಟ್ ಲಭಿಸದಂತೆ ನೋಡಿಕೊಳ್ಳಲು 100ಕ್ಕೂ ಹೆಚ್ಚು ಸೀಟ್‌ಗಳನ್ನು ಕಾಯ್ದಿರಿಸಿಕೊಂಡಿದ್ದಾರೆ. “ಈ ಬಗ್ಗೆ ನಮಗೆ ಹೆಮ್ಮೆಯಿದೆ” ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
They truly ruin everything. We don’t have to live like this. pic.twitter.com/d1iXY4TDto
— Info Battle Maiden (@info_maiden) September 24, 2025
ಈ ಟ್ರೋಲಿಗರು ಭಾರತ-ಯುಎಸ್ ವಿಮಾನಗಳಲ್ಲಿ ಪಾವತಿಸದೆ ಚೆಕ್‌ಔಟ್ ಪ್ರಕ್ರಿಯೆಯನ್ನು ನಡೆಸಿದ್ದು ತಾತ್ಕಾಲಿಕವಾಗಿ ವಿಮಾನದ ಸೀಟ್‌ಗಳನ್ನು ಕಾಯ್ದಿರಿಸಿಕೊಂಡಿದ್ದಾರೆ. ನಿಜವಾದ ಪ್ರಯಾಣಿಕರಿಗೆ ಲಭ್ಯವಾಗದಂತೆ ಮಾಡಲಾಗಿದೆ. ಈ ಮೂಲಕ ಟಿಕೆಟ್ ಬೆಲೆಯು ಅಧಿಕವಾಗುವಂತೆ ಮಾಡಲಾಗುತ್ತಿದೆ ಎಂದು ಹೇಳಲಾಗಿದೆ.
Operation clog the toilet is proceeding as planned it would appear.
— Free Gingy (@FreeGingy) September 20, 2025
Fuck the jëëts. pic.twitter.com/lIpWOyboO6
ವಿಶೇಷವಾಗಿ ಭಾರತೀಯರು, ಏಷ್ಯಾದ ಜನರು ಹೆಚ್ಚಾಗಿ ಪ್ರಯಾಣಿಸುವ ನ್ಯೂಯಾರ್ಕ್, ನ್ಯೂವಾರ್ಕ್ ಮತ್ತು ಡಲ್ಲಾಸ್‌ನಂತಹ ನಗರಗಳ ವಿಮಾನಗಳನ್ನೇ ಗುರಿಯಾಗಿಸಿಕೊಂಡು ಈ ಕೃತ್ಯ ಎಸಗಲಾಗುತ್ತಿದೆ. ಈ ಅಭಿಯಾನವನ್ನು 4chan ಎಂಬ ಟೆಲಿಗ್ರಾಮ್, ಎಕ್ಸ್ ಮೊದಲಾದ ಆನ್‌ಲೈನ್ ವೇದಿಕೆಗಳಲ್ಲಿ ಮಾಡಲಾಗುತ್ತಿದೆ, ಚರ್ಚಿಸಲಾಗುತ್ತಿದೆ.
ಅನೇಕ ಪೋಸ್ಟ್‌ಗಳು ಜನಾಂಗೀಯ ನಿಂದನೆಯನ್ನು ಒಳಗೊಂಡಿದೆ. ಭಾರತೀಯರ ಪ್ರಯಾಣವನ್ನು ಕಷ್ಟಕರವಾಗಿಸಬೇಕು ಎಂಬ ಸೂಚನೆಗಳನ್ನು ಉಲ್ಲೇಖಿಸಲಾಗಿದೆ. “ಭಾರತೀಯರನ್ನು ಭಾರತದಲ್ಲಿಯೇ ಇರಿಸುವುದು” ಮತ್ತು ಅವರ ನಡುವೆ ಭೀತಿಯನ್ನು ಸೃಷ್ಟಿಸುವುದು ಮುಖ್ಯ ಗುರಿ ಎಂದು ಈ ಅಭಿಯಾನದ ಚರ್ಚೆಯ ವೇಳೆ ಹೇಳಲಾಗುತ್ತಿದೆ.
***OPERATION: CLOG THE TOILET – UPDATE***
— CEO of Based (@UncyClaudius) September 20, 2025
4chan autists have now created automated scripts to overbook Indian flights.
If you're technically inclined, you can follow along using Postman! #CLOGTHETOILET pic.twitter.com/nplpaNwhAZ
ಆದರೆ ಈ ಬಗ್ಗೆ ಎಎಫ್‌ಪಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಏರ್ ಇಂಡಿಯಾ ವಕ್ತಾರರು, ತಮ್ಮ ವೆಬ್‌ಸೈಟ್ ಯಾವುದೇ ಅಡೆತಡೆಗಳನ್ನು ಅನುಭವಿಸಲಿಲ್ಲ, ಸಾಮಾನ್ಯವಾಗಿ ಕಾರ್ಯನಿರ್ವಹಿಸುತ್ತಿತ್ತು ಎಂದು ಹೇಳಿದ್ದಾರೆ.
Don’t follow the lies in the news, if you have an H1B you’re protected.
— Neon White Cat (@NeonWhiteCat) September 20, 2025
Now is THE BEST time to visit home or take a vacation to Mexico.
Spread the word.
ಇನ್ನು 2003ರಲ್ಲಿ ರಚಿಸಲಾದ ಅನಾಮಧೇಯ ಆನ್‌ಲೈನ್ ಪ್ಲಾಟ್‌ಫಾರ್ಮ್ 4chan, ಇಂಟರ್ನೆಟ್ ಮೀಮ್‌ಗಳು, ಟ್ರೋಲಿಂಗ್ ಅಭಿಯಾನಗಳು ಮತ್ತು ಉಗ್ರಗಾಮಿ ವಿಷಯಗಳನ್ನು ಈ ಹಿಂದಿನಿಂದಲೂ ಹಂಚಿಕೊಂಡಿದೆ.
ಇದನ್ನು ಓದಿದ್ದೀರಾ? ಭಾರತಕ್ಕೆ ಮುಳುವಾದ ಟ್ರಂಪ್ ನೀತಿಗಳು; ದೇಶದ ಆರ್ಥಿಕತೆಯ ಗತಿ ಏನು?
ಅಂತಹ ಒಂದು ಪೋಸ್ಟ್‌ನಲ್ಲಿ, “H1B ಸುದ್ದಿಯ ನಂತರ ಭಾರತೀಯರು ಎಚ್ಚರಗೊಳ್ಳುತ್ತಿದ್ದಾರೆ. ಅವರನ್ನು ಭಾರತದಲ್ಲಿಯೇ ಇರಿಸಲು ಬಯಸುವಿರಾ? ವಿಮಾನ ಕಾಯ್ದಿರಿಸುವಿಕೆ ವ್ಯವಸ್ಥೆಯನ್ನು ಮುಚ್ಚಿಹಾಕಿ” ಎಂದು ಬರೆಯಲಾಗಿದೆ. ಮತ್ತೊಂದು ಕಾಮೆಂಟ್‌ನಲ್ಲಿ, “ಪ್ರಸ್ತುತ ಈ ದೆಹಲಿಯಿಂದ ನ್ಯೂವಾರ್ಕ್ ವಿಮಾನದಲ್ಲಿ ಲಭ್ಯವಿರುವ ಕೊನೆಯ ಸೀಟನ್ನು ಬ್ಲಾಕ್ ಮಾಡಲಾಗುತ್ತಿದೆ” ಎಂದು ಬರೆಯಲಾಗಿದೆ. ಜೊತೆಗೆ “ಸಂಪೂರ್ಣ ಜೀತಗಾರರ ಸಾವು, ನೀವು ನೋಡುವ ಪ್ರತಿಯೊಂದು ಜೀತಗಾರರನ್ನು ಕೊಲ್ಲಿ, ಪಶ್ಚಿಮವನ್ನು ಮುಕ್ತಿಗೊಳಿಸಲು ಯಾವ ಮಟ್ಟಿನ ಕಾರ್ಯಕ್ಕೂ ಸಿದ್ಧ” ಎಂಬ ಉದ್ರೇಕಕಾರಿ ಪೋಸ್ಟ್‌ಗಳನ್ನೂ ಮಾಡಲಾಗುತ್ತಿದೆ.
ಈ ವರ್ಣಭೇದ ಅಭಿಯಾನದಿಂದ ಉಂಟಾಗಿದ್ದೇನು?
ಟ್ರಂಪ್ ಘೋಷಣೆಯ ನಂತರ ಭಾರತಕ್ಕೆ ರಜೆಯ ಮೇಲೆ ಬಂದಿರುವ ಆಸ್ಟಿನ್ ಮೂಲದ ಸಾಫ್ಟ್‌ವೇರ್ ಎಂಜಿನಿಯರ್ ಅಮೃತಾ ತಮಾನಮ್ ವಿಮಾನ ಬುಕ್ ಮಾಡಲು ಧಾವಿಸಿದ್ದರು. ಆದರೆ ಪದೇ ಪದೇ ಸಮಸ್ಯೆ ಉಂಟಾಗಿದೆ. ಅನೇಕ ಪ್ರಯತ್ನಗಳ ನಂತರ, ಅವರು ಅಂತಿಮವಾಗಿ ಕತಾರ್ ಏರ್‌ವೇಸ್‌ನಲ್ಲಿ ಡಲ್ಲಾಸ್‌ಗೆ ಸುಮಾರು $2,000ಗೆ ಟಿಕೆಟ್ ಬುಕ್ ಮಾಡಿದ್ದಾರೆ, ಇದು ಮೂಲ ದರಕ್ಕಿಂತ ಎರಡು ಪಟ್ಟು ಅಧಿಕ ಎಂದು ಹೇಳಲಾಗಿದೆ.
ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದರು ತಮಾನಮ್, “ನನಗೆ ಟಿಕೆಟ್ ಬುಕ್ ಮಾಡುವುದು ಕಷ್ಟಕರವಾಗಿತ್ತು. ಅದಕ್ಕಾಗಿ ನಾನು ಅಧಿಕ ಟಿಕೆಟ್ ದರವನ್ನು ಪಾವತಿಸಬೇಕಾಯಿತು” ಎಂದು ಹೇಳಿದ್ದಾರೆ.
ಈ ಎಲ್ಲಾ ಭೀತಿಯ ಬಳಿಕ $100,000 ಶುಲ್ಕವು ಹೊಸ H-1B ಅರ್ಜಿಗಳಿಗೆ ಮಾತ್ರ ಅನ್ವಯಿಸುತ್ತದೆ ಎಂದು ಶ್ವೇತಭವನವು ಸ್ಪಷ್ಟಪಡಿಸಿದೆ. “ಪ್ರಸ್ತುತ ಅಮೆರಿಕದ ಹೊರಗೆ ಇರುವವರಿಗೆ ಮರು-ಪ್ರವೇಶಿಸಲು $100,000 ಶುಲ್ಕ ವಿಧಿಸಲಾಗುವುದಿಲ್ಲ” ಎಂದು ಪತ್ರಿಕಾ ಕಾರ್ಯದರ್ಶಿ ಕ್ಯಾರೋಲಿನ್ ಲೀವಿಟ್ ಸ್ಪಷ್ಟನೆ ನೀಡಿದ್ದಾರೆ.
