ಪೂರ್ವ ಸುಡಾನ್‌ನಲ್ಲಿ ಅಣೆಕಟ್ಟು ಒಡೆದು ಕನಿಷ್ಠ 30 ಮಂದಿ ಸಾವನ್ನಪ್ಪಿದ್ದಾರೆ, ಹಲವರು ನಾಪತ್ತೆಯಾಗಿದ್ದಾರೆ ಎಂದು ವಿಶ್ವಸಂಸ್ಥೆ ಉಲ್ಲೇಖಿಸಿದೆ.
ಭಾರೀ ಮಳೆಯಿಂದಾಗಿ ಪೋರ್ಟ್ ಸುಡಾನ್‌ನ ಉತ್ತರಕ್ಕೆ 40 ಕಿಲೋಮೀಟರ್ (25 ಮೈಲುಗಳು) ಇರುವ ಅರ್ಬಾತ್ ಅಣೆಕಟ್ಟು ಕುಸಿದಿದೆ. ಈ ಪ್ರವಾಹವು 20 ಹಳ್ಳಿಗಳನ್ನು ನಾಶಮಾಡಿದೆ. ಈಗಾಗಲೇ ಅಂತರ್ ಯುದ್ಧದಲ್ಲಿ ಸಿಲುಕಿರುವ ಸುಡಾನ್‌ನಲ್ಲಿ ಈಗ ಪ್ರವಾಹವು ಮತ್ತಷ್ಟು ಸಂಕಷ್ಟ ತಂದಿದೆ.
“ಈ ಪ್ರದೇಶವನ್ನು ಗುರುತಿಸಲಾಗುತ್ತಿಲ್ಲ. ವಿದ್ಯುತ್ ಮತ್ತು ನೀರಿನ ಪೈಪ್‌ಗಳು ನಾಶವಾಗಿವೆ” ಎಂದು ರೆಡ್ ಸೀ ರಾಜ್ಯದ ಜಲ ಪ್ರಾಧಿಕಾರದ ಮುಖ್ಯಸ್ಥ ಒಮರ್ ಐಸಾ ಹರೌನ್ ತಿಳಿಸಿರುವುದಾಗಿ ವರದಿಯಾಗಿದೆ.
ಈವರೆಗೆ ಕನಿಷ್ಠ 30 ಮಂದಿ ಸಾವನ್ನಪ್ಪಿರುವುದು ದೃಡಪಟ್ಟಿದ್ದು, ಚಿನ್ನದ ಗಣಿಗಾರರು ಸೇರಿದಂತೆ 150ರಿಂದ 200 ಜನರು ಕಾಣೆಯಾಗಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.
ಇದನ್ನು ಓದಿದ್ದೀರಾ? ಸುಡಾನ್‌ನಲ್ಲಿ ಸಂಘರ್ಷ: 800 ಮಂದಿ ಹತ್ಯೆ, 48 ಲಕ್ಷ ಜನರ ಸ್ಥಳಾಂತರ
ಈ ಪ್ರವಾಹವು ಸುಮಾರು 50,000 ಜನರ ಮೇಲೆ ಪರಿಣಾಮ ಬೀರಿದೆ ಎಂದು ವಿಶ್ವಸಂಸ್ಥೆ ಹೇಳಿದೆ. ಇನ್ನು ಅಣೆಕಟ್ಟಿನ ಪೂರ್ವದ ಪ್ರದೇಶವನ್ನು ಇನ್ನೂ ತಲುಪಲು ಸಾಧ್ಯವಾಗದ ಕಾರಣ ಮೃತರ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ.
ಅರ್ಬಾತ್ ಅಣೆಕಟ್ಟು ಪೋರ್ಟ್ ಸುಡಾನ್‌ಗೆ ಪ್ರಮುಖ ನೀರಿನ ಮೂಲವಾಗಿತ್ತು. ಇಲ್ಲೇ ದೇಶದ ಪ್ರಮುಖ ಕೆಂಪು ಸಮುದ್ರ ಬಂದರು ಇತ್ತು ಮತ್ತು ಸಹಾಯ ವಿತರಣೆಯ ಕೇಂದ್ರವಾಗಿತ್ತು. ಅಣೆಕಟ್ಟು ನಾಶವಾಗಿ, ನಗರವು ಈಗ ತೀವ್ರ ನೀರಿನ ಕೊರತೆಯನ್ನು ಎದುರಿಸುತ್ತಿದೆ.
ಈ ವರ್ಷ ಸುಡಾನ್ ದೇಶದಾದ್ಯಂತ ಪ್ರವಾಹದಲ್ಲಿ 132 ಜನರು ಸಾವನ್ನಪ್ಪಿದ್ದಾರೆ. 118,000 ಜನರು ಸ್ಥಳಾಂತರಗೊಂಡಿದ್ದಾರೆ ಎಂದು ಸುಡಾನ್ ಸರ್ಕಾರದ ಅಧಿಕೃತ ಡೇಟಾ ಹೇಳುತ್ತದೆ.
At least 30 dead, many missing after dam bursts in eastern #Sudan
— Atulkrishan (@iAtulKrishan1) August 27, 2024
Torrential rains caused floods that overwhelmed the Arbaat Dam just 40 km north of Port Sudan, the de facto national capital and base for the government, diplomats, aid agencies, and hundreds of thousands of… pic.twitter.com/XnJNECBHid
