ಶಾಲೆ ಕೊಚ್ಚಿಹೋಗುವ ಮುನ್ನ 900 ವಿದ್ಯಾರ್ಥಿಗಳ ಪ್ರಾಣ ಉಳಿಸಿದ ಮುಖ್ಯಶಿಕ್ಷಕ

Date:

ನೇಪಾಳದಲ್ಲಿ ಸಂಭವಿಸಿದ ಭೀಕರ ಪ್ರವಾಹದಲ್ಲಿ ಶಾಲೆಯೊಂದು ಕೊಚ್ಚಿ ಹೋಗುವ ಕೇವಲ 10 ನಿಮಿಷಗಳ ಮೊದಲು 900 ವಿದ್ಯಾರ್ಥಿಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವ ಮೂಲಕ ಮುಖ್ಯಶಿಕ್ಷಕರೊಬ್ಬರು ಅಷ್ಟೂ ಮಕ್ಕಳ ಪ್ರಾಣ ಉಳಿಸಿದ ಸಾಹಸಗಾಥೆ ಬೆಳಕಿಗೆ ಬಂದಿದೆ.

- Advertisement -

​ನುವಾಕೋಟ್ ಜಿಲ್ಲೆಯ ತ್ರಿಭುವನ್ ತ್ರಿಶೂಲಿ ಪ್ರೌಢಶಾಲೆಯ ಮುಖ್ಯಶಿಕ್ಷಕ ರಾಜೇಂದ್ರ ದಾವಾಡಿ ಅವರು ಈ ಸಮಯಪ್ರಜ್ಞೆ ಮೆರೆದವರು. ಬೆಳಿಗ್ಗೆ 9:10ರ ಸುಮಾರಿಗೆ ಪ್ರವಾಹದ ಮುನ್ಸೂಚನೆ ನೀಡುವ ನಾಲ್ಕು ಕರೆಗಳು ಬಂದ ತಕ್ಷಣವೇ ಎಚ್ಚೆತ್ತ ಅವರು, ವಿದ್ಯಾರ್ಥಿಗಳನ್ನು ಎತ್ತರದ ಪ್ರದೇಶಗಳಿಗೆ ಓಡಿಹೋಗುವಂತೆ ಸೂಚಿಸಿದರು. ಅಲ್ಲದೆ, ಮಕ್ಕಳನ್ನು ಕರೆತರಲು ಬರುತ್ತಿದ್ದ ಶಾಲಾ ಬಸ್‌ಗಳನ್ನು ಹಿಂದಿರುಗುವಂತೆ ಆದೇಶಿಸಿದರು. “ನಾವು ತ್ವರಿತ ನಿರ್ಧಾರ ತೆಗೆದುಕೊಳ್ಳದಿದ್ದರೆ, ಕೇವಲ 10 ನಿಮಿಷ ವಿಳಂಬವಾಗಿದ್ದರೂ, ವಿದ್ಯಾರ್ಥಿಗಳು ಮತ್ತು ನಾನು ಇಂದು ನಿಮ್ಮೊಡನೆ ಮಾತನಾಡಲು ಬದುಕಿರುತ್ತಿರಲಿಲ್ಲ,” ಎಂದು ದಾವಾಡಿ ವಿವರಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೋದಿ ಆಡಳಿತದಲ್ಲಿ ಮಾಹಿತಿ ಹಕ್ಕು ಕಾಯ್ದೆಯ ‘ಸ್ಥಿತಿ’ ಹೇಗಿದೆ?...

ಯಾವುದೇ ಸರ್ಕಾರ ಆಡಳಿತದಲ್ಲಿರಲಿ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಕಾಪಾಡಬೇಕಾದ ಸಂಸ್ಥೆಗಳ ಸ್ವಾಯತ್ತತೆ ಉಳಿಯಬೇಕು. ಅವು ಪಾರದರ್ಶಕವಾಗಿರಬೇಕು. ಪ್ರಜಾಸತ್ತೆಯ ಕಾರ್ಯವೈಖರಿಯನ್ನು ಕುರಿತಂತೆ ಮುಕ್ತ ಚರ್ಚೆ ನಡೆಯುತ್ತಿರಬೇಕು. ಇದು ಸಕ್ರಿಯ, ಅರ್ಥಪೂರ್ಣ ಪ್ರಜಾಸತ್ತೆಯ ಕನಿಷ್ಠ ಅವಶ್ಯಕತೆ. ಹಾಗಾಗಿ...

ಬಂಗಾಳ ವಿಭಜನೆ | ವಿಭಜನೆಯ ವಿಷಬೀಜದಿಂದ ಒಗ್ಗಟ್ಟಿನ ಜ್ಯೋತಿ...

ಬ್ರಿಟಿಷರ 'ಒಡೆದು ಆಳುವ ನೀತಿ'ಯ ಭಾಗವಾಗಿ 1905ರ ಅಕ್ಟೋಬರ್‌ನಲ್ಲಿ ಜಾರಿಗೆ ಬಂದ ಬಂಗಾಳ ವಿಭಜನೆಯು ಭಾರತೀಯರ ರಾಷ್ಟ್ರೀಯತೆಯನ್ನು ಒಡೆಯುವ ಕುತಂತ್ರವಾಗಿತ್ತು. ಇದಕ್ಕೆ ಪ್ರತಿಯಾಗಿ ಭಾರತೀಯರು 'ರಾಷ್ಟ್ರೀಯ ಶೋಕ ದಿನ' ಆಚರಿಸಿ, ಪರಸ್ಪರ ರಾಖಿ...

ನಟ ಇಮ್ರಾನ್ ಖಾನ್ ಪ್ರತಿಭಟಿಸಿದರೆ ಗಡಿಪಾರು; ಟ್ರಂಪ್ ಪರ...

ಕಾನೂನು ಮತ್ತು ರಾಜತಾಂತ್ರಿಕ ನಿಯಮಗಳು ಎಲ್ಲರಿಗೂ ಒಂದೇ ಆಗಿರಬೇಕು ಹೊರತು ಪ್ರಧಾನಿ ಮೋದಿಯವರ ರಾಜಕೀಯ ಅನುಕೂಲಕ್ಕೆ ತಕ್ಕಂತೆ ಬದಲಾಗಬಾರದು. ವಿದೇಶಿ ಪ್ರಜೆಯೊಬ್ಬ ಭಾರತದ ನೆಲದಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದು ತಪ್ಪು ಎನ್ನುವುದಾದರೆ, ಭಾರತದ ಪ್ರಧಾನಿಯೊಬ್ಬರು...

ಕೆಲವೇ ನಿಮಿಷಗಳ ಅಂತರದಲ್ಲಿ ನಾಲ್ಕು ವಿಭಿನ್ನ ವ್ಯಕ್ತಿಗಳಿಂದ ಎಚ್ಚರಿಕೆ ಕರೆಗಳು ಬಂದಿದ್ದವು. “ಓರ್ವ ಪೋಷಕರು ಶಾಲೆಗೆ ಧಾವಿಸಿ, ‘ದೊಡ್ಡ ಪ್ರವಾಹ ಬರುತ್ತಿದೆ, ನನ್ನ ಮಗಳನ್ನು ಕರೆದೊಯ್ಯಲು ಬಂದಿದ್ದೇನೆ’ ಎಂದಾಗ ಪರಿಸ್ಥಿತಿಯ ಗಂಭೀರತೆ ಅರಿವಾಯಿತು. ಬಲವಾದ ಕಾರಣವಿಲ್ಲದೆ ಪೋಷಕರು ಹೀಗೆ ಧಾವಿಸಿ ಬರುವುದಿಲ್ಲ. ಹೀಗಾಗಿ ಒಂದು ಕ್ಷಣವೂ ವಿಳಂಬ ಮಾಡದೆ ಮಕ್ಕಳನ್ನು ಸ್ಥಳಾಂತರಿಸಲು ನಿರ್ಧರಿಸಿದೆ. ಒಂದು ವೇಳೆ ಪ್ರವಾಹ ಬರದೇ ಇದ್ದರೂ ಕೇವಲ ಒಂದು ದಿನದ ತರಗತಿ ನಷ್ಟವಾಗುತ್ತಿತ್ತಷ್ಟೆ. ಇಷ್ಟು ಜೀವಗಳನ್ನು ಉಳಿಸಿದೆವು ಎಂಬ ಹೆಮ್ಮೆ ನನಗಿದೆ,” ಎಂದು ಅವರು ತಿಳಿಸಿದ್ದಾರೆ.

​ಪ್ರವಾಹದ ರಭಸಕ್ಕೆ ಶಾಲಾ ಕಟ್ಟಡವು ಸಂಪೂರ್ಣವಾಗಿ ಮಣ್ಣು ಮತ್ತು ಅವಶೇಷಗಳಡಿ ಸಿಲುಕಿದೆ. ನದಿಯಿಂದ ಕೇವಲ 100 ಮೀಟರ್ (328 ಅಡಿ) ದೂರದಲ್ಲಿದ್ದ ಹಾಸ್ಟೆಲ್ ಕಟ್ಟಡವು ಕ್ಷಣಾರ್ಧದಲ್ಲಿ ಜಲಸಮಾಧಿಯಾಯಿತು. ನೇಪಾಳದಲ್ಲಿ ಸಂಭವಿಸಿದ ಈ ಜಲಪ್ರಳಯದಲ್ಲಿ ಈವರೆಗೆ ಕನಿಷ್ಠ 794 ಜನರು ಮೃತಪಟ್ಟಿದ್ದು, 2,426 ಜನರು ನಾಪತ್ತೆಯಾಗಿದ್ದಾರೆ.

16 ವರ್ಷದ ವಿದ್ಯಾರ್ಥಿನಿ ಯುನಿಶಾ ಅಮಾತ್ಯ, ಪ್ರವಾಹ ಅಪ್ಪಳಿಸುವ ಕೇವಲ 10 ಸೆಕೆಂಡುಗಳ ಮೊದಲು ತನ್ನ ಸ್ನೇಹಿತರೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. “ಶಿಕ್ಷಕರು ಬಂದು ಪ್ರವಾಹದ ಬಗ್ಗೆ ತಿಳಿಸಿ ಮನೆಗೆ ಹೋಗಲು ಹೇಳಿದಾಗ ಅನೇಕರಿಗೆ ಗಂಭೀರತೆ ಅರಿವಾಗಿರಲಿಲ್ಲ. ಶಾಲೆಯ ಹಿಂಭಾಗದ ಕಿರಿದಾದ ಮೆಟ್ಟಿಲುಗಳ ಮೂಲಕ ಬೆಟ್ಟವನ್ನು ಹತ್ತಿ ನಾವು ಪಾರಾದೆವು. ಆತುರದಲ್ಲಿ ತಪ್ಪಿಸಿಕೊಳ್ಳುವಾಗ ಶೂ ಗ್ರಿಪ್ ಇಲ್ಲದಿದ್ದರೆ ನಾನು ಕೆಳಗೆ ಬೀಳುತ್ತಿದ್ದೆ. ಬೇರೆ ದಾರಿಯಲ್ಲಿ ಹೋದವರು ಪ್ರವಾಹಕ್ಕೆ ಕೊಚ್ಚಿಹೋದರು. ನಮ್ಮ ಕಣ್ಣೆದುರೇ ಇಡೀ ಮಾರುಕಟ್ಟೆ ಕೊಚ್ಚಿಹೋಯಿತು,” ಎಂದು ಆಕೆ ಆತಂಕದ ಕ್ಷಣಗಳನ್ನು ಬಿಚ್ಚಿಟ್ಟಿದ್ದಾಳೆ.

​ರಸ್ತೆ ಸಂಪರ್ಕ ಕಡಿತಗೊಂಡಿದ್ದರಿಂದ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ನೆರೆಯ ಹಳ್ಳಿಯೊಂದರಲ್ಲಿ ಎರಡು ರಾತ್ರಿ ಕಳೆದಿದ್ದಾರೆ. ನಂತರ ಮುಖ್ಯಶಿಕ್ಷಕರು ಹಾಗೂ ಯುನಿಶಾಳನ್ನು ಹೆಲಿಕಾಪ್ಟರ್ ಮೂಲಕ ರಕ್ಷಿಸಿ ಮನೆಗೆ ತಲುಪಿಸಲಾಗಿದೆ.

ಯುನಿಶಾಳ ಪೋಷಕರಾದ ಯುವರಾಜ್ ಅಮಾತ್ಯ ಮತ್ತು ಸಬೀನಾ ಕುಮಾರಿ ಶ್ರೇಷ್ಠ ಅವರು ಮಗಳಿಗಾಗಿ ಪಟ್ಟ ಪಾಡು ಅಷ್ಟಿಷ್ಟಲ್ಲ. ಪ್ರವಾಹದ ಸುದ್ದಿ ತಿಳಿದ ತಕ್ಷಣ ತಂದೆ ಯುವರಾಜ್ ಶಾಲೆಗೆ ಧಾವಿಸಿದ್ದರು. ಆದರೆ ತ್ರಿಶೂಲಿ ಬಜಾರ್ ಸಂಪೂರ್ಣವಾಗಿ ಕೊಚ್ಚಿಹೋಗಿದ್ದನ್ನು ಕಂಡು ಮಗಳು ಬದುಕುಳಿದಿರುವ ಬಗ್ಗೆ ಭರವಸೆಯನ್ನೇ ಕಳೆದುಕೊಂಡಿದ್ದರು. ಸರಿಸುಮಾರು ಒಂದು ಗಂಟೆಯ ಬಳಿಕ ಮಗಳೊಂದಿಗೆ ಫೋನ್ ಸಂಪರ್ಕ ಸಾಧಿಸಿದಾಗ ಅವರ ಜೀವಕ್ಕೆ ಜೀವ ಬಂದಂತಾಯಿತು. ಮೂರು ದಿನಗಳ (ಶುಕ್ರವಾರ) ಬಳಿಕ ಮಗಳನ್ನು ನೋಡಿ ಪೋಷಕರು ನಿಟ್ಟುಸಿರು ಬಿಟ್ಟಿದ್ದಾರೆ.

​ಪ್ರಾಣಾಪಾಯದಿಂದ ಪಾರಾಗಿರುವ ಯುನಿಶಾಗೆ ಈಗ ತನ್ನ ಮುಂದಿನ ವಿದ್ಯಾಭ್ಯಾಸದ ಬಗ್ಗೆ ಚಿಂತೆ ಶುರುವಾಗಿದೆ. ಈ ಬಗ್ಗೆ ಮಾತನಾಡಿರುವ ಮುಖ್ಯಶಿಕ್ಷಕ ದಾವಾಡಿ, “ಸೈರನ್ ಮತ್ತು ಮುನ್ಸೂಚನಾ ಎಚ್ಚರಿಕೆ ವ್ಯವಸ್ಥೆಗಳು ಇದ್ದಿದ್ದರೆ ಸ್ಥಳೀಯರು ಇನ್ನೂ ವೇಗವಾಗಿ ಸ್ಪಂದಿಸಲು ಸಾಧ್ಯವಾಗುತ್ತಿತ್ತು. ಆದರೆ, ನನ್ನ ಆ ಕ್ಷಣದ ನಿರ್ಧಾರವು ದೊಡ್ಡ ದುರಂತವನ್ನು ತಪ್ಪಿಸಿದೆ” ಎಂದು ಹೇಳಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‘ಮೋದಿಯನ್ನು ದೇವರನ್ನಾಗಿಸುವ ಯತ್ನ’: ಬಿಹಾರ ಸಿಎಂ ಹೇಳಿಕೆಗೆ ಪ್ರಶಾಂತ್ ಕಿಶೋರ್ ಕಿಡಿ

ಪ್ರಧಾನಿ ನರೇಂದ್ರ ಮೋದಿ ಅವರು ಶ್ರೀರಾಮನಿಗೂ ಮನೆ ಒದಗಿಸಿದರು ಎಂಬ ಬಿಹಾರ...

ಬಾಗಲಕೋಟೆ | ಎಸ್‌ಐಆರ್ ಪ್ರಕ್ರಿಯೆ ಸ್ಥಗಿತಕ್ಕೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಪ್ರತಿಭಟನೆ

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಜಾಗೊಳಿಸಿ, ಅವರ ವಿರುದ್ಧ ಕ್ರಿಮಿನಲ್...

ಬೆಳಗಾವಿ | ಚೂನಪ್ಪ ಪೂಜೇರಿ, ನಾನು ಸತ್ತರೂ ಒಂದೇ ಗೋರಿಯಲ್ಲಿ ಮಣ್ಣಾಗಬೇಕು: ಶಶಿಕಾಂತ ಗುರೂಜಿ

ಕಬ್ಬು ಬೆಳೆಗಾರರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೆಳಗಾವಿ ಜಿಲ್ಲೆಯ ಹತ್ತರಗಿ...