ಬಂದೂಕು ಮತ್ತು ನಕಲಿ ಪಾಸ್‌ಗಳನ್ನು ಹೊಂದಿದ್ದ ವ್ಯಕ್ತಿಯನ್ನು ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕೊಚೆಲ್ಲಾ ರ‍್ಯಾಲಿ ಸ್ಥಳದಿಂದ ಕೊನೆಯ ಕ್ಷಣದಲ್ಲಿ ಬಂಧಿಸಲಾಗಿದ್ದು, ಡೆಮೋಕ್ರಟಿಕ್ ಪಕ್ಷದ ಅಭ್ಯರ್ಥಿಯ ಹತ್ಯೆಗೆ ನಡೆದ ಮೂರನೇ ಯತ್ನವನ್ನು ವಿಫಲಗೊಳಿಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ರ‍್ಯಾಲಿ ಸ್ಥಳದಿಂದ ಸುಮಾರು ಒಂದು ಮೈಲು ದೂರದಲ್ಲಿ ನಕಲಿ ಪ್ರವೇಶ ಪಾಸ್ ಹೊಂದಿದ್ದ ಶಂಕಿತನನ್ನು ಬಂಧಿಸಲಾಗಿದೆ ಎಂದು ಸ್ಥಳೀಯ ಪೊಲೀಸರು ಹೇಳಿದ್ದಾರೆ.
ಕ್ಯಾಲಿಪೋರ್ನಿಯಾದ ಕೋಚೆಲ್ಲಾ ವ್ಯಾಲಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ರ್‍ಯಾಲಿಯಲ್ಲಿ ಪತ್ರಕರ್ತ ನಕಲಿ ಪಾಸ್‌ನೊಂದಿಗೆ ಗನ್ ಇಟ್ಟುಕೊಂಡು ಬಂದಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಗುಂಡುಗಳಿಂದ ಭರ್ತಿಯಾಗಿದ್ದ ಶಾಟ್‌ಗನ್ ಹಾಗೂ ಹ್ಯಾಂಡ್‌ಗನ್ ಅನ್ನು ಬಂಧಿತನಿಂದ ವಶಪಡಿಸಿಕೊಳ್ಳಲಾಗಿದೆ. ನಾವು ಭಾಗಶಃ ಟ್ರಂಪ್ ಅವರ ಮತ್ತೊಂದು ಹತ್ಯೆ ಯತ್ನವನ್ನು ತಡೆದಿದ್ದೇವೆ ಎಂದು ಸ್ಥಳೀಯ ಪೊಲೀಸರು ಹೇಳಿರುವುದಾಗಿ ನ್ಯೂಯಾರ್ಕ್ ಟೈಮ್ಸ್ ವೆಬ್‌ಸೈಟ್ ವರದಿ ಮಾಡಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಎಚ್‌ಡಿಕೆ V/s ಎಡಿಜಿಪಿ ಚಂದ್ರಶೇಖರ್- ಇದು ಸಾಮಾನ್ಯ ವಿದ್ಯಮಾನವಲ್ಲ
ಬಂಧಿತನನ್ನು 49 ವರ್ಷದ ಲಾಸ್‌ವೇ ಗಾಸ್ಮೂಲದ ವೆಮ್ ಮಿಲ್ಲರ್ ಎಂದು ಗುರುತಿಸಲಾಗಿದ್ದು ಈತ ನಕಲಿ ಪ್ರೆಸ್ ಪಾಸ್ ಇಟ್ಟುಕೊಂಡು ರ‍್ಯಾಲಿ ಪ್ರವೇಶಿಸಿದ್ದ. ಆತನನ್ನು ಆರಂಭದಲ್ಲೇ ತಡೆಯಲಾಯಿತು ಎಂದು ಪೊಲೀಸರು ಹೇಳಿದ್ದಾರೆ.
ಕಳೆದ ಜುಲೈ ಹಾಗೂ ಸೆಪ್ಟೆಂಬರ್‌ನಲ್ಲಿ ಎರಡು ಬಾರಿ ಟ್ರಂಪ್ ಅವರ ಹತ್ಯೆ ಯತ್ನ ನಡೆದಿತ್ತು. ಅದರಲ್ಲೂ ಜುಲೈ
13ರಂದು ಪೆನ್ಸಿಲ್ವೇನಿಯಾದಲ್ಲಿ ನಡೆದಿದ್ದ ಹತ್ಯೆ ಯತ್ನದಲ್ಲಿ ಟ್ರಂಪ್ ಅವರು ಬಲ ಕಿವಿಗೆ ಗಾಯವಾಗಿ ಸ್ವಲ್ಪದರಲ್ಲೇ
ಉಳಿದಿದ್ದರು.
