ಭೀಕರ ಭೂಕಂಪ: ಪ್ರಾಣ ಭಯಕ್ಕಿಂತ ಮೇಲುಗೈ ಸಾಧಿಸಿದ ದಾದಿಯರ ಮಾನವೀಯತೆ

Date:

Advertisements

ಭೂಮಿ ಸ್ವಲ್ಪ ಕಂಪಿಸಿದರೆ, ಜನ ಪ್ರಾಣಭಯದಿಂದ ತಮ್ಮ ಮನೆ-ಕಟ್ಟಡದಿಂದ ಹೊರ ಓಡುತ್ತಾರೆ. ತಾವು ಮೊದಲ ಬದುಕುಳಿದರೆ ಸಾಕು ಎಂದು ಧಾವಿಸುತ್ತಾರೆ. ಸದ್ಯ, ಮ್ಯಾನ್ಮಾರ್‌ನಲ್ಲಿ ಭೂಕಂಪ ಸಂಭವಿಸಿ ಭಾರೀ ದುರಂತ ಎದುರಾಗಿದೆ. ಸಾವಿರಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿವೆ. ಈ ನಡುವೆ, ಮತ್ತೊಮ್ಮೆ ಭೂಮಿ ಕಂಪಿಸಿದೆ. ಈ ವೇಳೆ, ಪ್ರಾಣಭಯಕ್ಕಿಂತ ಮಾನವೀಯತೆಗೆ ಒತ್ತುಕೊಟ್ಟಿರುವ ದಾದಿಯರು, ಭೂಕಂಪದ ನಡುವೆಯೂ ಗಾಯಾಳುಗಳಿಗೆ ಚಿಕಿತ್ಸೆ ನೀಡುವುದರನ್ನು ಮುಂದುವರೆಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೊಂದು ವೈರಲ್ ಆಗಿದೆ. ಆ ವಿಡಿಯೋದಲ್ಲಿ, ಮ್ಯಾನ್ಮಾರ್ ಭೂಕಂಪದ ಸಮಯದಲ್ಲಿ ನವಜಾತ ಶಿಶುಗಳನ್ನು ದಾದಿಯರು ರಕ್ಷಿಸಿದ್ದಾರೆ. ತಮ್ಮ ಕರ್ತವ್ಯ ಪ್ರಜ್ಞೆ ಮತ್ತು ಮಾನವೀಯತೆಯನ್ನು ಮೆರೆದಿರುವುದು ಕಂಡುಬಂದಿದೆ.

ನಾಲ್ಕು ದಿನಗಳ ಹಿಂದೆ ಮ್ಯಾನ್ಮಾರ್‌ನಲ್ಲಿ ಸಂಭವಿಸಿದ ಭೂಕಂಪವು ಭಾರಿ ವಿನಾಶವನ್ನುಂಟು ಮಾಡಿದೆ. 7.7 ತೀವ್ರತೆಯ ಭೂಕಂಪದಿಂದ ಹಲವಾರು ಕಟ್ಟಡಗಳು ಉರುಳಿಬಿದ್ದಿವೆ. ಕನಿಷ್ಠ 2,056 ಮಂದಿ ಸಾವನ್ನಪ್ಪಿದ್ದು, 3,900ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಸುಮಾರು 270 ಮಂದಿ ಕಾಣೆಯಾಗಿದ್ದಾರೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ವೈದ್ಯಕೀಯ ತಂಡವು ರಕ್ಷಣಾ ಮತ್ತು ಅಗತ್ಯ ತುರ್ತು ಆರೋಗ್ಯ ಸೇವೆಗಳನ್ನು ಒದಗಿಸುತ್ತಿದೆ.

Advertisements

ವೈರಲ್ ಆಗಿರುವ ವಿಡಿಯೋದಲ್ಲಿ ದಾದಿಯರು ಭೂಕಂಪ ಸಂಭವಿಸಿದ್ದರ ನಡುವೆಯೂ ನವಜಾತ ಶಿಶುಗಳನ್ನು ರಕ್ಷಣೆ ಮಾಡಲು ಮುಂದಾಗಿದ್ದಾರೆ. ಭೂಕಂಪ ಸಂಭವಿಸಿದಾಗ ತೊಟ್ಟಿಲುಗಳು ಉರುಳದಂತೆ ತಡೆಯಲು ಇಬ್ಬರು ನರ್ಸ್ ಧಾವಿಸುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

ವಿಡಿಯೋದಲ್ಲಿ, ಭೂಕಂಪದಲ್ಲಿ ಆಸ್ಪತ್ರೆ ಕಟ್ಟಡವು ಅಲುಗಾಡಿದೆ. ಆ ದಾದಿಯರು ಭೀಕರ ಕಂಪನದ ಸಮಯದಲ್ಲಿ ತಮ್ಮ ಪ್ರಾಣ ಉಳಿಸಿಕೊಳ್ಳಲು ಓಡಿ ಹೋಗದೆ, ಶಿಶುಗಳ ತೊಟ್ಟಿಲುಗಳನ್ನು ಹಿಡಿದಿಡಲು ಪ್ರಯತ್ನಿಸಿದ್ದಾರೆ. ನವಜಾತ ಶಿಶುಗಳನ್ನ ಕಾಪಾಡಲು ಮುಂದಾಗುತ್ತಾರೆ.

ಈ ವರದಿ ಓದಿದ್ದೀರಾ?: ಮ್ಯಾನ್ಮಾರ್‌ ಭೂಕಂಪ | ಸಾವಿರಕ್ಕೂ ಅಧಿಕ ಸಾವು; 2,000 ಮಂದಿಗೆ ಗಾಯ

ಆ ವಿಡಿಯೋದಲ್ಲಿ ಶಿಶುಗಳನ್ನು ರಕ್ಷಿಸುತ್ತಿರುವವರನ್ನು ಚೀನಾದ ಯುನ್ನಾನ್‌ನಲ್ಲಿರುವ ಜಿಂಗ್ಚೆಂಗ್ ಆಸ್ಪತ್ರೆಯ ದಾದಿಯರು ಎಂದು ಹೇಳಲಾಗಿದೆ. ನರ್ಸ್‌ಗಳ ಕರ್ತವ್ಯಪ್ರಜ್ಞೆ ಮತ್ತು ಮಾನವೀಯತೆಗೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇಬ್ಬರು ದಾದಿಯರ ಪ್ರಾಮಾಣಿಕ ಕೆಲಸ, ಕರ್ತವ್ಯ ಪ್ರಜ್ಞೆ ಜಗತ್ತಿಗೆ ಮಾದರಿ. ಮುಖ್ಯವಾಗಿ ಇಲ್ಲಿ ಮಾನವೀಯತೆ ಗೆದ್ದಿದೆ. ದಾದಿಯರ ಧೈರ್ಯವೇ ಇದಕ್ಕೆ ಸಾಕ್ಷಿ. ದಾದಿಯರು ಭೂಕಂಪ ಸಂಭವಿಸಿದರೂ ಓಡಿ ಹೋಗದೇ, ಅವರ ಅಲ್ಲಿಯೇ ಇದ್ದು ನವಜಾತ ಶಿಶುಗಳ ಜೀವಗಳನ್ನು ಉಳಿಸಿದ್ದಾರೆ. ದಾದಿಯರು ನಮಗೆ ಹೇಗೆ ಬದುಕಬೇಕು ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಎಂದು ನೆಟ್ಟಿಗರ ಶ್ಲಾಘಿಸಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮೋದಿ-ಝೆಲೆನ್ಸ್ಕಿ ಫೋನ್ ಮಾತುಕತೆ: ರಷ್ಯಾ ತೈಲ ಖರೀದಿ ಕುರಿತು ಭಾರತದ ಮೇಲೆ ಉಕ್ರೇನ್‌ ಒತ್ತಡ

ರಷ್ಯಾ ಜೊತೆ ಸಂಘರ್ಷದಲ್ಲಿರುವ ಉಕ್ರೇನ್‌ನ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ಪ್ರಧಾನಿ...

ಗಾಝಾದಲ್ಲಿ ಹತ್ಯೆಯಾದ ಯುವ ಪತ್ರಕರ್ತರೊಬ್ಬರ ಭಿನ್ನ ಉಯಿಲು !

ನಾನು ಸಾಯುವುದಾದರೆ, ನನ್ನ ಸಿದ್ಧಾಂತಗಳ ಮೇಲೆ ದೃಢವಾಗಿರುವೆ. ದೇವರ ಮುಂದೆ ನಾನು...

ಗಾಝಾದಲ್ಲಿ ಇಸ್ರೇಲ್ ದಾಳಿ: ಐವರು ಅಲ್‌ಜಝೀರಾ ಪತ್ರಕರ್ತರು ಹತ

ಭಾನುವಾರ ಗಾಝಾ ನಗರದಲ್ಲಿ ಅಲ್‌ಜಝೀರಾ ಟೆಂಟ್ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ...

ಟ್ರಂಪ್‌ ಕೊಟ್ಟ ಏಟಿಗೆ ಚೀನಾದತ್ತ ತಿರುಗಿದ ಪ್ರಧಾನಿ; ಚೀನೀ ಭಜನೆ ಮಾಡುತ್ತಿದೆ ಮೋದಿ ಭಕ್ತ ಗಣ

ಅಮೆರಿಕ ಭಾರೀ ಮೊತ್ತದ ತೆರಿಗೆ ಹೇರಿದ ಬೆನ್ನಲ್ಲೇ, ಭಾರತವು ಚೀನಾದೊಂದಿಗೆ ಆರ್ಥಿಕ...

Download Eedina App Android / iOS

X