ಈಕ್ವೆಡಾರ್‌ನಲ್ಲಿ ಆಂತರಿಕ ಸಂಘರ್ಷ | ಯುದ್ಧ ಘೋಷಿಸಿದ ಡ್ರಗ್ಸ್ ಮಾಫಿಯಾ; ತುರ್ತು ಪರಿಸ್ಥಿತಿ ಎಂದ ಸರ್ಕಾರ

Date:

Advertisements

ಈಕ್ವೆಡಾರ್‌ ದೇಶದ ಅತ್ಯಂತ ಶಕ್ತಿಶಾಲಿ ಕ್ರಿಮಿನಲ್ ನಾಯಕ, ಡ್ರಗ್ ಮಾಫಿಯಾದ ಕಿಂಗ್‌ಪಿನ್ ಜೋಸ್ ಅಡಾಲ್ಫೊ ಮಾಕಿಯಾಸ್ ಎಂಬಾತ ಜೈಲಿನಿಂದ ತಪ್ಪಿಸಿಕೊಂಡ ನಂತರ ಆಂತರಿಕ ಸಂಘರ್ಷ ಉಂಟಾಗಿದ್ದು, ಡ್ರಗ್ಸ್ ಮಾಫಿಯಾವು ಸರ್ಕಾರದ ವಿರುದ್ಧ ಯುದ್ಧ ಘೋಷಿಸಿರುವುದಾಗಿ ತಿಳಿಸಿದೆ. ಈ ಬೆಳವಣಿಗೆಯ ಬೆನ್ನಲ್ಲೇ ಅಲ್ಲಿನ ಅಧ್ಯಕ್ಷ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ.

ಈಕ್ವೆಡಾರ್ ಅಧ್ಯಕ್ಷ ಡೇನಿಯಲ್ ನೊಬೊವಾ ಮಂಗಳವಾರ ದೇಶದ ಪ್ರಬಲ ಕ್ರಿಮಿನಲ್ ಗುಂಪಿನ ವಿರುದ್ಧ ಮಿಲಿಟರಿ ಕಾರ್ಯಾಚರಣೆಗೆ ಆದೇಶಿಸಿದ್ದರು. ಈ ಬೆಳವಣಿಗೆಯ ಬೆನ್ನಲ್ಲೇ ಟೆಲಿವಿಷನ್ ಸ್ಟುಡಿಯೋವೊಂದರ ಮೇಲೆ ಮುಸುಕುಧಾರಿ ಬಂದೂಕುಧಾರಿಗಳು ದಾಳಿ ಮಾಡಿದ್ದು, ಭದ್ರತಾ ಪಡೆಗಳು ಮತ್ತು ನಾಗರಿಕರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ.

eqvador

ಉನ್ನತ ಕೊಕೇನ್ ರಫ್ತುದಾರರಾದ ಕೊಲಂಬಿಯಾ ಮತ್ತು ಪೆರು ನಡುವಿನ ದೇಶವಾಗಿರುವ ಈಕ್ವೆಡಾರ್, ಇತ್ತೀಚಿನ ವರ್ಷಗಳಲ್ಲಿ ಮೆಕ್ಸಿಕನ್ ಮತ್ತು ಕೊಲಂಬಿಯಾದ ಕಾರ್ಟೆಲ್‌ಗಳ ಮೇಲೆ ನಿಯಂತ್ರಣ ಪಡೆಯುವ ಉದ್ದೇಶದಿಂದ ಈ ಹಿಂಸಾಚಾರ ಭುಗಿಲೆದ್ದಿದೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿದೆ.

Advertisements

ಕ್ರಿಮಿನಲ್ ಗ್ಯಾಂಗ್‌ನ ನಾಯಕ ಜೋಸ್ ಅಡಾಲ್ಫೊ ಮಾಕಿಯಾಸ್ 34 ವರ್ಷಗಳ ಶಿಕ್ಷೆಯನ್ನು ಅನುಭವಿಸುತ್ತಿದ್ದರು. ಜೈಲಿನಿಂದ ತಪ್ಪಿಸಿಕೊಂಡ ನಂತರ ಅಧ್ಯಕ್ಷ ನೊಬೋವಾ ಸೋಮವಾರ ಈಕ್ವೆಡಾರ್‌ನಲ್ಲಿ 60 ದಿನಗಳ ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದಾರೆ.

“ಡ್ರಗ್ ಮಾಫಿಯಾ ಹಾಗೂ ಕ್ರಿಮಿನಲ್ ಗುಂಪುಗಳನ್ನು ತಟಸ್ಥಗೊಳಿಸಲು ಮಿಲಿಟರಿ ಕಾರ್ಯಾಚರಣೆಗಳನ್ನು ನಡೆಸಲು ನಾನು ಸಶಸ್ತ್ರ ಪಡೆಗಳಿಗೆ ಆದೇಶಿಸಿದ್ದೇನೆ” ಎಂದು ಈಕ್ವೆಡಾರ್ ಅಧ್ಯಕ್ಷ ಡೇನಿಯಲ್ ನೊಬೊವಾ ಸಾಮಾಜಿಕ ಮಾಧ್ಯಮದಲ್ಲಿ ಬರೆದಿದ್ದಾರೆ.

ಬಂದೂಕುಗಳು ಮತ್ತು ಗ್ರೆನೇಡ್‌ಗಳೊಂದಿಗೆ ಶಸ್ತ್ರಸಜ್ಜಿತವಾದ ದಾಳಿಕೋರರು ಬಂದರು ನಗರವಾದ ಗುವಾಕ್ವಿಲ್‌ನಲ್ಲಿರುವ ಟಿಸಿ ಟೆಲಿವಿಷನ್‌ ಎಂಬ ಸುದ್ದಿ ಸಂಸ್ಥೆಯ ಸ್ಟುಡಿಯೋಗಳ ಮೇಲೆ ದಾಳಿ ನಡೆಸಿ, ಸರ್ಕಾರದ ವಿರುದ್ಧ ಬಂಡುಕೋರರು ಯುದ್ಧ ಘೋಷಿಸಿದ ಬಳಿಕ ಅಧ್ಯಕ್ಷ ಈ ಹೇಳಿಕೆ ನೀಡಿದ್ದಾರೆ.

ನೇರಪ್ರಸಾರದ ವೇಳೆಯೇ ಸ್ಟುಡಿಯೋಗೆ ನುಗ್ಗಿದ ಬಂಡುಕೋರರು!
ಟಿವಿ ಸ್ಟುಡಿಯೋದಲ್ಲಿ ನೇರಪ್ರಸಾರ ನಡೆಯುತ್ತಿರುವ ನಡುವೆಯೇ ಬಂಡುಕೋರರ ಗುಂಪು ಗನ್, ಬಾಂಬ್ ಹಿಡಿದು ನುಗ್ಗಿದೆ. ಫೈರಿಂಗ್ ಮಾಡುತ್ತಾ ನುಗ್ಗಿದ ಗುಂಪು, ನಿರೂಪಕ ಸೇರಿದಂತೆ ಎಲ್ಲ ಸಿಬ್ಬಂದಿಗಳನ್ನು ಒತ್ತೆಯಾಳಾಗಿಸಿ, ಅಪಹರಿಸಿದೆ.

ಗನ್ ಹಾಗೂ ಬಾಂಬ್ ಹಿಡಿದು ಟಿವಿ ಸ್ಟುಡಿಯೋಗೆ ನುಗ್ಗಿದ ಉಗ್ರರ ಗುಂಪು, ಫೈರಿಂಗ್ ಆರಂಭಿಸಿದಾಗ, ನಿರೂಪಕ ಶೂಟ್ ಮಾಡಬೇಡಿ ಪ್ಲೀಸ್ ಎಂದು ಅಂಗಲಾಚುತ್ತಿರುವ ದೃಶ್ಯ ವೈರಲ್ ಆಗಿದೆ. ಎಲ್ಲ ಸಿಬ್ಬಂದಿಗಳ ಕೈ ಕಾಲುಗಳನ್ನು ಸ್ಟುಡಿಯೋದಲ್ಲಿದ್ದ ಕೇಬಲ್ ವೈಯರ್ ಮೂಲಕ ಕಟ್ಟಿ ಅಪಹರಿಸಿದ್ದು, ಒತ್ತೆಯಾಳಾಗಿ ಇರಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.

equador news

ಮಹಿಳಾ ಸಿಬ್ಬಂದಿಗಳು ಶೂಟ್ ಮಾಡಬೇಡಿ ಎಂದು ಕಿರುಚಾಡುತ್ತಿರುವ ಭಯಾನಕ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

13 ಮಂದಿಯ ಬಂಧನ: ಒತ್ತೆಯಾಳುಗಳ ಬಿಡುಗಡೆ

13 ಜನರನ್ನು ಬಂಧಿಸಲಾಗಿದೆ. ನಂತರ ಅಪಹರಿಸಲಾಗಿದ್ದ ಟಿವಿ ವಾಹಿನಿಯ ಎಲ್ಲ ಸಿಬ್ಬಂದಿಯನ್ನು ಬಿಡುಗಡೆ ಮಾಡಲಾಗಿದೆ ಎಂದು ಗುವಾಕ್ವಿಲ್‌ನ ಪೊಲೀಸರು ತಿಳಿಸಿದ್ದಾರೆ.

ಸದ್ಯ ದಕ್ಷಿಣ ಅಮೆರಿಕಾದ ದೇಶವಾಗಿರುವ ಈಕ್ವೆಡಾರ್‌ನಲ್ಲಿ ಪರಿಸ್ಥಿತಿ ಅಪಾಯಕಾರಿಯಾಗಿದೆ. ಆಂತರಿಕ ಸಂಘರ್ಷದಲ್ಲಿ ಇಲ್ಲಿಯವರೆಗೆ 10 ಜನರ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಬಿಬಿಸಿ ವರದಿ ಮಾಡಿದೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮೋದಿ-ಝೆಲೆನ್ಸ್ಕಿ ಫೋನ್ ಮಾತುಕತೆ: ರಷ್ಯಾ ತೈಲ ಖರೀದಿ ಕುರಿತು ಭಾರತದ ಮೇಲೆ ಉಕ್ರೇನ್‌ ಒತ್ತಡ

ರಷ್ಯಾ ಜೊತೆ ಸಂಘರ್ಷದಲ್ಲಿರುವ ಉಕ್ರೇನ್‌ನ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ಪ್ರಧಾನಿ...

ಗಾಝಾದಲ್ಲಿ ಹತ್ಯೆಯಾದ ಯುವ ಪತ್ರಕರ್ತರೊಬ್ಬರ ಭಿನ್ನ ಉಯಿಲು !

ನಾನು ಸಾಯುವುದಾದರೆ, ನನ್ನ ಸಿದ್ಧಾಂತಗಳ ಮೇಲೆ ದೃಢವಾಗಿರುವೆ. ದೇವರ ಮುಂದೆ ನಾನು...

ಗಾಝಾದಲ್ಲಿ ಇಸ್ರೇಲ್ ದಾಳಿ: ಐವರು ಅಲ್‌ಜಝೀರಾ ಪತ್ರಕರ್ತರು ಹತ

ಭಾನುವಾರ ಗಾಝಾ ನಗರದಲ್ಲಿ ಅಲ್‌ಜಝೀರಾ ಟೆಂಟ್ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ...

ಟ್ರಂಪ್‌ ಕೊಟ್ಟ ಏಟಿಗೆ ಚೀನಾದತ್ತ ತಿರುಗಿದ ಪ್ರಧಾನಿ; ಚೀನೀ ಭಜನೆ ಮಾಡುತ್ತಿದೆ ಮೋದಿ ಭಕ್ತ ಗಣ

ಅಮೆರಿಕ ಭಾರೀ ಮೊತ್ತದ ತೆರಿಗೆ ಹೇರಿದ ಬೆನ್ನಲ್ಲೇ, ಭಾರತವು ಚೀನಾದೊಂದಿಗೆ ಆರ್ಥಿಕ...

Download Eedina App Android / iOS

X