ತಂತ್ರಜ್ಞಾನ ಉದ್ಯಮದ ಬಿಲೇನಿಯರ್ ಹಾಗೂ ಸಾಮಾಜಿಕ ಮಾಧ್ಯಮ ‘ಎಕ್ಸ್’ನ ಮುಖ್ಯಸ್ಥ ಎಲಾನ್ ಮಸ್ಕ್ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಶಾಶ್ವತ ನೀಡದಿರುವುದು ಅವಿವೇಕತನ ಎಂದು ಹೇಳಿದ್ದಾರೆ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಪ್ರಸ್ತುತ ರಚನೆಯು ವಿಶ್ವದ ಅತೀ ಹೆಚ್ಚು ಜನಸಂಖ್ಯೆ ರಾಷ್ಟ್ರವನ್ನು ಪ್ರತಿನಿಧಿಸದೆ ಸಮರ್ಪಕವಾಗಿಲ್ಲ. ಆದಕಾರಣ ಕೂಲಂಕಷವಾಗಿ ಪರಿಶೀಲಿಸುವುದು ಅಗತ್ಯ ಎಂದು ಟೆಲ್ಕಾ ಸಿಇಒ ಕೂಡ ಆಗಿರುವ ಎಲಾನ್ ಮಸ್ಕ್ ತಿಳಿಸಿದ್ದಾರೆ.
“ಇದೇ ಹಂತದಲ್ಲಿ ವಿಶ್ವಸಂಸ್ಥೆಯ ಮಂಡಳಿಗಳನ್ನು ಪರಿಷ್ಕೃತಗೊಳಿಸುವ ಅಗತ್ಯವಿದೆ. ಸಮಸ್ಯೆ ಏನೆಂದರೆ ಹೆಚ್ಚು ಅಧಿಕಾರ ಹೊಂದಿರುವವರು ಬಿಟ್ಟುಕೊಡಲು ಬಯಸುತ್ತಿಲ್ಲ. ಭೂಖಂಡದಲ್ಲಿಯೇ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶದ ಹೊರತಾಗಿಯು ಭಾರತವು ಭದ್ರತಾ ಮಂಡಳಿಯಲ್ಲಿ ಶಾಶ್ವತ ಸ್ಥಾನ ಹೊಂದಿಲ್ಲ” ಎಂದು ಎಲಾನ್ ಮಸ್ಕ್ ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ದಕ್ಷಿಣ ಆಫ್ರಿಕಾಕ್ಕೂ ವಿಶ್ವಸಂಸ್ಥೆಯಲ್ಲಿ ಶಾಶ್ವತ ಸ್ಥಾನ ನೀಡಬೇಕೆಂದು ಮಸ್ಕ್ ಪ್ರತಿಪಾದಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಯುವಜನರ ವಿಶ್ವಾಸ ಉಳಿಸಿಕೊಳ್ಳುವುದೇ ಕೆಪಿಎಸ್‌ಸಿ?
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಶಾಶ್ವತ ಸ್ಥಾನಕ್ಕಾಗಿ ಭಾರತವು ಹಲವು ವರ್ಷಗಳಿಂದ ಸ್ಪರ್ಧೆ ಮಾಡುತ್ತಲೇ ಬಂದಿದೆ. ಮುಖ್ಯವಾಗಿ ಚೀನಾದ ಪ್ರತಿರೋಧದಿಂದಾಗಿ ಶಾಶ್ವತ ಸ್ಥಾನ ಪಡೆಯಲು ಭಾರತದ ಪ್ರಯತ್ನಗಳು ವಿಫಲವಾಗುತ್ತಿವೆ. ಭಾರತದ ಸೇರ್ಪಡೆಯನ್ನು ತಡೆಹಿಡಿಯಲು ಚೀನಾವು ತನ್ನ ವೀಟೋ ಅಧಿಕಾರವನ್ನು ಬಳಸಿಕೊಳ್ಳುತ್ತಿದೆ. ಇದರ ಹೊರತಾಗಿ ಇತರ ಶಾಶ್ವತ ಸದಸ್ಯ ರಾಷ್ಟ್ರಗಳಾದ ಅಮೆರಿಕ ಹಾಗೂ ಫ್ರಾನ್ಸ್ ಭಾರತಕ್ಕೆ ತನ್ನ ಬೆಂಬಲ ಸೂಚಿಸಿವೆ.
ವಿಶ್ವಸಂಸ್ಥೆಯಲ್ಲಿ ಐದು ರಾಷ್ಟ್ರಗಳು ಶಾಶ್ವತ ಸ್ಥಾನವನ್ನು ಹೊಂದಿವೆ. ಇದನ್ನು ಪಿ5 ಎಂದು ಕರೆಯಲ್ಪಡುವ ಅಮೆರಿಕ, ಇಂಗ್ಲೆಂಡ್, ಫ್ರಾನ್ಸ್, ರಷ್ಯಾ ಹಾಗೂ ಚೀನಾ ದೇಶಗಳು. ಈ ರಾಷ್ಟ್ರಗಳು ವಿಟೋ ನಿರ್ಣಯ ನಿರ್ಧರಿಸುವ ಗಮನಾರ್ಹ ಶಕ್ತಿಯನ್ನು ಹೊಂದಿವೆ. ಎರಡು ವರ್ಷಗಳಿಗೊಮ್ಮೆ ಚುನಾಯಿತರಾಗುವ ಶಾಶ್ವತವಲ್ಲದ ರಾಷ್ಟ್ರಗಳು ಸಂಸ್ಥೆಗೆ ಉತ್ತಮ ಕೊಡುಗೆ ನೀಡಿದರೂ ಖಾಯಂ ಸದಸ್ಯ ರಾಷ್ಟ್ರಗಳಾಗಲು ವಿಟೋ ಅಧಿಕಾರವನ್ನು ಹೊಂದಲಾಗಿಲ್ಲ.
ಶಾಶ್ವತ ಸ್ಥಾನ ನೀಡಲು ತಕರಾರು ತೆಗೆಯುತ್ತಿರುವ ಶಾಶ್ವತ ಸ್ಥಾನ ಪಡೆದ ರಾಷ್ಟ್ರಗಳ ಬಗ್ಗೆ ಭಾರತ ಸುಮಾರು ವರ್ಷಗಳಿಂದ ಈ ಬಗ್ಗೆ ವಿಶ್ವಸಂಸ್ಥೆಯಲ್ಲಿ ಧನಿ ಎತ್ತುತ್ತಲೇ ಬಂದಿದೆ.
ವಿಶ್ವಸಂಸ್ಥೆಯಲ್ಲಿ ಒಟ್ಟು 200 ಸದಸ್ಯ ರಾಷ್ಟ್ರಗಳಿದ್ದು,ಭದ್ರತಾ ಮಂಡಳಿಯಲ್ಲಿ ಐದು ಶಾಶ್ವತ ಸ್ಥಾನ ದೇಶಗಳ ಸಂಖ್ಯೆ ಹಾಗೆ ಇರುತ್ತದೆ.