147 ವರ್ಷಗಳ ಸುದೀರ್ಘ ಆಟದೊಂದಿಗೆ ಟೆಸ್ಟ್ ಕ್ರಿಕೆಟ್‌ನಲ್ಲಿ ಇಂಗ್ಲೆಂಡ್ ತಂಡವು ಬರೋಬ್ಬರಿ 5 ಲಕ್ಷ ರನ್‌ಗಳನ್ನು ದಾಖಲಿಸಿದೆ. ಬೃಹತ್ ರನ್‌ಗಳೊಂದಿಗೆ ಹೊಸ ಇತಿಹಾಸ ನಿರ್ಮಿಸಿದೆ.
ಯಾವುದೇ ತಂಡವು ಟೆಸ್ಟ್ ಕ್ರಿಕೆಟ್‌ನಲ್ಲಿ ಈವರೆಗೆ 5 ಲಕ್ಷ ರನ್‌ಗಳನ್ನು ಗಳಿಸಲಾಗಿಲ್ಲ. ಇಂಗ್ಲೆಂಡ್ ತಂಡವು 5 ಲಕ್ಷ ರನ್‌ಗಳನ್ನು ಕಲೆ ಹಾಕಿರುವ ಮೊದಲ ತಂಡವೆಂಬ ಹೆಗ್ಗಳಿಕೆ ಪಾತ್ರವಾಗಿದೆ. ವಿಶ್ವ ದಾಖಲೆ ಬರೆದಿದೆ. ಈ ದಾಖಲೆಯ ರನ್‌ಗಳನ್ನು ಇನ್ನೂ 10 ವರ್ಷಗಳ ಕಾಲ ಯಾರೂ ತಲುಪಲಾರರು ಎಂದೂ ಹೇಳಲಾಗುತ್ತಿದೆ.
ನ್ಯೂಜಿಲೆಂಡ್‌ನ ವೆಲ್ಲಿಂಗ್ಟನ್ನಲ್ಲಿ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ಕ್ರಿಕೆಟ್ ತಂಡಗಳ ನಡುವೆ ಟೆಸ್ಟ್ ಸರಣಿ ನಡೆಯುತ್ತಿದೆ. ಶನಿವಾರ ನಡೆದ ಪಂದ್ಯದಲ್ಲಿ ಇಂಗ್ಲೆಂಡ್ ತಂಡವು 378 ರನ್‌ಗಳನ್ನು ಗಳಿಸಿದೆ. ಈ ರನ್‌ಗಳೊಂದಿಗೆ ಟೆಸ್ಟ್ ಕ್ರಿಕೆಟ್‌ನಲ್ಲಿ ಇಂಗ್ಲೆಂಡ್ 5 ಲಕ್ಷ ರನ್‌ಗಳ ಗಡಿ ದಾಟಿದೆ.
ಇಂಗ್ಲೆಂಡ್ ತಂಡವು 147 ವರ್ಷಗಳಲ್ಲಿ 1,082 ಟೆಸ್ಟ್ ಪಂದ್ಯಗಳನ್ನು ಆಡಿದೆ. ಈ ಎಲ್ಲ ಪಂದ್ಯಗಳಿಂದ ಒಟ್ಟು 5 ಲಕ್ಷ ರನ್‌ಗಳನ್ನು ಕಲೆ ಹಾಕಿದೆ. ಇಂಗ್ಲೆಂಡ್ ನಂತರದ ಸ್ಥಾನದಲ್ಲಿ ಆಸ್ಟ್ರೇಲಿಯಾ ತಂಡವಿದೆ. ತಂಡವು 4,28,794 ರನ್‌ಗಳೊಂದಿಗೆ ದ್ವೀತೀಯ ಸ್ಥಾನದಲ್ಲಿದೆ.
ಮೂರನೇ ಸ್ಥಾನದಲ್ಲಿ ಭಾರತ ತಂಡವಿದೆ. ಆದರೆ, ರನ್‌ಗಳ ಅಂತರದಲ್ಲಿ ಭಾರೀ ದೂರವಿದೆ. ಭಾರತ ತಂಡವು ಈವರೆಗೆ 586 ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಒಟ್ಟು 2,78,700 ರನ್‌ಗಳಿಗೆ ಕಲೆ ಹಾಕಿದೆ.
ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕ ಸಿಡಿಸಿದ ಪಟ್ಟಿಯಲ್ಲಿಯೂ ಇಂಗ್ಲೆಂಡ್ ಅಗ್ರ ಸ್ಥಾನದಲ್ಲಿದೆ. ತಂಡದಲ್ಲಿ ಆಡಿರುವ ಆಟಗಾರರು 929 ಶತಕಗಳನ್ನು ಭಾರಿಸಿದ್ದಾರೆ. 892 ಶತಕಗಳೊಂದಿಗೆ ಆಸ್ಟ್ರೇಲಿಯಾ ಎರಡನೇ ಸ್ಥಾನದಲ್ಲಿದ್ದರೆ, 552 ಶತಕಗಳನ್ನು ಗಳಿಸಿ ಭಾರತ ತಂಡ ಮೂರನೇ ಸ್ಥಾನದಲ್ಲಿದೆ.