ಎಪ್ಸ್ಟೀನ್‌ ಫೈಲ್‌: ಕರಾಳ ಜಗತ್ತಿನ ರಹಸ್ಯ ಬಿಚ್ಚಿಟ್ಟ ಬದುಕುಳಿದ ಸಂತ್ರಸ್ತ ಯುವತಿ

Date:

ಲೈಂಗಿಕ ಶೋಷಣೆ ಮತ್ತು ಅಪ್ರಾಪ್ತ ಬಾಲಕಿಯರ ಅಕ್ರಮ ಸಾಗಣೆ ಆರೋಪಗಳಿಂದ ಜಾಗತಿಕವಾಗಿ ಕುಖ್ಯಾತಿ ಪಡೆದಿದ್ದ ಉದ್ಯಮಿ ಜೆಫ್ರಿ ಎಪ್ಸ್ಟೀನ್‌ನ ದೌರ್ಜನ್ಯಕ್ಕೆ ಒಳಗಾಗಿದ್ದ ರಷ್ಯಾ ಮೂಲದ ಯುವತಿಯೊಬ್ಬರು ತಾವು ಎದುರಿಸಿದ ದೌರ್ಜನ್ಯಗಳು ಮತ್ತು ಎಪ್ಸ್ಟೀನ್‌ನ ಕತ್ತಲೆಯ ಜಗತ್ತಿನ ಕರಾಳ ಸತ್ಯಗಳನ್ನು ಬಿಚ್ಚಿಟ್ಟಿದ್ದಾರೆ. ‘ಅಸಿಸ್ಟೆಂಟ್’ (ಸಹಾಯಕಿ) ಎಂಬ ಸಭ್ಯ ಪದದ ಮುಸುಕಿನಲ್ಲಿ ಎಪ್ಸ್ಟೀನ್ ತನ್ನ ಸುತ್ತಲಿದ್ದ ಯುವತಿಯರ ಬದುಕನ್ನು ಸಂಪೂರ್ಣವಾಗಿ ಹೇಗೆ ನಿಯಂತ್ರಿಸುತ್ತಿದ್ದ ಮತ್ತು ಶೋಷಣೆ ನಡೆಸುತ್ತಿದ್ದ ಎಂದು ಅವರು ವಿವರಿಸಿದ್ದಾರೆ.

- Advertisement -

ರಷ್ಯಾದ ಜೂಲಿಯಾ ಮೊಲ್ಚನೋವಾ ಎಂಬ ಸಂತ್ರಸ್ತ ಯುವತಿ ‘ದಿ ವಾಲ್ ಸ್ಟ್ರೀಟ್ ಜರ್ನಲ್’ಗೆ ನೀಡಿದ ಸುದೀರ್ಘ ಸಂದರ್ಶನದಲ್ಲಿ ತಮ್ಮ ಅನುಭವ ಹಂಚಿಕೊಂಡಿದ್ದಾರೆ.  ಅವರು ತಮ್ಮ 22ನೇ ವಯಸ್ಸಿನಲ್ಲಿ ನ್ಯೂಯಾರ್ಕ್‌ನ ರಸ್ತೆಯೊಂದರಲ್ಲಿ ಎಪ್ಸ್ಟೀನ್‌ಗೆ ಪರಿಚಯವಾಗಿದ್ದಾಗಿ ತಿಳಿಸಿದ್ದಾರೆ. “ನನಗೆ ಆ ಸಮಯದಲ್ಲಿ ಇಂಗ್ಲಿಷ್ ಭಾಷೆಯೂ ಬರುತ್ತಿರಲಿಲ್ಲ. ಫ್ಯಾಷನ್ ರಂಗದಲ್ಲಿ ಆಸಕ್ತಿಯಿದ್ದ ನನಗೆ ಪ್ರವೇಶಾತಿ ಕೊಡಿಸುವುದಾಗಿ ಮತ್ತು ಸಹಾಯ ಮಾಡುವುದಾಗಿ ನಂಬಿಸಿ ನನ್ನನ್ನು ಎಪ್ಸ್ಟೀನ್ ತನ್ನ ಬಲೆಗೆ ಕೆಡವಿಕೊಂಡಿದ್ದ” ಎಂದು ಅವರು ವಿವರಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಯೂರೋಪ್‌ | ಇಂಧನ ಬೆಲೆಯೇರಿಕೆ–ಬದುಕು ದುರ್ಭರ: ಜನಾಕ್ರೋಶಕ್ಕೆ ನಡುಗುತ್ತಿವೆ...

ಇಂಧನ ಬೆಲೆ ಏರಿಕೆ, ಕೈಗೆಟುಕದ ಮನೆಬಾಡಿಗೆ, ಕಡಿಮೆ ವೇತನ, ನಿರುದ್ಯೋಗದ ಆತಂಕ ಹಾಗೂ ಜನಕಲ್ಯಾಣ ಯೋಜನೆಗಳಿಗೆ ಅನುದಾನ ಕಡಿತದ ವಿರುದ್ಧ ಯೂರೋಪಿನ ಹಲವು ದೇಶಗಳಲ್ಲಿ ಜನಾಕ್ರೋಶ ಭುಗಿಲೆದ್ದಿದೆ. ಫ್ರಾನ್ಸ್‌ನಿಂದ ಇಟಲಿ, ಬೆಲ್ಜಿಯಂ, ಸ್ಪೇನ್...

ಬೆಳಗಾವಿ | ಅಲೆಮಾರಿಗಳಿಗೆ ಆಧಾರ್ ಕಾರ್ಡ್ ಸಮಸ್ಯೆ; ʼಈದಿನʼದ...

ಬೆಳಗಾವಿ ಜಿಲ್ಲೆಯ ಯರಗಟ್ಟಿ ಪಟ್ಟಣದಲ್ಲಿ ಸುಮಾರು 25ರಿಂದ 30 ವರ್ಷಗಳಿಂದ ವಾಸಿಸುತ್ತಿರುವ ಅಲೆಮಾರಿ ಸಮುದಾಯದವರ ಬದುಕಿನ ಕಥೆ ಕೇಳಿದರೆ ಎಂಥವರಿಗೂ ಕನಿಕರ ಬರುತ್ತದೆ. ಆಧಾರ್ ಕಾರ್ಡ್, ಪಡಿತರ ಚೀಟಿ ಸೇರಿದಂತೆ ಮೂಲಭೂತ ಸೌಲಭ್ಯಗಳಿಲ್ಲದೆ...

ಶಿವಮೊಗ್ಗ | ಜಿ.ಪಂ., ತಾ.ಪಂ. ಚುನಾವಣೆ: ಗ್ರಾಮೀಣ ರಾಜಕೀಯದಲ್ಲಿ...

ಶಿವಮೊಗ್ಗ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಜಿಲ್ಲಾ ಪಂಚಾಯತಿ (ಜಿ.ಪಂ.) ಹಾಗೂ ತಾಲೂಕು ಪಂಚಾಯತಿ (ತಾ.ಪಂ.) ಚುನಾವಣೆಗಳ ಕುರಿತು ರಾಜಕೀಯ ಚರ್ಚೆಗಳು ಮತ್ತು ನಿರೀಕ್ಷೆಗಳು ಹೆಚ್ಚುತ್ತಿವೆ. ದೀರ್ಘಕಾಲದಿಂದ ಚುನಾಯಿತ ಪ್ರತಿನಿಧಿಗಳಿಲ್ಲದೆ ಆಡಳಿತ ನಡೆಯುತ್ತಿರುವ ಹಿನ್ನೆಲೆಯಲ್ಲಿ,...

ಆರಂಭದಲ್ಲಿ ಸಹಾಯ ಹಸ್ತ ಚಾಚಿದಂತೆ ನಟಿಸಿದ್ದ ಎಪ್ಸ್ಟೀನ್, ನಂತರ ಜೂಲಿಯಾ ಅವರನ್ನು ತನ್ನ ನ್ಯೂಯಾರ್ಕ್ ಅಪಾರ್ಟ್‌ಮೆಂಟ್‌ಗೆ ಕರೆದೊಯ್ದು ಶೋಷಣೆ ಆರಂಭಿಸಿದ್ದ. ತನ್ನ ಮನೆಗಳಲ್ಲಿ ಕೆಲಸ ಮಾಡುತ್ತಿದ್ದ ಅಥವಾ ವಾಸಿಸುತ್ತಿದ್ದ ಯುವತಿಯರನ್ನು ಹೊರಗಿನ ಜಗತ್ತಿಗೆ ಕೇವಲ ‘ಅಸಿಸ್ಟೆಂಟ್’ ಎಂದು ಆತ ಪರಿಚಯಿಸುತ್ತಿದ್ದ. ಆದರೆ, ಇದು ಆತ ಮಾಡುತ್ತಿದ್ದ ಅಕ್ರಮ ಮತ್ತು ಲೈಂಗಿಕ ದೌರ್ಜನ್ಯಗಳನ್ನು ಮುಚ್ಚಿಹಾಕಲು ಬಳಸುತ್ತಿದ್ದ ಕಾನೂನುಬದ್ಧ ಮುಸುಕಷ್ಟೇ ಆಗಿತ್ತು ಎಂದು ಜೂಲಿಯಾ ಆರೋಪಿಸಿದ್ದಾರೆ.

ಆತನ ಅಪಾರ್ಟ್‌ಮೆಂಟ್‌ಗೆ ತಲುಪಿದ ನಂತರ ಯುವತಿಯರ ಪ್ರತಿಯೊಂದು ಹಕ್ಕನ್ನೂ ಕಸಿದುಕೊಳ್ಳಲಾಗುತ್ತಿತ್ತು. ಎಪ್ಸ್ಟೀನ್ ಯುವತಿಯರಿಗೆ ಕ್ರೆಡಿಟ್ ಕಾರ್ಡ್ ನೀಡುತ್ತಿದ್ದರೂ, ಪ್ರತಿಯೊಂದು ಪೈಸೆಯ ವೆಚ್ಚಕ್ಕೂ ರಸೀದಿ ಸಮೇತ ಲೆಕ್ಕ ನೀಡಬೇಕಿತ್ತು. ಯುವತಿಯರು ಬಳಸುತ್ತಿದ್ದ ಫೋನ್, ಲ್ಯಾಪ್‌ಟಾಪ್‌ಗಳನ್ನು ತನ್ನ ಖಾತೆಗಳಿಗೆ ಲಿಂಕ್ ಮಾಡಿ ಸಂಪೂರ್ಣ ಕಣ್ಣಿಡುತ್ತಿದ್ದ. ಮಹಿಳೆಯರು ಯಾವ ಬಟ್ಟೆ ಧರಿಸಬೇಕು, ಕೂದಲು ಹೇಗೆ ವಿನ್ಯಾಸಗೊಳಿಸಬೇಕು ಹಾಗೂ ದೇಹದ ತೂಕ ಎಷ್ಟಿರಬೇಕು ಎಂಬುದನ್ನೂ ಆತನೇ ನಿರ್ಧರಿಸುತ್ತಿದ್ದ. ಕೊನೆಗೆ ಕಾರ್ಯಕ್ರಮಗಳಿಗೆ ಕರೆದೊಯ್ದಾಗ ತನಗೆ ‘ಧನ್ಯವಾದ’ ಎಂದು ಸಂದೇಶ ಕಳುಹಿಸುವುದನ್ನು ಕಡ್ಡಾಯಗೊಳಿಸಿದ್ದ. ಹಾಗೆ ಮಾಡದಿದ್ದರೆ ಕೂಗಾಡಿ ಮಾನಸಿಕ ಕಿರುಕುಳ ನೀಡುತ್ತಿದ್ದ ಎಂದು ಜೂಲಿಯಾ ಹೇಳಿದ್ದಾರೆ.

ಈ ಲೇಖನ ಓದಿದ್ದೀರಾ?: ಕುಸಿದ ಮೋದಿ ಜನಪ್ರಿಯತೆ – ʼಪ್ರಜಾಪ್ರಭುತ್ವ ಅಪಾಯದಲ್ಲಿದೆʼ ಎನ್ನುತ್ತಿರುವ ಜನತೆ; ಸಮೀಕ್ಷಾ ವರದಿ

ಕುಟುಂಬ ಮತ್ತು ಸ್ನೇಹಿತರಿಂದ ಸಂಪೂರ್ಣವಾಗಿ ಪ್ರತ್ಯೇಕಿಸಿ, 24 ಗಂಟೆಗಳ ಕಾಲ ಕೋಣೆಯಲ್ಲೇ ಕೂಡಿಡುವ ಅಥವಾ ದ್ವೀಪಗಳಿಗೆ ಕರೆದೊಯ್ಯುವ ಮೂಲಕ ಆತ ಯುವತಿಯರನ್ನು ಬಾಹ್ಯ ಜಗತ್ತಿನಿಂದ ದೂರವಿಡುತ್ತಿದ್ದ. ಹೊಸ ಯುವತಿಯರನ್ನು ಕರೆತರಲು ನಿರಾಕರಿಸಿದಾಗ ತಮಗೆ ಕಿರುಕುಳ ನೀಡುತ್ತಿದ್ದ. ಮಾನಸಿಕವಾಗಿ ಕುಗ್ಗಿದ್ದಾಗಲೂ ವೈದ್ಯರನ್ನು ಭೇಟಿಯಾಗಲು ಅವಕಾಶ ನೀಡಲಿಲ್ಲ ಎಂದು ಜೂಲಿಯಾ ತಮ್ಮ ಅಳಲು ತೋಡಿಕೊಂಡಿದ್ದಾರೆ.

ಎಪ್ಸ್ಟೀನ್‌ಗೆ ವಿಶ್ವದ ಪ್ರಭಾವಿ ರಾಜಕಾರಣಿಗಳು ಮತ್ತು ಉದ್ಯಮಿಗಳ ಬೆಂಬಲವಿದ್ದಿದ್ದರಿಂದ, ಪೊಲೀಸರಿಗೆ ದೂರು ನೀಡಿದರೆ ತಮ್ಮ ಜೀವಕ್ಕೇ ಅಪಾಯವಾಗಬಹುದು ಎಂಬ ಭಯದಲ್ಲೇ ನಾವು ವರ್ಷಗಳನ್ನು ಕಳೆಯಬೇಕಾಯಿತು ಎಂದು ಅವರು ತಿಳಿಸಿದ್ದಾರೆ.

ಜೂಲಿಯಾ ಅವರು ವಿವರಿಸಿರುವ ಈ ಮಾಹಿತಿಗಳು ಎಪ್ಸ್ಟೀನ್ ನಡೆಸುತ್ತಿದ್ದ ದೌರ್ಜನ್ಯವು ಕೇವಲ ಒಂದು ಲೈಂಗಿಕ ಅಪರಾಧ ಮಾತ್ರವೇ ಆಗಿರಲಿಲ್ಲ, ಮಹಿಳೆಯರ ಆಲೋಚನೆ, ಹಣಕಾಸು ಹಾಗೂ ಸ್ವತಂತ್ರ ನಿರ್ಧಾರಗಳನ್ನು ಹಂತ ಹಂತವಾಗಿ ನಾಶಪಡಿಸಲಾಗುತ್ತಿದ್ದ ಎಂಬುದನ್ನೂ ಜಗತ್ತಿನ ಮುಂದೆ ತೆರೆದಿಟ್ಟಿದೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಲಬುರಗಿ | ಕ್ಷೇತ್ರಗಳ ಮರುವಿಂಗಡಣೆ ಇಲ್ಲದೆ ಮಹಿಳಾ ಮೀಸಲಾತಿ ಜಾರಿಗೊಳಿಸಿ: ಮಲ್ಲಿಕಾರ್ಜುನ ಖರ್ಗೆ

ಕ್ಷೇತ್ರಗಳ ಮರುವಿಂಗಡಣೆ ಮಾಡದೆಯೇ ಮಹಿಳಾ ಮೀಸಲಾತಿಯನ್ನು ತಕ್ಷಣ ಜಾರಿಗೊಳಿಸಬೇಕು. ಈ ವಿಚಾರದಲ್ಲಿ...

​7 ದಿನಗಳ ಜೈಲುವಾಸ ಅಂತ್ಯ: ಕೊನೆಗೂ ಬಿಡುಗಡೆಯಾದ ಕಾಕ್ರೋಚ್ ಜನತಾ ಪಾರ್ಟಿ ನಾಯಕರು

ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿದ್ದ ಕಾಕ್ರೋಚ್...

ಪ್ರತಿಭಟನೆಗಳ ವಿರುದ್ಧ ಅತಿಯಾದ ಬಲಪ್ರಯೋಗ ನಿಲ್ಲಿಸಿ; ಮೋದಿ ಸರ್ಕಾರಕ್ಕೆ ವಿಶ್ವಸಂಸ್ಥೆ ತಜ್ಞರ ಆಗ್ರಹ

ಭಾರತದಲ್ಲಿ ಇತ್ತೀಚಿನ ಪ್ರತಿಭಟನೆಗಳ ಸಂದರ್ಭದಲ್ಲಿ ಅಧಿಕಾರಿಗಳು ನಡೆದುಕೊಂಡ ರೀತಿಯ ಬಗ್ಗೆ ಸ್ವತಂತ್ರ...

ಪ್ರಧಾನಿ ಮೋದಿ ವಿದೇಶಿ ಪ್ರವಾಸದ ದಾಖಲೆ ಬಹಿರಂಗಕ್ಕೆ ದೆಹಲಿ ಹೈಕೋರ್ಟ್ ನಕಾರ

ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ) ಅಡಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ...