‘ಫ್ರೆಂಡ್ಸ್ ಶೋ’ ಖ್ಯಾತಿಯ ಹಾಲಿವುಡ್ ನಟ ಮ್ಯಾಥ್ಯೂ ಪೆರ್ರಿ ನಿಧನ

Date:

Advertisements

ಅಮೆರಿಕಾದ ಜನಪ್ರಿಯ ಟಿವಿ ಶೋ ಕಾರ್ಯಕ್ರಮ “ಫ್ರೆಂಡ್ಸ್” ಮೂಲಕ ಖ್ಯಾತಿ ಪಡೆದಿದ್ದ ಹಾಲಿವುಡ್ ನಟ ಮ್ಯಾಥ್ಯೂ ಪೆರ್ರಿ ಶನಿವಾರ ಲಾಸ್ ಏಂಜಲೀಸ್‌ನ ತಮ್ಮ ಮನೆಯ ಸ್ನಾನದ ಟಬ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಅವರಿಗೆ 54 ವರ್ಷ ವಯಸ್ಸಾಗಿತ್ತು.

ಸಾವಿನ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಸ್ಥಳೀಯ ಪೊಲೀಸ್ ಅಧಿಕಾರಿಗಳು ತೆರಳಿ ಪರಿಶೀಲನೆ ನಡೆಸಿದ್ದಾರೆ. ಸ್ಥಳದಲ್ಲಿ ಯಾವುದೇ ಅನುಮಾನಾಸ್ಪದ ಕುರುಹುಗಳು ಪತ್ತೆಯಾಗಿಲ್ಲ. ಯಾವುದೇ ಮಾದಕ ವಸ್ತು ಸೇವನೆಯ ಅಂಶಗಳೂ ಸಿಕ್ಕಿಲ್ಲ ಎಂದು ತಿಳಿದುಬಂದಿದೆ.

‘ಫ್ರೆಂಡ್ಸ್’ನ ಚಾಂಡ್ಲರ್ ಬಿಂಗ್ ಪಾತ್ರ ಮ್ಯಾಥ್ಯೂ ಪೆರ್ರಿ ಅವರಿಗೆ ಹೆಚ್ಚು ಖ್ಯಾತಿ ತಂದುಕೊಟ್ಟಿತ್ತು. ಈ ಶೋ ಸುಮಾರು ಒಂದು ದಶಕಗಳ ಕಾಲ ನಡೆದು, ಅಮೆರಿಕದಾದ್ಯಂತ ಜನಪ್ರಿಯ ಕಾರ್ಯಕ್ರಮವಾಗಿ ಹೊರಹೊಮ್ಮಿತ್ತು. 1994ರಲ್ಲಿ ಪ್ರಾರಂಭವಾದ ಶೋ 2004ರ ತನಕ ಒಟ್ಟು ಹತ್ತು ಆವೃತ್ತಿಗಳನ್ನು ಪೂರೈಸಿತ್ತು. ಫ್ರೆಂಡ್ಸ್‌ನಲ್ಲಿನ ನಟನೆಗಾಗಿ ಪೆರ್ರಿ 2002ರಲ್ಲಿ ಪ್ರೈಮ್ ಟೈಮ್ ಎಮ್ಮಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದರು.

Advertisements

ಮ್ಯಾಥ್ಯೂ ಫ್ರೆಂಡ್ಸ್ ಶೋ ಹೊರತಾಗಿ, ಪೆರ್ರಿ ಅವರು ಸ್ಟುಡಿಯೋ 60 ಆನ್ ದ ಸನ್ಸೆಟ್ ಸ್ಟ್ರಿಪ್, ಗೋ ಆನ್, ದ ಓಡ್ ಕಪಲ್ ಮುಂತಾದ ಟಿವಿ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಇವರ ಅದ್ಭುತ ನಟನೆಗೆ 2003 ಮತ್ತು 2004ರಲ್ಲಿ ಎರಡು ಬಾರಿ ಎಮ್ಮಿ ಪ್ರಶಸ್ತಿಗೆ ನಾಮನಿರ್ದೇಶನವಾಗಿದ್ದರು. ದ ವೆಸ್ಟ್ ವಿಂಗ್ ಸಿರೀಸ್‌ನ ಜೋ ಕ್ವಿನ್ಸಿ ಪಾತ್ರಕ್ಕೆ ಎಮ್ಮಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದರು.

ಈ ಸುದ್ದಿ ಓದಿದ್ದೀರಾ? ಶಿಕ್ಷಕರ ಹತ್ಯೆ ಪ್ರಕರಣ: ಉತ್ತರ ಪ್ರದೇಶದ ಮಾಜಿ ಶಾಸಕ ಮುಖ್ತಾರ್ ಅನ್ಸಾರಿಗೆ 10 ವರ್ಷ ಜೈಲು

ಪೆರ್ರಿ ಅವರು ನಟ ಜಾನ್ ಬೆನೆಟ್ ಪೆರ್ರಿ ಮತ್ತು ಸುಝೇನ್ ಮೇರಿ ಲ್ಯಾಂಗ್‌ಫೋರ್ಡ್ ಅವರ ಪುತ್ರ. 1969 ರಲ್ಲಿ ಅಮೆರಿಕದಲ್ಲಿ ಜನಿಸಿದ ಇವರು ಒಂದು ವರ್ಷದವರಿದ್ದಾಗ ಪೋಷಕರಿಂದ ಬೇರ್ಪಟ್ಟು ಮಾಂಟ್ರಿಯಲ್ ಮತ್ತು ಲಾಸ್ ಏಂಜಲೀಸ್‌ನಲ್ಲಿ ಸಂಬಂಧಿಕರ ಮನೆಗಳಲ್ಲಿ ಬೆಳೆದರು.

ಫ್ರೆಂಡ್ಸ್ ಟಿವಿ ಶೋ, ಅಮೆರಿಕದ ನ್ಯೂಯಾರ್ಕ್ ಸಿಟಿಯಲ್ಲಿ ವಾಸಿಸುವ 20 ಮತ್ತು 30ರ ಹರೆಯದ ಆರು ಜನ ಗೆಳೆಯರ ಕಥೆ. ಸುಮಾರು 25 ಮಿಲಿಯನ್ ಅಧಿಕ ವೀಕ್ಷಕರನ್ನು ಈ ಟಿವಿ ಶೋ ಗಳಿಸಿತ್ತು. ಅಂತಿಮ ಎಪಿಸೋಡನ್ನು ಸುಮಾರು 52.5 ಮಿಲಿಯನ್ ಜನರು ವೀಕ್ಷಣೆ ಮಾಡಿದ್ದರು. ಈ ಮೂಲಕ 2000 ಇಸವಿಯಲ್ಲಿ ಅತಿ ಹೆಚ್ಚು ವೀಕ್ಷಣೆ ಪಡೆದ ಟಿವಿ ಶೋಗಳಲ್ಲಿ ಐದನೇ ಸ್ಥಾನ ಪಡೆದಿತ್ತು.

ಪೆರ್ರಿ ನಿಧನಕ್ಕೆ ಚಿತ್ರರಂಗದ ಗಣ್ಯರು ಹಾಗೂ ಅಪಾರ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇರಳ | ಟ್ರಕ್‌ಗೆ ಕಾರು ಡಿಕ್ಕಿ; ಮಲಯಾಳಂ ನಟನಿಗೆ ಗಾಯ

ಮಲಯಾಳಂ ನಟ ಬಿಜು ಕುಟ್ಟನ್‌ ಅವರು ಇಂದು ರಸ್ತೆ ಅಪಘಾತದಲ್ಲಿ ಗಾಯಗೊಂಡಿರುವ...

‘ಶೋಲೆ’ @ 50: ಇವತ್ತಿಗೂ ಅದೇ ತಾಜಾತನ, ಅದೇ ಆಕರ್ಷಣೆ, ಅದೇ ಕುತೂಹಲ

'ಶೋಲೆ' ಚಿತ್ರ ಬಿಡುಗಡೆಯಾಗಿ 50 ವರ್ಷಗಳಾದರೂ ಇವತ್ತಿಗೂ ಅದೇ ತಾಜಾತನ, ಅದೇ...

ಭಾರತದ ಮೇಲೆ ಅಮೆರಿಕ ದ್ವೇಷ: ಟ್ರಂಪ್‌ಗೆ ನೊಬೆಲ್ ನೀಡುವಂತೆ ಮೋದಿ ಶಿಫಾರಸು ಮಾಡಿದ್ರೆ ಎಲ್ಲವೂ ಸರಿಹೋಗತ್ತ?

ಪಾಕಿಸ್ತಾನವು 2026ರ ನೊಬೆಲ್ ಶಾಂತಿ ಪ್ರಶಸ್ತಿಗೆ ಟ್ರಂಪ್‌ ಅವರನ್ನು ಶಿಫಾರಸು ಮಾಡುವುದಾಗಿ...

Download Eedina App Android / iOS

X