ಇಸ್ರೇಲ್ ಹಾಗೂ ಹಮಾಸ್ ನಡುವೆ ಕಳೆದ ಅಕ್ಟೋಬರ್ 7ರಿಂದ ನಡೆಯುತ್ತಿರುವ ಸಂಘರ್ಷವು 45ನೇ ದಿನಕ್ಕೆ ಕಾಲಿಟ್ಟಿದೆ. ಈ ನಡುವೆ ಹೇಳಿಕೆ ನೀಡಿರುವ ಹಮಾಸ್, ಇಸ್ರೇಲ್‌ನೊಂದಿಗೆ ಕದನ ವಿರಾಮದ ಒಪ್ಪಂದಕ್ಕೆ ಸಮೀಪಿಸುತ್ತಿರುವುದಾಗಿ ಹೇಳಿದೆ.
ಈ ಬಗ್ಗೆ ಮಂಗಳವಾರ ಟೆಲಿಗ್ರಾಂ ಮೂಲಕ ಮಾಹಿತಿ ನೀಡಿರುವ ಹಮಾಸ್ ನಾಯಕ ಇಸ್ಮಾಯಿಲ್ ಹನಿಯೆಹ್, ಯುದ್ಧ ವಿರಾಮದ ಕುರಿತಂತೆ ಕತಾರ್‌ನ ಮಧ್ಯವರ್ತಿಗಳ ಮೂಲಕ ಮಾತುಕತೆ ನಡೆಯುತ್ತಿದೆ. ಅವರಿಗೆ ನಮ್ಮ ಪ್ರತಿಕ್ರಿಯೆಯನ್ನು ನೀಡಿರುವುದಾಗಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಆದರೆ ಯುದ್ದ ವಿರಾಮಕ್ಕೆ ಸಂಬಂಧಿಸಿದಂತೆ ಹಮಾಸ್ ಮುಖಂಡ ಹೆಚ್ಚಿನ ವಿವರಗಳನ್ನು ಇನ್ನೂ ನೀಡಿಲ್ಲ. ಆದರೆ ಮಾಹಿತಿಯ ಪ್ರಕಾರ ಮೂರರಿಂದ ಐದು ದಿನಗಳವರೆಗೆ ಕದನ ವಿರಾಮ ಇರಬಹುದು ಎಂದು ‘ಅಲ್ ಜಝೀರಾ‘ ವರದಿ ಮಾಡಿದೆ.
ಹಮಾಸ್‌ನೊಂದಿಗಿನ ಮಾತುಕತೆಗೆ ಮಧ್ಯಸ್ಥಿಕೆ ವಹಿಸಲು ಇಸ್ರೇಲ್ ಪರವಾಗಿ ಅಮೆರಿಕ ಮತ್ತು ಹಮಾಸ್ ಪರವಾಗಿ ಕತಾರ್ ಇರಲಿದೆ ಎಂದು ವರದಿಯಾಗಿದೆ. ಗಾಜಾದಲ್ಲಿ ತಾತ್ಕಾಲಿಕ ಕದನ ವಿರಾಮ ಮತ್ತು ಹೆಚ್ಚಿನ ಮಾನವೀಯ ನೆರವಿನ ಪ್ರವೇಶ ಮತ್ತು ಒತ್ತೆಯಾಳುಗಳ ಬಿಡುಗಡೆಯ ಕುರಿತು ವಾರಗಳವರೆಗೆ ಮಾತುಕತೆ ನಡೆಸುತ್ತಿವೆ.
Hamas is reportedly nearing a truce agreement with Israel, having delivered its response to a Qatari proposal, reports the Reuters news agency
🔴 LIVE updates: https://t.co/MB36OYIqR2 pic.twitter.com/Bz7dEZ4j1n
— Al Jazeera English (@AJEnglish) November 21, 2023
‘ಕದನ ವಿರಾಮ ಎಷ್ಟು ಕಾಲ ಇರಲಿದೆ. ಗಾಝಾಕ್ಕೆ ಪರಿಹಾರ ರವಾನೆ ಬಗ್ಗೆ ಸಿದ್ದತೆ ಮತ್ತು ಒತ್ತೆಯಾಳುಗಳ ವಿನಿಮಯ ಮಾಡಿಕೊಳ್ಳುವ ಬಗ್ಗೆ ಮಾತುಕತೆಗಳು ನಡೆಯುತ್ತಿದೆ. ಎರಡೂ ಕಡೆಯವರು ಮಹಿಳೆಯರು ಮತ್ತು ಮಕ್ಕಳನ್ನು ಮುಕ್ತಗೊಳಿಸಿದ್ದಾರೆ. ಈ ಕುರಿತು ಮಾತುಕತೆಗಳಿಗೆ ಮಧ್ಯಸ್ಥಿಕೆ ವಹಿಸುವ ಕತಾರ್ ವಿವರಗಳನ್ನು ಘೋಷಿಸುತ್ತದೆ’ ವರದಿಯಾಗಿದೆ.
ಒಪ್ಪಂದವು ಕದನ ವಿರಾಮ, ಗಾಝಾದ ಎಲ್ಲ ಪ್ರದೇಶಗಳಿಗೆ ಪರಿಹಾರ ಸಾಮಗ್ರಿಗಳ ಪೂರೈಸಲು ಟ್ರಕ್‌ಗಳ ವ್ಯವಸ್ಥೆ ಮತ್ತು ಗಾಯಗೊಂಡವರನ್ನು ಚಿಕಿತ್ಸೆಗಾಗಿ ಬೇರೆ ದೇಶಗಳಿಗೆ ಕಳುಹಿಸುವ ವಿಷಯವೂ ಒಳಗೊಂಡಿರುತ್ತದೆ. ಎರಡೂ ದೇಶಗಳ ನಡುವೆ ವಾರಗಳಿಂದ ಮಾತುಕತೆ ನಡೆಯುತ್ತಿದೆ. ಇಸ್ರೇಲ್ ಕಡೆಯವರು ಒಪ್ಪಂದದ ಒಮ್ಮತಕ್ಕೆ ಬರುತ್ತಿಲ್ಲ ಎಂದು ಹಮಾಸ್‌ನ ಎಲ್-ರೆಶಿಕ್ ಹೇಳಿದ್ದಾರೆ.
ಇದೇ ವೇಳೆ ಹಮಾಸ್, ಭೂ ಮತ್ತು ವಾಯು ಮಾರ್ಗದ ಮೂಲಕ ಗಾಝಾದಲ್ಲಿ ಇಸ್ರೇಲ್ ವಿಮಾನಗಳ ಚಟುವಟಿಕೆಯನ್ನು ನಿಷೇಧಿಸುವ ಬಗ್ಗೆಯೂ ಮಾತುಕತೆ ನಡೆಯುತ್ತಿದೆ ಎಂದು ವರದಿಯಾಗಿದೆ.
As the #IsraelHamasWar rages on, #Hamas chief has hinted at a true deal with #Israel. In a big statement, #IsmailHaniyeh said that they are close to a deal with Israel. Watch for more information pic.twitter.com/6tgJEI0Otc
— Hindustan Times (@htTweets) November 21, 2023
ಅಕ್ಟೋಬರ್ 7ರಂದು ಇಸ್ರೇಲ್ ಪ್ಯಾಲೆಸ್ತೀನ್ ಮೇಲೆ ಯುದ್ಧ ಘೋಷಿಸಿದ ಬಳಿಕ ಈವರೆಗೆ ಪ್ಯಾಲೆಸ್ತೀನ್‌ನಲ್ಲಿ ಮೃತರ ಸಂಖ್ಯೆ 15,000ಕ್ಕೂ ಅಧಿಕ ಇದೆ ಎಂದು ಯುರೋ-ಮೆಡ್ ಮಾನವ ಹಕ್ಕುಗಳ ಸಂಸ್ಥೆ ಹೇಳಿದೆ. ಮೃತರಲ್ಲಿ 6,403 ಮಕ್ಕಳು ಮೃತಪಟ್ಟಿದ್ದಾರೆ. ಮೃತರಲ್ಲಿ 3,561 ಮಂದಿ ಮಹಿಳೆಯರು ಸೇರಿದ್ದಾರೆ. ಯುದ್ಧದಲ್ಲಿ 30,000ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
ಹಮಾಸ್‌ನೊಂದಿಗಿನ ಒತ್ತೆಯಾಳುಗಳ ಒಪ್ಪಂದದ ಕುರಿತು ಕತಾರ್ ಇಸ್ರೇಲ್‌ಗೆ ಎರಡು ಸಲಹೆಗಳನ್ನು ಕೂಡ ನಿನ್ನೆ ನೀಡಿತ್ತು. ಮೊದಲನೆಯದಾಗಿ 3 ದಿನಗಳ ಕದನ ವಿರಾಮ ಮತ್ತು ಗಾಝಾ ಪಟ್ಟಿಗೆ ನಿರ್ದಿಷ್ಟ ಪ್ರಮಾಣದ ಇಂಧನದ ಪೂರೈಕೆಗೆ ಬದಲಾಗಿ 53 ಮಕ್ಕಳು ಮತ್ತು ಮಹಿಳೆಯರನ್ನು ಹಮಾಸ್‌ನಿಂದ ಬಿಡುಗಡೆ ಮಾಡುವುದಾಗಿದೆ.
ಪ್ಯಾಲೆಸ್ತೀನ್ ಮಹಿಳೆಯರು, ಮಕ್ಕಳು ಮತ್ತು ಕೆಲವು ಭದ್ರತಾ ಖೈದಿಗಳ ಬಿಡುಗಡೆ, 5 ದಿನಗಳ ಕದನ ವಿರಾಮ ಮತ್ತು ಹೆಚ್ಚಿನ ಪ್ರಮಾಣದ ಇಂಧನದ ಪೂರೈಕೆಗೆ ಬದಲಾಗಿ ಹಮಾಸ್ 87 ಒತ್ತೆಯಾಳುಗಳನ್ನು ಬಿಡುಗಡೆ ಮಾಡುವ ಬಗ್ಗೆ ಎರಡನೆಯ ಸಲಹೆಯನ್ನು ನೀಡಲಾಗಿದೆ ಎಂದು ಪ್ಯಾಲೆಸ್ತೀನ್ ಮೂಲಗಳನ್ನು ಉಲ್ಲೇಖಿಸಿ ಕೆಲವೊಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿಗಳು ತಿಳಿಸಿದೆ.