ಅನುದಾನ ಸ್ಥಗಿತ ವಿಚಾರವಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇತೃತ್ವದ ಆಡಳಿತ ಮತ್ತು ಹಾರ್ವರ್ಡ್ ವಿಶ್ವವಿದ್ಯಾಲಯದ ನಡುವೆ ಸಂಘರ್ಷ ನಡೆಯುತ್ತಿದೆ. ಇದೀಗ, ಸಂಘರ್ಷವು ನ್ಯಾಯಾಲಯದ ಕಟಕಟೆಗೆ ಬಂದು ನಿಂತಿದೆ. ಟ್ರಂಪ್ ಆಡಳಿತದ ವಿರುದ್ಧ ಹಾರ್ವರ್ಡ್ ವಿಶ್ವವಿದ್ಯಾಲಯ ಮೊಕದಮೆ ದಾಖಲಿಸಿದೆ.
ವಿಶ್ವವಿದ್ಯಾಲಯದ ಕ್ಯಾಪಂಸ್‌ನಲ್ಲಿ ಕ್ರಿಯಾಶೀಲನೆಯನ್ನು ಮೊಟಗುಗೊಳಿಸಲು ಟ್ರಂಪ್ ಆಡಳಿತ ಹೇಳುತ್ತಿದೆ. ಟ್ರಂಪ್ ಅವರ ನಿರ್ದೇಶನವನ್ನು ಜಾರಿಗೊಳಿಸಲು ನಿರಾಕರಿಸಿದ್ದಕ್ಕಾಗಿ, ವಿಶ್ವವಿದ್ಯಾಲಯಕ್ಕೆ ಬರಬೇಕಿದ್ದ ಅನುದಾನದಲ್ಲಿ 2.2 ಶತಕೋಟಿ ಡಾಲರ್‌ಅನ್ನು ಸ್ಥಗಿತಗೊಳಿಸಿದೆ ಎಂದು ವಿಶ್ವವಿದ್ಯಾಲಯ ಆರೋಪಿಸಿದೆ. ಪೂರ್ಣ ಅನುದಾನದ ಬಿಡುಗಡೆಗಾಗಿ ಮ್ಯಾಸಚೂಸೆಟ್ಸ್ ನ್ಯಾಯಾಲಯ ಮೊಕದಮೆ ಹೂಡಿದೆ.
“ಟ್ರಂಪ್ ಆಡಳಿತವು ಶಿಕ್ಷಣಿಕ ನಿರ್ಧಾರಗಳ ಮೇಲೆ ನಿಯಂತ್ರಣ ಸಾಧಿಸಲು ಹವಣಿಸುತ್ತಿದೆ. ಅದಕ್ಕಾಗಿ ಫೆಡರಲ್ ನಿಧಿಯನ್ನು ತಡೆಹಿಡಿದಿದೆ. ಕೇವಲ ಹಾರ್ವರ್ಡ್ ವಿಶ್ವವಿದ್ಯಾಲಯ ಮಾತ್ರವಲ್ಲ, ಹಲವಾರು ಶಿಕ್ಷಣ ಸಂಸ್ಥೆಗಳನ್ನು ಟ್ರಂಪ್ ಆಡಳಿತ ಗುರಿಯಾಗಿಸಿಕೊಂಡಿದೆ. ಟ್ರಂಪ್ ಅವರ ಕ್ರಮಗಳು ಏಕಪಕ್ಷೀಯವಾಗಿವೆ. ಫೆಡರಲ್ ಕಾನೂನುಗಳು ಮತ್ತು ನಿಯಮಗಳನ್ನು ಉಲ್ಲಂಘಿಸಿವೆ” ಎಂದು ಆರೋಪಿಸಿದೆ.
“ಶ್ವೇತಭವನವು ಹಾರ್ವರ್ಡ್ ವಿಶ್ವವಿದ್ಯಾಲಯಕ್ಕೆ ಹಲವಾರು ನಿಯಮಗಳನ್ನು ಹೊರಡಿಸಿದೆ. ಅವೆಲ್ಲವೂ ವಿಶ್ವವಿದ್ಯಾಲಯದ ಕ್ಯಾಂಪಸ್‌ಗಳಲ್ಲಿ ಯೆಹೂದ್ಯ ವಿರೋಧಿ ಪ್ರತಿಭಟನೆಗಳನ್ನು ನಡೆಸುವುದಕ್ಕೆ ಸಂಬಂಧಿಸಿವೆ. ಆದರೆ, ಇಂತಹ ಪ್ರಚೋದನೆಗಳನ್ನು ವಿಶ್ವವಿದ್ಯಾನಿಲಯದ ಅಧ್ಯಕ್ಷ ಅಲನ್ ಗಾರ್ಬರ್ ವಿರೋಧಿಸುತ್ತಾರೆ” ಎಂದು ವಿಶ್ವವಿದ್ಯಾಲಯವು ಹೇಳಿದೆ.
“ಶ್ವೇತಭವನದ ಬೇಡಿಕೆಗಳಿಗೆ ನಾವು ಮಣಿಯುವುದಿಲ್ಲ. ಟ್ರಂಪ್ ಆಡಳಿತದ ಬೇಡಿಕೆಗಳನ್ನು ಸಾರ್ವಜನಿಕವಾಗಿ ತಿರಸ್ಕರಿಸಿದ್ದೇವೆ. ಹೀಗಾಗಿ, ಟ್ರಂಪ್ ಆಡಳಿತವು ಅನುದಾನ ಕಡಿತದ ಬೆದರಿಕೆ ಹಾಕುತ್ತಿದೆ” ಎಂದು ಹಾರ್ವರ್ಡ್ ಅಧ್ಯಕ್ಷ ಅಲನ್ ಗಾರ್ಬರ್ ಹೇಳಿದ್ದಾರೆ.