ಪಾಕಿಸ್ತಾನ ಚುನಾವಣಾ ಆಯೋಗ 2024ರ ರಾಷ್ಟ್ರೀಯ ಚುನಾವಣೆಗೆ ಸ್ಪರ್ಧಿಸಿದ್ದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ನಾಮಪತ್ರವನ್ನು ತಿರಸ್ಕರಿಸಿದೆ.
ಇಮ್ರಾನ್ ಖಾನ್ ಅವರು ತಮ್ಮ ಪಾಕಿಸ್ತಾನ್ ತಹ್ರೀಕ್ ಎ ಇನ್ಸಾಫ್ ಪಕ್ಷದಿಂದ(ಪಿಟಿಐ) ಸ್ವಕ್ಷೇತ್ರ ಮೈನ್‌ವಾಲಿಯಿಂದ ಸ್ಪರ್ಧಿಸಿದ್ದರು.
ಸೈಪರ್ ಪ್ರಕರಣದಲ್ಲಿ ಅಧಿಕೃತ ರಹಸ್ಯ ಕಾಯಿದೆ ಉಲ್ಲಂಘನೆಯ ಆರೋಪದಲ್ಲಿ ಈ ವರ್ಷದ ಆಗಸ್ಟ್‌ನಲ್ಲಿ ಇಮ್ರಾನ್ ಖಾನ್ ಅವರನ್ನು ಬಂಧಿಸಲಾಗಿತ್ತು.
ಸೈಪರ್ ಪ್ರಕರಣದಲ್ಲಿ ಪಾಕಿಸ್ತಾನದ ರಾಜತಾಂತ್ರಿಕ ರಹಸ್ಯವನ್ನು ಅಮೆರಿಕದಲ್ಲಿನ ಪಾಕಿಸ್ತಾನ ರಾಯಭಾರ ಕಚೇರಿಗೆ ಕಳುಹಿಸಿದ್ದ ಆರೋಪ ಇಮ್ರಾನ್ ಖಾನ್ ಮೇಲಿತ್ತು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬಾಲ ಗರ್ಭಿಣಿಯರ ಸಂಖ್ಯೆ ಹೆಚ್ಚಳ; ಜಿಲ್ಲಾ ಮಕ್ಕಳ ರಕ್ಷಣಾ ಘಟಕಗಳು ಏನು ಮಾಡುತ್ತಿವೆ?
ಸೈಪರ್ ಪ್ರಕರಣವು ವಿದೇಶಗಳಿಂದ ರಾಜಕೀಯ ಲಾಭ ಗಳಿಕೆಯ ಉದ್ದೇಶಕ್ಕಾಗಿ ಪಾಕಿಸ್ತಾನದ ರಾಜತಾಂತ್ರಿಕ ರಹಸ್ಯವನ್ನು ಅಮೆರಿಕದಲ್ಲಿನ ಪಾಕಿಸ್ತಾನ ರಾಯಭಾರ ಕಚೇರಿಗೆ ಕಳುಹಿಸಲಾಗಿತ್ತು ಎಂದು ಆರೋಪಿಸಲಾಗಿತ್ತು. ಆದರೆ ಈ ಪ್ರಕರಣದಲ್ಲಿ ಪಾಕಿಸ್ತಾನದ ಸುಪ್ರೀಂ ಕೋರ್ಟ್ ಕೂಡ ಮಾಜಿ ಪ್ರಧಾನಿಯ ವಿರುದ್ಧ ಸಾಕಷ್ಟು ಪುರಾವೆಗಳಿಲ್ಲ ಎಂದು ವಿಚಾರಣೆಯ ಸಂದರ್ಭದಲ್ಲಿ ಪ್ರತಿವಾದಿಗಳಿಗೆ ತಿಳಿಸಿತ್ತು.
ಇಮ್ರಾನ್ ಖಾನ್ 2022ರ ಏಪ್ರಿಲ್‌ನಲ್ಲಿ ಪ್ರಧಾನಿ ಹುದ್ದೆಯಿಂದ ಕೆಳಗಿಳಿದ ನಂತರ ಹಲವು ಪ್ರಕರಣಗಳಲ್ಲಿ ಸಿಲುಕಿದ್ದಾರೆ. ಸದ್ಯ ಭ್ರಷ್ಟಾಚಾರದ ಪ್ರಕರಣವೊಂದರಲ್ಲಿ ಸೆರೆಮನೆಯಲ್ಲಿದ್ದಾರೆ.
ಫೆಬ್ರವರಿ 8ರಂದು ಪಾಕ್‌ನಲ್ಲಿ ರಾಷ್ಟ್ರೀಯ ಚುನಾವಣೆಗಳು ನಡೆಯಲಿದೆ. ಚುನಾವಣೆಗೂ ಮೊದಲು ಇಮ್ರಾನ್ ಅವರನ್ನುಬಿಡುಗಡೆಗೊಳಿಸುವ ಸಾಧ್ಯತೆ ಕಡಿಮೆ ಎಂದು ಪಿಟಿಐ ನಾಯಕರು ತಿಳಿಸಿದ್ದಾರೆ.