ಭಾರತದಲ್ಲಿ ಪ್ರಮುಖ ರಾಚನಿಕ ಸುಧಾರಣೆ ಅಗತ್ಯ: ಐಎಂಎಫ್ ಪ್ರತಿಪಾದನೆ

Date:

Advertisements

ಹಲವು ಅಂಶಗಳ ಹಿನ್ನೆಲೆಯಲ್ಲಿ ಭಾರತ ಸುಸ್ಥಿರ ಪ್ರಗತಿಯ ಪಥದಲ್ಲಿದ್ದು, ಆದರೆ ನ್ಯಾಯಾಂಗ, ಸುಂಕ, ಕಾರ್ಮಿಕ ನಿಯಂತ್ರಣ ಸೇರಿದಂತೆ ಹಲವು ಪ್ರಮುಖ ಕ್ಷೇತ್ರಗಳಲ್ಲಿ ಸ್ಥಿರವಾದ ನಿಯಂತ್ರಣ ವ್ಯವಸ್ಥೆಯ ಜತೆಗೆ ರಾಚನಿಕ ಸುಧಾರಣೆ ಅಗತ್ಯ ಎಂದು ಐಎಂಎಫ್ ಪ್ರತಿಪಾದಿಸಿದೆ.

ವಾರ್ಷಿಕ ಸಲಹೆಯನ್ನು ಆಧರಿಸಿದ ಇತ್ತೀಚಿನ ಪರಾಮರ್ಶೆಯಲ್ಲಿ ಜಿಎಸ್‌ಟಿ ಸರಳೀಕರಣಕ್ಕೂ ಸಲಹೆ ಮಾಡಲಾಗಿದೆ. ಇಂಧನದ ಮೇಲಿನ ಅಬ್ಕಾರಿ ಸುಂಕವನ್ನು ಕಡಿತಗೊಳಿಸುವುದು ಮತ್ತು ಆದಾಯ ತೆರಿಗೆ ನೆಲೆಯನ್ನು ವಿಸ್ತøತಗೊಳಿಸುವುದು ಅಗತ್ಯ ಎಂದು ಸೂಚಿಸಿದೆ. ಎಲ್ಲಕ್ಕಿಂತ ಮುಖ್ಯವಾಗಿ ಜಿಎಸ್ಟಿಯಲ್ಲಿ ಶೇಕಡ 14ರ ಒಂದೇ ಸ್ತರವನ್ನು ಹೊಂದುವಂತೆ ಸಲಹೆ ಮಾಡಲಾಗಿದೆ.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ತಮಿಳುನಾಡಿನಲ್ಲಿ ಸದ್ದು ಮಾಡುತ್ತಿರುವ ವಿಜಯ್ ಮತ್ತು #GetOut ಫಲಕಗಳು

Advertisements

ಭಾರತದ ಹಣಕಾಸು ವಲದಯ ಆರೋಗ್ಯದಿಂದಾಗಿ ಕಾರ್ಪೊರೇಟ್ ಬ್ಯಾಲೆನ್ಸ್ಶೀಟ್ಗಳ ಬಲವರ್ಧನೆಯಾಗಿದೆ ಮತ್ತು ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯದ ಪ್ರಬಲ ಅಡಿಪಾಯ ಭಾರತದ ಸುಸ್ಥಿರ ಮಧ್ಯಮಾವಧಿ ಪ್ರಗತಿಯ ಹಾಗೂ ಸಮಾಜ ಕಲ್ಯಾಣ ಪ್ರಯೋಜನಗಳ ಅವಕಾಶಗಳನ್ನು ಒತ್ತಿಹೇಳಿದೆ. ಆರ್ಥಿಕ ದೃಷ್ಟಿಕೋನದ ಅಪಾಯ ಸಾಧ್ಯತೆಗಳು ಕೆಳಮುಖವಾಗಿವೆ ಎಂದು ಐಎಂಎಫ್ ವಿಶ್ಲೇಷಿಸಿದೆ.

ಸಂಶೋಧನೆ ಮತ್ತು ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುವಂತೆ ಕರೆ ನೀಡಿದ್ದು, ದೇಶದಲ್ಲಿ ಹಲವು ಸುಧಾರಣಾ ಕ್ರಮಗಳು ಅಗತ್ಯ ಎಂದು ಪ್ರತಿಪಾದಿಸಿದೆ. ಇತರ ಆದ್ಯತೆಗಳಲ್ಲಿ ಕೃಷಿ, ಭೂಮಿ, ಆಡಳಿತ ಮತ್ತು ನ್ಯಾಯಾಂಗ ಸುಧಾರಣೆಗಳು ಸೇರಿವೆ. ಶಿಕ್ಷಣ, ಕೌಶಲ್ಯ, ಸಾರ್ವಜನಿಕ ಆರೋಗ್ಯ, ಸಾಮಾಜಿಕ ಸುರಕ್ಷಾ ಜಾಲವನ್ನು ಬಲಪಡಿಸುವುದು, ಸಾಲ ಮಾರುಕಟ್ಟೆಯಲ್ಲಿ ಸಾರ್ವಜನಿಕ ವಲಯದ ಹೆಜ್ಜೆಗುರುತು ಕಡಿಮೆ ಮಾಡುವುದು ಮತ್ತು ಹವಾಮಾನ ನೀತಿಗಳ ಅನುಷ್ಠಾನಕ್ಕೆ ಸೂಚಿಸಲಾಗಿದೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಆನ್‌ಲೈನ್‌ ಜೂಜಾಟ ತಡೆಗೆ ಕಠಿಣ ಕಾನೂನು; ಸಂಸತ್ತಿನಲ್ಲಿ ಆನ್‌ಲೈನ್ ಗೇಮಿಂಗ್‌ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025 ಮಂಡನೆ

ಭಾರತದ ಡಿಜಿಟಲ್ ಮನರಂಜನಾ ಕ್ಷೇತ್ರದಲ್ಲಿ ಭಾರೀ ಬದಲಾವಣೆಯನ್ನು ತರಲು ಸಿದ್ಧವಾಗಿರುವ ಆನ್‌ಲೈನ್...

ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಧಾನಿ, ಸಿಎಂ ಪದಚ್ಯುತಿಗೆ ಅನುವು ಮಾಡಿಕೊಡುವ ಮಸೂದೆ ಸಂಸತ್ತಿನಲ್ಲಿ ಮಂಡನೆ

ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟ ಅಥವಾ ಬಂಧನದಲ್ಲಿರುವ ಚುನಾಯಿತ ಪ್ರತಿನಿಧಿಗಳನ್ನು ಅಧಿಕಾರದಿಂದ...

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಗುಜರಾತ್‌ನ ಗ್ರಾಮವೊಂದರಲ್ಲಿ ಕೊನೆಗೂ ದಲಿತರಿಗೆ ಕ್ಷೌರದಂಗಡಿಗೆ ಮುಕ್ತ ಪ್ರವೇಶ: ಶತಮಾನಗಳ ಅನಿಷ್ಟ ಪದ್ದತಿಗೆ ತೆರೆ

ಗುಜರಾತ್‌ನ ಜುನಾಗಡ್‌ ಜಿಲ್ಲೆಯಲ್ಲಿ ಗಡ್ಡ ಮೀಸೆ ಬೆಳೆಸಿದ್ದಕ್ಕೆ ದಲಿತ ಯುವಕರಿಬ್ಬರ ಜಾತಿ...

Download Eedina App Android / iOS

X