ಇಸ್ರೇಲ್-ಇರಾನ್ ಸಂಘರ್ಷ ಹೆಚ್ಚಾಗುತ್ತಿದ್ದಂತೆ ಇರಾನ್ನಲ್ಲಿರುವ ಭಾರತೀಯರಿಗೆ ಎಚ್ಚರದಿಂದಿರಲು ಭಾರತೀಯ ರಾಯಭಾರ ಕಚೇರಿ ಸೂಚಿಸಿದೆ. ಆದರೆ ಪ್ರಸ್ತುತ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಇರಾನ್ನಲ್ಲಿರುವ ಭಾರತೀಯರು ಭಯಭೀತರಾಗಬೇಡಿ, ಸರಿಯಾದ ಎಚ್ಚರಿಕೆ ವಹಿಸಿ, ಟೆಹ್ರಾನ್ನಲ್ಲಿರುವ ಭಾರತದ ರಾಯಭಾರ ಕಚೇರಿಯೊಂದಿಗೆ ಸಂಪರ್ಕದಲ್ಲಿರಿ ಎಂದು ಭಾನುವಾರ ತಿಳಿಸಿದೆ.
ಭಾರತೀಯ ರಾಯಭಾರ ಕಚೇರಿಯು ಎಲ್ಲಾ ಭಾರತೀಯ ಪ್ರಜೆಗಳು ಮತ್ತು ಭಾರತೀಯ ಮೂಲದವರು ಜಾಗರೂಕರಾಗಿರಲು, ಅನಗತ್ಯವಾಗಿ ಓಡಾಡದಿರಲು, ರಾಯಭಾರ ಕಚೇರಿಯ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಬರುವ ಎಲ್ಲಾ ಅಪ್ಡೇಟ್ಗಳನ್ನು ಗಮನಿಸುತ್ತಿರಲು, ಸ್ಥಳೀಯ ಅಧಿಕಾರಿಗಳು ಸೂಚಿಸಿದಂತೆ ಸುರಕ್ಷತಾ ಮಾರ್ಗಸೂಚಿಗಳನ್ನು ಅನುಸರಿಸಲು ಸಲಹೆ ನೀಡಿದೆ.
ಇದನ್ನು ಓದಿದ್ದೀರಾ? ಬೈರುತ್ನಲ್ಲಿ ಇಸ್ರೇಲ್ ದಾಳಿ ಬಳಿಕ ಇರಾನ್ ಕಮಾಂಡರ್ ನಾಪತ್ತೆ : ವರದಿ
ಈ ಬಗ್ಗೆ ರಾಯಭಾರ ಕಚೇರಿಯು ತನ್ನ ಎಕ್ಸ್ ಖಾತೆಯಲ್ಲಿ ಗೂಗಲ್ ಫಾರ್ಮ್ ಅನ್ನು ಒದಗಿಸಿದೆ. ಭಾರತೀಯ ನಾಗರಿಕರು ಅದನ್ನು ಭರ್ತಿ ಮಾಡಿ ತಮ್ಮ ವಿವರಗಳನ್ನು ಒದಗಿಸಬೇಕು ಎಂದು ಹೇಳಿದೆ. ಟೆಲಿಗ್ರಾಮ್ ಲಿಂಕ್ ಅನ್ನು ಸಹ ಒದಗಿಸಲಾಗಿದೆ. ” ದಯವಿಟ್ಟು ಗಮನಿಸಿ ಈ ಟೆಲಿಗ್ರಾಮ್ ಲಿಂಕ್ ಪ್ರಸ್ತುತ ಇರಾನ್ನಲ್ಲಿರುವ ಭಾರತೀಯ ಪ್ರಜೆಗಳಿಗೆ ಮಾತ್ರ” ಎಂದೂ ಎಕ್ಸ್ನಲ್ಲಿ ಪೋಸ್ಟ್ ಮಾಡಿದೆ.
For WhatsApp:
— India in Iran (@India_in_Iran) June 15, 2025
+98 9010144557
+98 9015993320
+91 8086871709 https://t.co/UUEVuLMJoW
ತುರ್ತು ಸಂಪರ್ಕ ವಿವರಗಳನ್ನು ಸಹ ಒದಗಿಸಿದೆ.
ಸಂಪರ್ಕ ಸಂಖ್ಯೆಗಳು: ಕರೆಗೆ ಮಾತ್ರ: +98 9128109115, +98 9128109109
ವಾಟ್ಸಾಪ್ ಕರೆಗಾಗಿ: +98 901044557, +98 9015993320, +91 8086871709
ಬಂದರ್ ಅಬ್ಬಾಸ್: +98 9177699036 ಮತ್ತು ಜಹೇದನ್: +98 9396356649
ಇಸ್ರೇಲ್ ಶುಕ್ರವಾರ ಮುಂಜಾನೆ ಇರಾನ್ನ ಪರಮಾಣು, ಕ್ಷಿಪಣಿ ಮತ್ತು ಮಿಲಿಟರಿ ಮೂಲಸೌಕರ್ಯವನ್ನು ಗುರಿಯಾಗಿಸಿಕೊಂಡು ದಾಳಿ ಮಾಡಿದೆ. ಇದಾದ ಬಳಿಕ ಇರಾನ್ ಇಸ್ರೇಲ್ ಮೇಲೆ ಪ್ರತೀಕಾರದ ದಾಳಿಗಳನ್ನು ಪ್ರಾರಂಭಿಸಿದೆ.
