ಅಮೆರಿಕದ ನ್ಯೂಯಾರ್ಕ್‌ನ ಹಾರ್ಲೆಮ್ ವಸತಿ ಕಟ್ಟಡದಲ್ಲಿ ಸಂಭವಿಸಿದ ಬೆಂಕಿ ದುರಂತದಲ್ಲಿ ಭಾರತೀಯ ಮೂಲದ ಯುವಕನೊಬ್ಬ ಮೃತಪಟ್ಟಿದ್ದಾನೆ.
ಮೃತ ಯುವಕ 27 ವರ್ಷದ ಫಾಜಿಲ್ ಖಾನ್ ಎಂದು ಭಾರತೀಯ ರಾಯಭಾರಿ ಕಚೇರಿ ಗುರುತಿಸಿದ್ದು, ಕಚೇರಿಯ ಸಿಬ್ಬಂದಿ ಯುವಕನ ಸ್ನೇಹಿತರು ಹಾಗೂ ಸಂಬಂಧಿಕರೊಂದಿಗೆ ಸಂಪರ್ಕದಲ್ಲಿದ್ದಾರೆ.
ಹಾರ್ಲೆಮ್ ವಸತಿ ಕಟ್ಟಡದಲ್ಲಿ ಇ-ಬೈಕ್‌ನ ಬ್ಯಾಟರಿ ಸ್ಪೋಟಗೊಂಡು ದುರಂತ ಸಂಭವಿಸಿದೆ ಎಂದು ಸ್ಥಳೀಯ ಪತ್ರಿಕೆಗಳು ವರದಿ ಮಾಡಿವೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ವಿಪಕ್ಷ ನಾಯಕ ಅಶೋಕ್ ಮತ್ತು ಸಾರ್ವಜನಿಕ ಸಭ್ಯತೆ
ನ್ಯೂಯಾರ್ಕ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯು ಖಾನ್ ಅವರ ಕುಟುಂಬದೊಂದಿಗೆ ಸಂಪರ್ಕದಲ್ಲಿದ್ದು, ಖಾನ್ ಅವರ ಪಾರ್ಥೀವ ಶರೀರವನ್ನು ಭಾರತಕ್ಕೆ ತಲುಪಿಸಲು ಎಲ್ಲ ರೀತಿಯ ನೆರವು ನೀಡುವುದಾಗಿ ತಿಳಿಸಿದೆ.
“ನ್ಯೂಯಾರ್ಕ್‌ನ ಹಾರ್ಲೆಮ್ ವಸತಿ ಕಟ್ಟಡದಲ್ಲಿ ಆಕಸ್ಮಿಕ ಬೆಂಕಿ ದುರಂತದಿಂದಾಗಿ 27 ವರ್ಷದ ಭಾರತೀಯ ಪ್ರಜೆ ಫಾಜಲ್ ಖಾನ್ ಮೃತಪಟ್ಟಿರುವುದು ಅತ್ಯಂತ ದುಃಖಕರವಾಗಿದೆ. ಭಾರತದ ರಾಯಭಾರ ಕಚೇರಿಯು ಫಾಜಲ್ ಖಾನ್ ಅವರ ಕುಟುಂಬ ಹಾಗೂ ಸ್ನೇಹಿತರೊಂದಿಗೆ ಸಂಪರ್ಕದಲ್ಲಿದೆ. ಭಾರತಕ್ಕೆ ಆತನ ಮೃತದೇಹವನ್ನು ಮರಳಿಸಲು ನಾವು ಎಲ್ಲ ರೀತಿಯ ನೆರವು ನೀಡುತ್ತೇವೆ” ಎಂದು ಭಾರತೀಯ ರಾಯಭಾರಿ ಕಚೇರಿಯ ಪ್ರಕಟಣೆ ತಿಳಿಸಿದೆ.
ಖಾನ್ ಕೊಲಂಬಿಯಾ ಜರ್ನಲಿಸಂ ಶಾಲೆಯ ಪದವೀಧರನಾಗಿದ್ದು,ಕಟ್ಟಡದ ಕೊನೆಯ ಮಹಡಿಯಲ್ಲಿರುವಾಗ ದುರಂತ ಸಂಭವಿಸಿದೆ.ಘಟನೆಯಲ್ಲಿ 17 ಇತರ ಮಂದಿ ಕೂಡ ಗಾಯಗೊಂಡಿದ್ದಾರೆ.