ಮಾಲ್ಡೀವ್ಸ್‌ನ ರಾಜಧಾನಿಯಲ್ಲಿನ ಪ್ರಮುಖ ಸೇತುವೆ ದುರಸ್ತಿ ಸಮಯದಲ್ಲಿ ಕುಸಿದುಬಿದ್ದ ಭಾರತೀಯ ಕಾರ್ಮಿಕರೊಬ್ಬರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಮೇ ಮತ್ತು ಜೂನ್ ತಿಂಗಳಲ್ಲಿ ಭಾರತೀಯ ಕಾರ್ಮಿಕ ಸಾವನ್ನಪ್ಪಿದ ಎರಡನೇ ಪ್ರಕರಣ ಇದಾಗಿದೆ. ಪೊಲೀಸರು ಮೃತರನ್ನು ಭಾರತೀಯ ಪ್ರಜೆ ಎಂದು ಗುರುತಿಸಿದ್ದಾರೆ. ಆದರೆ ಅಧಿಕ ಮಾಹಿತಿಯನ್ನು ಬಹಿರಂಗಪಡಿಸಿಲ್ಲ.
ಸುದ್ದಿ ಪೋರ್ಟಲ್ ಸನ್.ಎಂವಿ ಪ್ರಕಾರ, ಸೋಮವಾರ ರಾತ್ರಿ ಸಿನಮಲೆ ಸೇತುವೆಯ ಮೇಲೆ ದುರಸ್ತಿ ಕೆಲಸ ಮಾಡುತ್ತಿದ್ದಾಗ ಕಾರ್ಮಿಕನಿಗೆ ತಲೆಸುತ್ತು ಬಂದು ಕುಸಿದು ಬಿದ್ದಿದ್ದಾನೆ. ಕಾರ್ಮಿಕನನ್ನು ಹುಲ್‌ಹುಮಲೆಯ ಖಾಸಗಿ ಆಸ್ಪತ್ರೆಗೆ ಕರೆದೊಯ್ದುವಷ್ಟರಲ್ಲಿ ಕಾರ್ಮಿಕ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಮೋದಿ ಪ್ರಮಾಣ ವಚನ ಸಮಾರಂಭಕ್ಕೆ ಮಾಲ್ಡೀವ್ಸ್ ಅಧ್ಯಕ್ಷ ಮುಯಿಝುಗೆ ಆಹ್ವಾನ
ಸಿನಮಲೆ ಸೇತುವೆಯು ಮಲೆ ನಗರವನ್ನು ಹುಲ್ಹುಲೆಗೆ ಸಂಪರ್ಕಿಸುತ್ತದೆ. ಹುಲ್ಹುಲೆಯಲ್ಲಿ ವೆಲನಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣವಿದೆ. ಇನ್ನು ಈ ಸೇತುವೆಯ ಕೆಲಸವನ್ನು ಚೀನಾ ಕಮ್ಯುನಿಕೇಶನ್ಸ್ ಕನ್ಸ್ಟ್ರಕ್ಷನ್ ಕಂಪನಿ (ಸಿಸಿಸಿಸಿ) ನಡೆಸುತ್ತಿದೆ ಎಂದು ಸನ್.ಎಂವಿ ವರದಿ ಮಾಡಿದೆ.
ಇದಕ್ಕೂ ಮುನ್ನ ಮೇ 3ರಂದು 30 ವರ್ಷದ ಭಾರತೀಯ ಕಾರ್ಮಿಕರೊಬ್ಬರು ಸಾವನ್ನಪ್ಪಿದ್ದರು. ಹುಲ್ಹುಮಲೆ ಆವೃತದಲ್ಲಿ ಅಗೆಯುವ ಕೆಲಸ ಮಾಡುವಾಗ ಭಾರತೀಯ ಯುವಕ ಗಾಯಗೊಂಡಿದ್ದು ಬಳಿಕ ಸಾವನ್ನಪ್ಪಿದ್ದಾನೆ. ಈ ಪ್ರಕರಣದಲ್ಲಿಯೂ ಹೆಚ್ಚಿನ ಮಾಹಿತಿಯನ್ನು ಪೊಲೀಸರು ಬಹಿರಂಗಪಡಿಸಿಲ್ಲ.
ಇದನ್ನು ಓದಿದ್ದೀರಾ? ಹೆಚ್ಚಿನ ಪ್ರವಾಸಿಗರನ್ನು ಕಳುಹಿಸಿ: ಚೀನಾಕ್ಕೆ ಮಾಲ್ಡೀವ್ಸ್ ಅಧ್ಯಕ್ಷ ಮನವಿ
ಸ್ಥಳೀಯ ಮಾಧ್ಯಮ ವರದಿಗಳು ಘಟನೆಯ ಹೆಚ್ಚಿನ ತನಿಖೆ ಪೊಲೀಸರು ನಡೆಸುತ್ತಿದ್ದಾರೆ. ಸರಿಯಾದ ಸುರಕ್ಷತಾ ಮಾನದಂಡಗಳು ಇಲ್ಲದ ಕಾರಣ ಈ ಘಟನೆ ನಡೆದಿದೆ ಎಂದು ಉಲ್ಲೇಖಿಸಿದೆ.
ಮಾಲ್ಡೀವ್ಸ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯ ಪ್ರಕಾರ, ಮಾಲ್ಡೀವ್ಸ್‌ನಲ್ಲಿ 27,000 ಭಾರತೀಯ ವಲಸಿಗರು ಇದ್ದಾರೆ. ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಹೆಚ್ಚಿನವರು ಸೇವೆ ಸಲ್ಲಿಸುತ್ತಿದ್ದಾರೆ. ಹೆಚ್ಚಿನ ಜನರು ನಿರ್ಮಾಣ ಕ್ಷೇತ್ರದಲ್ಲಿಯೂ ತೊಡಗಿದ್ದಾರೆ.