ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷ ತೀವ್ರಗೊಂಡಿದೆ. ಇರಾನ್ ರಾಜಧಾನಿ ಟೆಹ್ರಾನ್‌ನಲ್ಲಿರುವವರು ನಗರವನ್ನು ತೊರೆಯುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕರೆಕೊಟ್ಟಿದ್ದಾರೆ. ಈ ಬೆನ್ನಲ್ಲೇ, ಇಸ್ರೇಲ್ ಕೂಡ ಶೀಘ್ರವೇ ಟೆಹ್ರಾನ್ ತೊರೆಯಿರಿ ಎಂದಿದ್ದು, ಟೆಹ್ರಾನ್ ಮೇಲೆ ದಾಳಿ ನಡೆಸುವ ಸೂಚನೆ ನೀಡಿದೆ. ಹೀಗಾಗಿ, ಇರಾನ್‌ನ ರಾಜಧಾನಿಯಲ್ಲಿರುವವರು ನಗರವನ್ನು ತೊರೆಯುತ್ತಿದ್ದಾರೆ. ಅಲ್ಲಿ, ಭಾರತೀಯರು ಕೂಡ ಸಿಲುಕಿಕೊಂಡಿದ್ದು, ಅವರೆಲ್ಲರೂ ಭಾರತೀಯ ರಾಯಭಾರಿ ಕಚೇರಿಯನ್ನು ತ್ವರಿತವಾಗಿ ಸಂಪರ್ಕಿಸುವಂತೆ ಸೂಚಿಸಲಾಗಿದೆ.
ಟೆಹ್ರಾನ್‌ನಲ್ಲಿರುವ ಎಲ್ಲ ಭಾರತೀಯ ಪ್ರಜೆಗಳು ತಕ್ಷಣವೇ ಭಾರತದ ರಾಯಭಾರ ಕಚೇರಿಯನ್ನು ಸಂಪರ್ಕಿಸಬೇಕು. ತಮ್ಮ ಸ್ಥಳ ಮತ್ತು ಸಂಪರ್ಕ ಸಂಖ್ಯೆಗಳನ್ನು ಒದಗಿಸಬೇಕು ಎಂದು ಭಾರತೀಯ ರಾಯಭಾರ ಕಚೇರಿಯು ಮಂಗಳವಾರ ಘೋಷಿಸಿದೆ. ತಮ್ಮಲ್ಲಿರುವ ಸ್ವಂತ ಸಂಪನ್ಮೂಲಗಳನ್ನು ಬಳಸಿಕೊಂಡು ಟೆಹರಾನ್‌ನಿಂದ ಹೊರಹೋಗಲು ಸಾಧ್ಯವಿರುವವರು ನಗರವನ್ನು ತೊರೆಯಬೇಕು. ಆಗದೇ ಇರುವವರು ರಾಯಭಾರಿ ಕಚೇರಿಯನ್ನು ಸಂಪರ್ಕಿಸಿ ನೆರವು ಪಡೆಯಬೇಕು ಎಂದು ಸಲಹೆ ನೀಡಿದೆ.
“ಭಾರತೀಯ ಪ್ರಜೆಗಳು ತಕ್ಷಣ ಭಾರತದ ರಾಯಭಾರ ಕಚೇರಿಯನ್ನು ಸಂಪರ್ಕಿಸಲು +989010144557; +989128109115; +989128109109, ಟೋಲ್ ಫ್ರೀ ಸಂಖ್ಯೆ, 1800118797, ಅಥವಾ ವಾಟ್ಸ್‌ಆ್ಯಪ್ ಸಂಖ್ಯೆ +91-11-23012113, +91-11-23014104, +91-11-23017905 +91-9968291988 ಹಾಗೂ situationroom@mea.gov.in ಮೂಲಕ ಸಂಪರ್ಕಿಸಬಹುದು ಎಂದು ಸೂಚಿಸಿದೆ.
ಈ ಲೇಖನ ಓದಿದ್ದೀರಾ?: ಇರಾನ್-ಇಸ್ರೇಲ್ ಸಂಘರ್ಷ ಶುರುವಾಗಿದ್ದು ಎಲ್ಲಿಂದ? ಇತಿಹಾಸದ ಹಿನ್ನೋಟ!
ಜೊತೆಗೆ, ಟೆಹರಾನ್‌ನ ತುರ್ತು ಸಹಾಯವಾಣಿ ಸಂಖ್ಯೆ: +98 9128109115, +98 9128109109; ವಾಟ್ಸ್‌ಆ್ಯಪ್ ಸಂಖ್ಯೆ: +98 901044557, +98 9015993320, +91 8086871709, +98 9177699036, +98 9396356649 ಸಂಖ್ಯೆಗಳ ಮೂಲಕವೂ ಸಂಪರ್ಕಿಸಬಹುದು ಎಂದು ತಿಳಿಸಿದೆ.