ಭಾರತದ ‘ಐ ಡ್ರಾಪ್’ ಅಮೆರಿಕದ ಕಣ್ಣಿನ ಸೋಂಕುಗಳಿಗೆ, ಸಮಸ್ಯೆಗಳಿಗೆ ಕಾರಣ : ಸಿಡಿಸಿ

Date:

Advertisements
  • ಭಾರತದ ಐ ಡ್ರಾಪ್ ಎಜ್ರಿಕೇರ್ ಆರ್ಟಿಫಿಷಿಯಲ್ ಟಿಯರ್ಸ್ ಬಳಕೆಯಿಂದ ಹಾನಿ
  • ಚೆನ್ನೈ ಮೂಲದ ಗ್ಲೋಬಲ್‌ ಫಾರ್ಮಾ ಹೆಲ್ತ್‌ಕೇರ್ ಕಂಪನಿಯಿಂದ ತಯಾರಿಕೆ

ಭಾರತದ ಐ ಡ್ರಾಪ್ ಅಮೆರಿಕದ ಕಣ್ಣಿನ ಸಮಸ್ಯೆಗಳಿಗೆ ಕಾರಣ ಎಂಬ ಆರೋಪ ಕೇಳಿ ಬಂದಿದೆ.

ಗ್ಯಾಂಬಿಯಾ ಕೆಮ್ಮಿನ ಸಿರಪ್‌ ನಂತರ ಭಾರತದಲ್ಲಿ ತಯಾರಿಸಿದ ಈ ಕಣ್ಣಿನ ಡ್ರಾಪ್ ಸದ್ದು ಮಾಡುತ್ತಿದೆ. ಏಕೆಂದರೆ ಈ ಡ್ರಾಪ್‌ ಬಳಸಿದ ಅಮೆರಿಕದ ಹಲವರು ಮೃತಪಟ್ಟಿದ್ದು 8 ಮಂದಿಗೆ ಕುರುಡುತನ ಉಂಟಾಗಿದೆ.

ಚೆನ್ನೈ ಮೂಲದ ಗ್ಲೋಬಲ್‌ ಫಾರ್ಮಾ ಹೆಲ್ತ್‌ಕೇರ್ ಕಂಪನಿ ತಯಾರಿಸಿದ ಐ ಡ್ರಾಪ್ ಎಜ್ರಿಕೇರ್‌ ಆರ್ಟಿಫಿಷಿಯಲ್‌ ಟಿಯರ್ಸ್ ಹೆಸರಿನ ಕಣ್ಣಿಗೆ ಬಿಡುವ ಹನಿಗಳು ವಿವಾದದ ಮೂಲವಾಗಿದೆ. ಇದರ ವಿರುದ್ಧ ಪ್ರಕರಣ ದಾಖಲಾಗಿದ್ದು ಅಮೆರಿಕದ 12 ರಾಜ್ಯಗಳು ತನಿಖೆ ನಡೆಸುತ್ತಿವೆ.

Advertisements

ಅಮೆರಿಕದ ವೈದ್ಯಕೀಯ ತನಿಖಾ ಸಂಸ್ಥೆಯಾದ ರೋಗಗಳ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರಗಳು (ಸಿಡಿಸಿ) ಈ ಕುರಿತು ವರದಿ ಮಾಡಿದೆ. ಈ ಹಿನ್ನೆಲೆ ಭಾರತದ ಕಣ್ಣಿನ ಡ್ರಾಪ್‌ ಬಗ್ಗೆ ತನಿಖೆ ಮಾಡಲಾಗುತ್ತಿದೆ.

ಭಾರತದ ಐ ಡ್ರಾಪ್‌ ಅನ್ನು ದೇಶದ ಕಂಪನಿಯೊಂದು ತಯಾರಿಸಿದೆ. ಈ ಕಣ್ಣಿನ ಡ್ರಾಪ್‌ಗೆ ಸಂಬಂಧಿಸಿದ ಔಷಧ ನಿರೋಧಕ ಬ್ಯಾಕ್ಟೀರಿಯಾದ ಸಂಭವನೀಯ ಪರಿಣಾಮಗಳ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಸಿಡಿಸಿ ತಿಳಿಸಿರುವುದಾಗಿ ಮಾಧ್ಯಮವೊಂದು ವರದಿ ಮಾಡಿದೆ.

ವಿವಾದವು ಭುಗಿಲೆದ್ದ ನಂತರ ಕಂಪನಿಯು ತನ್ನ ಅಧಿಕೃತ ಜಾಲತಾಣದಲ್ಲಿ ಹೇಳಿಕೆ ನೀಡಿತು. ಅಮೆರಿಕ ಮಾರುಕಟ್ಟೆಗೆ ರವಾನಿಸಿದ ಎಲ್ಲ ಎಜ್ರಿಕೇರ್ ಆರ್ಟಿಫಿಷಿಯಲ್ ಟಿಯರ್ಸ್ ಕಣ್ಣಿನ ಡ್ರಾಪ್‌ಗಳನ್ನು ಹಿಂಪಡೆಯುವುದಾಗಿ ಗ್ಲೋಬಲ್ ಫಾರ್ಮಾ ಹೆಲ್ತ್‌ಕೇರ್‌ ಘೋಷಿಸಿತ್ತು.

ಈ ಐಡ್ರಾಪ್ ಉತ್ಪಾದನೆಯನ್ನು ಕಂಪನಿಯು ಈಗ ನಿಲ್ಲಿಸಿದೆ. ಆಗ್ನೇಯ ಏಷ್ಯಾ, ಮಧ್ಯ ಅಮೆರಿಕ, ಆಫ್ರಿಕಾದಲ್ಲಿನ ಮಾರುಕಟ್ಟೆಗಳಲ್ಲಿ ಈ ಹೆಲ್ತ್‌ಕೇರ್ ಅನೇಕ ಚಿಕಿತ್ಸಕ ರೂಪಗಳಲ್ಲಿ ವ್ಯಾಪಕವಾದ ಔಷಧಿಯನ್ನು ತಯಾರಿಸುತ್ತಿತ್ತು ಮತ್ತು ವಿತರಣೆ ಮಾಡುತ್ತಿತ್ತು.

ಹಾಗಾಗಿ ಇಲ್ಲಿನ ಎಲ್ಲ ಸಗಟು ವ್ಯಾಪಾರಿಗಳು ಅಥವಾ ಗ್ರಾಹಕರು ಪಡೆಯಲಾದ ಉತ್ಪನ್ನವನ್ನು ತಕ್ಷಣವೇ ಬಳಸುವುದನ್ನು ನಿಲ್ಲಿಸುವಂತೆ ಕಂಪನಿಯು ಹೇಳಿದೆ.

ಏನಿದು ಐ ಡ್ರಾಪ್ ವಿವಾದ?

ಕಳೆದ ತಿಂಗಳು ಅಮೆರಿಕ ವೈದ್ಯಕೀಯ ತನಿಖಾ ಸಂಸ್ಥೆ ಸಿಡಿಸಿ ಕಣ್ಣಿನ ಡ್ರಾಪ್‌ಗಳಿಗೆ ಸಂಬಂಧಿಸಿ ತನಿಖೆ ಆರಂಭಿಸಿತು. ಇದು ವ್ಯಕ್ತಿಯಿಂದ ವ್ಯಕ್ತಿಗೆ ಹರಡಬಹುದು ಮತ್ತು ಸೋಂಕುಗಳಿಗೆ ಕಾರಣವಾಗಬಹುದು ಎಂಬ ವರದಿ ನೀಡಿತು.

ಭಾರತದ ಐ ಡ್ರಾಪ್‌ ವಿಷಯಕ್ಕೆ ಸಂಬಂಧಿಸಿ ತಿಂಗಳ ಹಿಂದೆ ಔಷಧ-ನಿರೋಧಕ ಬ್ಯಾಕ್ಟೀರಿಯಾದ ಅಪರೂಪದ ತಳಿಯನ್ನು ಅಮೆರಿಕದ 16 ರಾಜ್ಯಗಳ 68 ರೋಗಿಗಳಲ್ಲಿ ಗುರುತಿಸಲಾಗಿತ್ತು.

ಅದರಲ್ಲಿ ಮೂರು ಜನರು ಮೃತಪಟ್ಟರು. ಎಂಟು ಜನರು ಕುರುಡುತನದಿಂದ ಬಳಲುತ್ತಿದ್ದರು. ಈ ರೋಗಿಗಳಲ್ಲಿ ಹೆಚ್ಚಿನವರು ಭಾರತದಿಂದ ಆಮದು ಮಾಡಿಕೊಳ್ಳಲಾದ ಆರ್ಟಿಫಿಷಿಯಲ್ ಟಿಯರ್ಸ್ ಹೈ ಡ್ರಾಪ್‌ಗಳನ್ನು ಬಳಸುತ್ತಿದ್ದರು ಎಂಬುದು ತನಿಖೆ ವೇಳೆ ತಿಳಿದು ಬಂದಿದೆ.

ಈ ಸುದ್ದಿ ಓದಿದ್ದೀರಾ? ಮಾನನಷ್ಟ ಮೊಕದ್ದಮೆ; ದೋಷಾರೋಪಣೆಗೆ ತಡೆ ಕೋರಿ ಹೈಕೋರ್ಟ್‌ಗೆ ರಾಹುಲ್ ಗಾಂಧಿ ಅರ್ಜಿ

ಈ ಕುರಿತು ಮಾರ್ಚ್ 21 ರಂದು ಸಿಡಿಸಿ ವರದಿ ಬಿಡುಗಡೆ ಮಾಡಿತು. “ರೋಗಿಗಳು 10 ಕ್ಕೂ ಹೆಚ್ಚು ಬ್ರ್ಯಾಂಡ್‌ಗಳನ್ನು ಬಳಸಿದ್ದಾರೆ. ಬಹುಡೋಸ್ ಬಾಟಲಿಗಳಲ್ಲಿ ಪ್ಯಾಕ್ ಮಾಡಲಾದ ಸಂರಕ್ಷಕ-ಮುಕ್ತ, ಪ್ರತ್ಯಕ್ಷವಾದ ಉತ್ಪನ್ನವಾದ ಎಜ್ರಿಕೇರ್‌ ಆರ್ಟಿಫಿಷಿಯಲ್ ಟಿಯರ್ಸ್ ಹೆಸರಿನ ಕಣ್ಣಿನ ಡ್ರಾಪ್‌ ಬಳಸಿರುವುದು ವರದಿಯಾಗಿದೆ.

ಐ ಡ್ರಾಪ್‌ ಎಜ್ರಿಕೇರ್, ಬ್ಯಾಕ್ಟೀರಿಯಾದಿಂದ ಕಲುಷಿತಗೊಂಡಿರುವ ಸಾಧ್ಯತೆಯಿದೆ ಎಂದು ವರದಿ ಹೇಳಿದೆ. ಇದು ಕುರುಡುತನಕ್ಕೆ ಕಾರಣವಾಗಬಹುದು. ಈ ಬ್ಯಾಕ್ಟೀರಿಯಾವು ಶ್ವಾಸಕೋಶಗಳಲ್ಲಿ ಸೋಂಕನ್ನು ಉಂಟುಮಾಡುವ ಸಾಧ್ಯತೆ ಇದೆ ಎಂದು ವರದಿ ತಿಳಿಸಿದೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಯೋಧ್ಯೆ | ಆಸ್ಪತ್ರೆಗೆ ದಾಖಲಿಸಲು ನಿರಾಕರಣೆ, ತಂದೆಯ ತೋಳಿನಲ್ಲಿ ಮೃತಪಟ್ಟ ಬಾಲಕ

ತೀವ್ರವಾಗಿ ಅಸ್ಪಸ್ಥಗೊಂಡಿದ್ದ ತನ್ನ 12 ವರ್ಷದ ಪುತ್ರನನ್ನು ಸರ್ಕಾರಿ ಆಸ್ಪತ್ರೆಗೆ ಕರೆ...

ಹಿಂಸಾಚಾರ ಪ್ರಕರಣ: ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್‌ಗೆ ಜಾಮೀನು

ಪಾಕಿಸ್ತಾನದ ಮಾಜಿ ಪ್ರಧಾನಮಂತ್ರಿ ಇಮ್ರಾನ್ ಖಾನ್‌ಗೆ ಮೇ 9, 2023ರ ಹಿಂಸಾಚಾರ...

ನಟಿಗೆ ಕಿರುಕುಳ ಆರೋಪ: ಕೇರಳ ಯುವ ಕಾಂಗ್ರೆಸ್ ಅಧ್ಯಕ್ಷನ ಹುದ್ದೆ ತೊರೆದ ರಾಹುಲ್ ಮಾಂಕೂಟತ್ತಿಲ್

ಕೇರಳದ ರಾಜಕೀಯದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿರುವ ಅಶ್ಲೀಲ ಸಂದೇಶ ಹಾಗೂ ದುರ್ವರ್ತನೆ...

ನ್ಯಾಯದೇಗುಲಗಳಿಗೆ ಬಲು ಇಕ್ಕಟ್ಟಾದ ಬಾಗಿಲುಗಳ ಕಟ್ಟಿದ್ದೇವೆ- ಸಿಜೆಐ

‘ಹೈಕೋರ್ಟ್ ಜಡ್ಜ್ ಗಳ ಪೈಕಿ ಮೊಂಡರು, ಹಟಮಾರಿಗಳು, ಜಂಭದ ಕೋಳಿಗಳಿದ್ದಾರೆ...ಇನ್ನು ಕೆಲವರ...

Download Eedina App Android / iOS

X